ಬುಧವಾರ, ಮೇ 12, 2021
24 °C

ವಿಶ್ವಸಂಸ್ಥೆ ಮಹಾಸಭೆಯ 68ನೇ ಅಧಿವೇಶನಅಧ್ಯಕ್ಷ ಜಾನ್ ಆಶೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ (ಪಿಟಿಐ): ವಿಶ್ವಸಂಸ್ಥೆ ಮಹಾಸಭೆಯ 68ನೇ ಅಧಿವೇಶನದ ಅಧ್ಯಕ್ಷರಾಗಿ ಆ್ಯಂಟಿಗುವಾ ಹಾಗೂ ಬರ್ಬುಡಾ ರಾಯಭಾರಿ ಜಾನ್ ಡಬ್ಲ್ಯು ಆಶೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.`18 ತಿಂಗಳ ನನ್ನ ಅಧಿಕಾರವಧಿಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹಾಸಭೆಯಲ್ಲಿ ಕೈಗೊಳ್ಳುವ ಕಾರ್ಯಸೂಚಿಗಳನ್ನು ಸಮರ್ಥವಾಗಿ ಜಾರಿಗೊಳಿಸುತ್ತೇನೆ. ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುತ್ತೇನೆ' ಎಂದು ಅವರು ಅಧಿಕಾರ ವಹಿಸಿಕೊಂಡ ಬಳಿಕ ಭರವಸೆ ನೀಡಿದರು.`ಯೋಜನೆಗಳ ಜಾರಿಗೆ ಎಲ್ಲಾ ರಾಷ್ಟ್ರಗಳ ವಿಶ್ವಾಸ, ಸಹಕಾರ ಅಗತ್ಯ. ಸೋಲು ಎಲ್ಲದಕ್ಕೂ ಅಂತ್ಯವಲ್ಲ. ನಾವೂ ಸಮರ್ಥರೆಂದು ತೋರಿಸುವ ಅಗತ್ಯವಿದೆ. ಅದನ್ನು ನಮ್ಮ ಕಾರ್ಯದ ಮೂಲಕ ಸಾಕಾರಗೊಳಿಸಬೇಕು' ಎಂದು ಅವರು ಕರೆ ನೀಡಿದರು.`ಸಹಸ್ರಮಾನದ ಅಭಿವೃದ್ಧಿ ಗುರಿಗಳನ್ನು (ಎಂಡಿಜಿ) ಕಾರ್ಯಗತಗೊಳಿಸುವಲ್ಲಿ ಈಗಾಗಲೇ ಸಾಕಷ್ಟು ಪಾಠ ಕಲಿತಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿ ಕಾರ್ಯಗತಗೊಳಿಸುವುದೇ ಮುಖ್ಯ ಗುರಿ' ಎಂದರು.ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಆಶೆ ಅವರಿಗೆ ಅಭಿನಂದನೆ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.