ಸೋಮವಾರ, ಜನವರಿ 20, 2020
18 °C

ವೃತ್ತಿ ಶಿಕ್ಷಣ ನೀತಿ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ವೃತ್ತಿ ಶಿಕ್ಷಣ (ಸಿಇಟಿ) ಪ್ರವೇಶ :2006ರ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನೇತೃತ್ವದಲ್ಲಿ ಪಟ್ಟಣದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬುಧವಾರ ಪಟ್ಟಣದಲ್ಲಿ ಪ್ರತಿಭಟನಾ ರಾ್ಯಾಲಿ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪಟ್ಟಣದ ಆರ್‌.ಡಿ. ಕಾಲೇಜ್‌ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಬಸ್‌ನಿಲ್ದಾಣ, ಕೆ.ಸಿ. ರಸ್ತೆ, ಗುರುವಾರ ಪೇಠ, ಸೋಮವಾರಪೇಠ, ಬಸವ ಸರ್ಕಲ್‌ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಭಿತ್ತಿಪತ್ರ ಮತ್ತು ಘೋಷಣೆಗಳ ಮೂಲಕ ವೃತ್ತಿ ಶಿಕ್ಷಣ (ಸಿಇಟಿ) ಪ್ರವೇಶ: 2006ರ ಕಾಯ್ದೆ ಜಾರಿ ಮಾಡದಂತೆ ಸರ್ಕಾರವನ್ನು ಆಗ್ರಹಿಸಿದರು.ಸರ್ಕಾರ  ವೃತ್ತಿ ಶಿಕ್ಷಣ  ಪ್ರವೇಶ ನೀತಿ ಜಾರಿಗೆ ತಂದರೆ ರಾಜ್ಯದ ಯಾವುದೇ ಖಾಸಗಿ ಅನುದಾನ ರಹಿತ ಕಾಲೇಜು­ಗಳಲ್ಲಿ ಸರ್ಕಾರಿ ಕೋಟಾದಲ್ಲಿ ಯಾವುದೇ ಸೀಟುಗಳು ಇರು ವುದಿಲ್ಲ.  ಮೊದಲ ರಾ್ಯಾಂಕ್‌ ಪಡೆದ ವಿದ್ಯಾರ್ಥಿಯೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆಯಲು ಅನಿವಾರ್ಯವಾಗಿ ಲಕ್ಷಾಂತರ ರೂಪಾಯಿ ಶುಲ್ಕ ಭರಿಸಬೇಕಾಗುತ್ತದೆ. ಹೀಗಾಗಿ ಈ ನೀತಿಯನ್ನು  ಕೈಬಿಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಚಿಕ್ಕೋಡಿ ನಗರ ಕಾರ್ಯದರ್ಶಿ ಪ್ರಶಾಂತ ಹುಕ್ಕೇರಿ, ಕಾರ್ಯಾಲಯ ಕಾರ್ಯದರ್ಶಿ ಭರತೇಶ ಶಿಂಗಾಡೆ, ಅಭಿಷೇಕ್ ಬಾಗಿ, ಶಶಿಕಲಾ ತಾಳಿಕೋಟಿ, ಪ್ರಜ್ಞಾ ಬೂದಾಳೆ, ನಾರಾಯಣ ಬಾಗಿ, ವಿನಯಗೌಡ ಪಾಟೀಲ, ವಿರೇಶ ಚೌಗಲಾ, ಅಜೀತ ದಂಡಿಮಣಿ, ಆದಿತ್ಯಾ ಪಾಟೀಲ, ಸುಧಾಕರ ಪಾಟೀಲ, ಯಲ್ಲಪ್ಪ ತಳವಾರ, ಉಮೇಶ ಹಿಂಗ್ಲಜೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಅಥಣಿ ವರದಿ: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ 2006ರ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ಕಾಯ್ದೆಯನ್ನು ವಿರೋಧಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ತಾಲ್ಲೂಕು ಘಟಕದ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಎಬಿವಿಪಿ ಘಟಕದ ನಗರ ಕಾರ್ಯದರ್ಶಿ  ಕಿರಣಸಿಂಗ ರಜಪೂತ, ಈ ಕಾಯ್ದೆ ಜಾರಿಯಿಂದ ದುರ್ಬಲ ವರ್ಗಗಳಿಗೆ ಸಂವಿಧಾನ ಬದ್ಧವಾಗಿ ನೀಡಲಾಗಿದ್ದ ಶಿಕ್ಷಣದ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ದೂರಿದರು. ಕೂಡಲೇ ಸರ್ಕಾರ ಉದ್ದೇಶಿತ ಈ ಕಾಯ್ದೆಯ ಸಾಧಕ ಬಾಧಕಗಳನ್ನು ಪರಿಗಣಿಸಿ ಜಾರಿಗೊಳಿಸುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಇಲ್ಲಿಯ ಎಸ್.ಎಸ್.ಎಂ.ಎಸ್ ಮಹಾವಿದ್ಯಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿ ಗಳು ಪಾಲ್ಗೊಂಡಿದ್ದರು. ನಂತರ ತಹಶೀಲ್ದಾರ್‌ ಅಪರ್ಣಾ ಪಾವಟೆ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಪರಶುರಾಮ ಭಂಗಿ, ಮಂಜುನಾಥ ಕೋಳಿ, ಸಂಗಯ್ಯ ಹಿರೇಮಠ, ಮಲ್ಲಿಕಾರ್ಜುನ ಗುಂಜಿಗಾಂವಿ, ಸಚಿನ ಅವಟಿ ಇತರರು ಪಾಲ್ಗೊಂಡಿದ್ದರು. ಮೂಡಲಗಿ ವರದಿ: ವೃತ್ತಿ ಶಿಕ್ಷಣ ಪ್ರವೇಶ 2006ರ ಕಾಯ್ದೆ ಅನುಷ್ಠಾನವನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕಲ್ಮೇಶ್ವರ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರಿಗೆ ಎಬಿವಿಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್. ಪಟ್ಟಣಶೆಟ್ಟಿ ಮತ್ತು ಕಾರ್ಯದರ್ಶಿ ಎಂ.ಐ. ತುಪ್ಪದ  ಮನವಿ ಸಲ್ಲಿಸಿದರು.ಕಿರಣ ವಾಣಿ, ನಿರಂಜನ ಹಿರೇಮಠ, ಲಕ್ಷ್ಮಣ ಈರಪ್ಪನ್ನವರ, ವಿಷ್ಣು ಉಜ್ಜನಕೊಪ್ಪ, ಸುರೇಶ ಬೆಳಗಲಿ, ಬಸವರಾಜ ಪಟ್ಟಣಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)