ಶುಕ್ರವಾರ, ಮಾರ್ಚ್ 5, 2021
26 °C

ವೆಂಕಟಸುಬ್ಬಯ್ಯಗೆ ಪತ್ನಿ ವಿಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೆಂಕಟಸುಬ್ಬಯ್ಯಗೆ ಪತ್ನಿ ವಿಯೋಗ

ಬೆಂಗಳೂರು: ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಪತ್ನಿ ಜಿ.ವಿ.ಲಕ್ಷ್ಮೀ (93) ಅವರು ಮಂಗಳವಾರ ನಿಧನರಾದರು. ಲಕ್ಷ್ಮೀ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯವರು. ವೆಂಕಟಸುಬ್ಬಯ್ಯ ಅವರು ಸೋದರ ಮಾವನ ಮಗಳನ್ನೇ  ವಿವಾಹವಾಗಿದ್ದರು.  ಅವರಿಬ್ಬರದು 82 ವರ್ಷಗಳ ಸುದೀರ್ಘ ದಾಂಪತ್ಯ.ಲಕ್ಷ್ಮೀ ಅವರಿಗೆ ಪತಿ, ಪುತ್ರರಾದ ಜಿ.ವಿ.ಅನಂತಸ್ವಾಮಿ, ಜಿ.ವಿ.ಅರುಣ್‌, ಪುತ್ರಿಯರಾದ ಪ್ರಭಾ ಸೋಮಶೇಖರ್‌, ಜಿ.ವಿ.ರೋಹಿಣಿ, ಐವರು ಮೊಮ್ಮಕ್ಕಳು, ಹಾಗೂ ಐವರು ಮರಿಮಕ್ಕಳು ಇದ್ದಾರೆ. ‘ತಾಯಿಯವರು ಮನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರಿಂದ ತಂದೆಗೆ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿತ್ತು.  ತಂದೆಯ ಸ್ನೇಹಿತರಾಗಿದ್ದ ಅನೇಕ ಸಾಹಿತಿಗಳು ಮನೆಗೆ ಬರುತ್ತಿದ್ದರು. ಅವರನ್ನು ಉಪಚರಿಸುವುದರಲ್ಲಿ ತಾಯಿ ಎತ್ತಿದ ಕೈ’ ಎಂದು ಅವರು ಸ್ಮರಿಸಿದರು.ಲಕ್ಷ್ಮೀ ಅವರಿಗೆ ಪತಿ, ಪುತ್ರರಾದ ಜಿ.ವಿ.ಅನಂತಸ್ವಾಮಿ, ಜಿ.ವಿ.ಅರುಣ್‌, ಪುತ್ರಿಯರಾದ ಪ್ರಭಾ ಸೋಮಶೇಖರ್‌, ಜಿ.ವಿ.ರೋಹಿಣಿ, ಐವರು ಮೊಮ್ಮಕ್ಕಳು, ಹಾಗೂ ಐವರು ಮರಿಮಕ್ಕಳು ಇದ್ದಾರೆ. ಅವರ ಅಂತ್ಯಕ್ರಿಯೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.