ಮಾಸ್ಕೊ (ಪಿಟಿಐ): ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ತಾಲ್ ಮೆಮೋರಿಯಲ್ ಚೆಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ರಷ್ಯಾದ ಅಲೆಕ್ಸಾಂಡರ್ ಮೊರೊಜೆವಿಚ್ ಅವರನ್ನು ಸೋಲಿಸಿ ಚೊಚ್ಚಲ ಗೆಲುವು ದಾಖಲಿಸಿದ್ದಾರೆ.

ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿ ಎರಡನೇ ಸುತ್ತಿನಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ವಿಶ್ವ ಚಾಂಪಿಯನ್ ಆನಂದ್ ಮೂರನೇ ಸುತ್ತಿನ ಪಂದ್ಯದಲ್ಲಿ ಚುರುಕಾದ ಪ್ರದರ್ಶನ ತೋರಿದರು.

ಮೂರನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಇಟಲಿಯ ಫ್ಯಾಬಿಯಾನೊ ಕರುವಾನಾ ಅವರು ವಿಶ್ವದ ಅಗ್ರರ್ಯಾಂಕ್ನ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ಗೆ ಆಘಾತ ನೀಡಿದರು. ಅಮೆರಿಕದ ಹಿಕಾರು ನಕಮುರ ರಷ್ಯಾದ ಸರ್ಜೆಯ್ ಕರ್ಜಾಕಿನ್ ಅವರನ್ನು ಮಣಿಸಿದರು.
ಟೂರ್ನಿಯಲ್ಲಿ ಇನ್ನೂ ಆರು ಸುತ್ತುಗಳು ಬಾಕಿ ಇದ್ದು ಅಜರ್ಬೈಜಾನ್ನ ಶಕ್ರಿಯಾರ್ ಮಮೆಡ್ಯಾರೊವ್, ಇಸ್ರೇಲ್ನ ಬೋರಿಸ್ ಗೆಲ್ಫಾಂಡ್, ಕರುವಾನಾ ಹಾಗೂ ನಕಮುರ ಅವರು ತಲಾ ಎರಡು ಪಾಯಿಂಟ್ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

ಆನಂದ್ 1.5 ಪಾಯಿಂಟ್ಹೊಂದಿದ್ದು ಜಂಟಿ ಐದನೇ ಸ್ಥಾನದಲ್ಲಿದ್ದಾರೆ. ಕಾರ್ಲ್ಸನ್ ಮತ್ತು ರಷ್ಯಾದ ದಿಮಿತ್ರಿ ಆ್ಯಂಡ್ರೆಕಿನ್ ಕೂಡಾ ಇಷ್ಟೇ ಪಾಯಿಂಟ್ ಹೊಂದಿರುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.