ಸೋಮವಾರ, ಏಪ್ರಿಲ್ 19, 2021
25 °C

ವಿಶ್ವದ ಮೊದಲ ಅನಾಥ ಗ್ರಹ ಪತ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ):  ಖಗೋಳ ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಒಂಟಿಯಾಗಿರುವ `ಅನಾಥ~ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ.



ಗಾತ್ರದಲ್ಲಿ ಇದು ಗುರು ಗ್ರಹಕ್ಕಿಂತ ಏಳು ಪಟ್ಟು ದೊಡ್ಡದಾಗಿದೆ. ಇದಕ್ಕೆ ಯಾವುದೇ ಗುರುತ್ವಾಕರ್ಷಣೆಯ ಬಂಧನಗಳಿಲ್ಲ. ಈ ಒಂಟಿ ಗ್ರಹವನ್ನು `ಸಿಎಫ್‌ಬಿಡಿಎಸ್‌ಐಆರ್21549~ ಎಂದು ಹೆಸರಿಸಲಾಗಿದ್ದು, ಸದ್ಯ ಅದು ಯಾವುದೇ ನಕ್ಷತ್ರವನ್ನು ಪರಿಭ್ರಮಿಸುತ್ತಿಲ್ಲ.



ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ ಮೊದಲ ಒಂಟಿ ಗ್ರಹ ಇದಾಗಿದೆ. ಈ ಗ್ರಹದ ವಯಸ್ಸು 5ರಿಂದ 12 ಕೋಟಿ ವರ್ಷ ಹಾಗೂ  ಮೇಲ್ಮೈ ಉಷ್ಣತೆ ಸುಮಾರು 400 ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.