ಶನಿವಾರ, ಮೇ 8, 2021
26 °C

ವಿಶ್ವಾಸ ದ್ರೋಹ ಬಗೆದ ಮೋದಿ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಾಸ ದ್ರೋಹ ಬಗೆದ ಮೋದಿ ಸರ್ಕಾರ

ಅಹಮದಾಬಾದ್ (ಐಎಎನ್ಎಸ್): ಗುಜರಾತ್ ಮುಖ್ಯಮಂತ್ರಿ  ನರೇಂದ್ರ ಮೋದಿ ಅವರು ಶನಿವಾರ ಆರಂಭಿಸಿದ್ದ 74 ಗಂಟೆಗಳ ~ಸದ್ಭಾವನಾ ಉಪವಾಸ~ಕ್ಕೆ ಪ್ರತಿಯಾಗಿ, ಅದರ ಬೆನ್ನ ಹಿಂದೆಯೇ ಕಾಂಗ್ರೆಸ್ ನಾಯಕರು ಮಾಜಿ ಕೇಂದ್ರ ಸಚಿವ ಶಂಕರಸಿಂಗ್ ವಘೇಲಾ ಅವರ ನೇತೃತ್ವದಲ್ಲಿ ಆರಂಭಿಸಿದ್ದ ತಮ್ಮ 74 ಗಂಟೆಗಳ ಉಪವಾಸವನ್ನು ಮಂಗಳವಾರ ಅಂತ್ಯಗೊಳಿಸಿದರು.

ಇಲ್ಲಿನ ಸಾಬರಮತಿ ಆಶ್ರಮದ ಎದುರಿಗಿನ ಕಟ್ಟೆಯಲ್ಲಿ ಇಬ್ಬರು ದಲಿತ ಬಾಲಕಿಯರು ಕೊಟ್ಟ ಲಿಂಬೆ ಹಣ್ಣಿನ ರಸ ಕುಡಿದ ವಘೇಲಾ ಅವರು, ಮಂಗಳವಾರ ಬೆಳಿಗ್ಗೆ ತಮ್ಮ ಉಪವಾಸಕ್ಕೆ ಮಂಗಳ ಹಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಘೇಲಾ ಅವರು, ತಮ್ಮ ಉಪವಾಸದಿಂದ ಗುಜರಾತಿನ ಜನಕ್ಕೆ ಮೋದಿ ಸರ್ಕಾರ ಬಗೆದಿರುವ ವಿಶ್ವಾಸದ್ರೋಹವನ್ನು ಎತ್ತಿ ತೋರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಸ್ವಚ್ಛವಾದ ಆಡಳಿತಕ್ಕಾಗಿ ಅವರ ನೆಲದಲ್ಲಿ ಅವರಿಂದ ಆಯ್ಕೆಯಾದವರು ಅವರಿಗಾಗಿ ಮಾಡಿದ್ದೇನು? ಎಂಬುದನ್ನು ತಮ್ಮ ಉಪವಾಸದ ಸಂದರ್ಭದಲ್ಲಿ ಗುಜರಾತಿನ ಜನರ ಗಮನ ಸೆಳೆಯಲಾಯಿತು ಎಂದೂ ಅವರು ಹೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಹಾಜರಿದ್ದ ಕಾಂಗ್ರೆಸ್ ಪಕ್ಷದ ರಾಜ್ಯದ ನಾಯಕರು ಸರ್ಕಾರದ ಈ ವಿಶ್ವಾಸ ದ್ರೋಹವನ್ನು ಜನತೆಗೆ ತಿಳಿಸುವುದರಿಂದ ವಿಮುಖರಾಗುವುದಿಲ್ಲ. ರಾಜ್ಯದಾದ್ಯಂತ ಈ ಸಂದೇಶ ಸಾರಲು ಸೆ. 29 ರಿಂದ ಕಚ್ಛ್ ನಿಂದ ಅಭಿಯಾನ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.