ವಿಶ್ವ ಕನ್ನಡ ಸಮ್ಮೇಳನದಲ್ಲಿ ಲಾವಣ್ಯ ರಂಗಗೀತೆ
ಬೈಂದೂರು: ಮೂವತ್ತು ವರ್ಷಗಳಿಂದ ರಂಗಭೂಮಿಯಲ್ಲಿ ಅನನ್ಯ ಸಾಧನೆ ಮಾಡುವ ಮೂಲಕ ಪ್ರಸಿದ್ಧಿ ಪಡೆದಿರುವ ಇಲ್ಲಿನ ರಂಗಕಲಾ ವೇದಿಕೆ ‘ಲಾವಣ್ಯ’ ಬೆಳಗಾವಿಯಲ್ಲಿ ಇತ್ತೀಚೆಎ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ತನ್ನ ಪ್ರತಿಭೆ ಪ್ರದರ್ಶಿಸುವ ಅವಕಾಶ ಪಡೆಯಿತು.
ಅದರ ಕಲಾವಿದರು ಸಮ್ಮೇಳನದ ಭಾನುವಾರದ ಕಾರ್ಯಕ್ರಮದಲ್ಲಿ ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು. ರಂಗಕ್ಕೊಪ್ಪುವ ವೇಷ ತೊಟ್ಟ ಕಲಾವಿದರು ಹಾಡಿದ ವಿವಿಧ ಪ್ರಸಿದ್ಧ ಕನ್ನಡ ನಾಟಕಗಳ ಗೀತೆಗಳಿಗೆ ಶ್ರೋತೃಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು.
ಮೂರ್ತಿ ಬೈಂದೂರು, ಕೃಷ್ಣಮೂರ್ತಿ ಕಾರಂತ, ಮನೋಹರ, ಬಿ. ನಾಗರಾಜ ಕಾರಂತ, ಯೋಗೀಶ, ಸತ್ಯಪ್ರಸನ್ನ, ನಾಗೇಂದ್ರ ಬಂಕೇಶ್ವರ, ವಿಶ್ವನಾಥ ಆಚಾರ್ಯ ರಂಗಗೀತೆಗಳನ್ನು ಹಾಡಿದರು. ಸಂಗೀತ ನಿರ್ದೇಶಿಸಿದ ಉಪ್ಪುಂದ ಶ್ರೀನಿವಾಸ ಪ್ರಭು ಹಾರ್ಮೋನಿಯಂ ನುಡಿಸಿದರು. ಚಂದ್ರ ಬಂಕೇಶ್ವರ ಕೀಬೋರ್ಡ್ನಲ್ಲಿ, ಉಪ್ಪುಂದ ಗೋಪಾಲಕೃಷ್ಣ ಜೋಷಿ ತಬಲಾ ಮತ್ತು ಚೆಂಡೆಯಲ್ಲಿ, ಮಿಶ್ರವಾದ್ಯದಲ್ಲಿ ಬೈಂದೂರ ಗಣೇಶ ಕಾರಂತ ಮತ್ತು ಮಂಜುನಾಥ ಶಿರೂರು ಸಹಕರಿಸಿದರು. ಎಸ್. ಗಣಪತಿ ನಿರೂಪಿಸಿದರು. ‘ಲಾವಣ್ಯ’ ಅಧ್ಯಕ್ಷ ಗಿರೀಶ ಬೈಂದೂರು ತಂಡದ ನೇತೃತ್ವ ವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.