ಶನಿವಾರ, ಏಪ್ರಿಲ್ 10, 2021
29 °C

ವಿಶ್ವದ ಶಕ್ತಿಶಾಲಿ: ಹು ಜಿಂಟಾವೊ ಪ್ರಥಮ, ಸೋನಿಯಾ ನವಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ವಿಶ್ವದ ಜನಸಂಖ್ಯೆಯ ಐದನೇ ಒಂದು ಭಾಗವನ್ನು ಆಳುತ್ತಿರುವ ಚೀನೀ ಅಧ್ಯಕ್ಷ ಹು ಜಿಂಟಾವೋ ಅವರು ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂಬುದಾಗಿ ಪರಿಗಣಿತರಾಗಿದ್ದು, ಯುಪಿಎ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ವಿಶ್ವದ 9ನೇ ಶಕ್ತಿಶಾಲಿ ವ್ಯಕ್ತಿ ಎನಿಸಿದ್ದಾರೆ.ಅಮೆರಿಕದ ಫೋರ್ಬ್ಸ್ ನಿಯತಕಾಲಿಕದ ಸಮೀಕ್ಷೆಯಲ್ಲಿ ಈ ವಿಚಾರ ಪ್ರಕಟಗೊಂಡಿದೆ.ತತ್ಸಮಾನ ಅಧಿಕಾರ ಹೊಂದಿದ ಪಾಶ್ಚಿಮಾತ್ಯ ಧುರೀಣರಿಗೆ ವ್ಯತಿರಿಕ್ತವಾಗಿ, ಹು ಜಿಂಟಾವೋ ಅವರು ನದಿಗಳನ್ನು ತಿರುಗಿಸಬಲ್ಲರು, ನಗರಗಳನ್ನು ನಿರ್ಮಿಸಬಲ್ಲರು, ಭಿನ್ನಮತೀಯರನ್ನು ಸೆರೆಮನೆಗೆ ಅಟ್ಟಬಲ್ಲರು, ಆಡಳಿತಶಾಹಿ ಮತ್ತು ನ್ಯಾಯಾಲಯಗಳ ಹಸ್ತಕ್ಷೇಪರಹಿತವಾಗಿ ಅಂತರ್ಜಾಲವನ್ನು ಪರಾಮರ್ಶಿಸಬಲ್ಲರು ಎಂದು ಫೋರ್ಬ್ಸ್ ನಿಯತಕಾಲಿಕ ಹೇಳಿದೆ.ಕಳೆದ ವರ್ಷ ನಿಯತಕಾಲಿಕದ ಸಮೀಕ್ಷೆಯಲ್ಲಿ ಒಂದನೇ ಸ್ಥಾನದಲ್ಲಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಈ ಬಾರಿ ಹು ಜಿಂಟಾವೊ ಅವರಿಗಿಂತ  ಹಿಂದೆ ಬಿದ್ದಿದ್ದು, ಎರಡನೇ ಸ್ಥಾನಕ್ಕೆ ಸರಿದಿದ್ದಾರೆ. ಸೌದಿ ದೊರೆ ಅಬ್ದುಲ್ಲಾ ವಿಶ್ವದ ಮೂರನೇ ಶಕ್ತಿಶಾಲಿ ವ್ಯಕ್ತಿ ಎನಿಸಿದ್ದಾರೆ.ಜಗತ್ತಿನ ಶಕ್ತಿಸಾಲಿ ವ್ಯಕ್ತಿಗಳಲ್ಲಿ 9ನೇ ಸ್ಥಾನ ಪಡೆದಿರುವ ಸೋನಿಯಾ ಗಾಂಧಿ ಅವರು ನಾಲ್ಕನೇ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ತಮ್ಮ ವರ್ಚಸ್ಸನ್ನು ಇನ್ನಷ್ಟು ವೃದ್ಧಿಸಿಕೊಂಡು ನೆಹರೂ-ಗಾಂಧಿ ರಾಜಕೀಯ ವಂಶದ ನೈಜ ಉತ್ತರಾಧಿಕಾರಿ ಎನಿಸಿಕೊಂಡಿದ್ದಾರೆ ಎಂದು ನಿಯತಕಾಲಿಕ ಬಣ್ಣಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.