ಜೊಹಾನ್ಸ್ಬರ್ಗ್ : ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತದ ವೇಗಿಗಳ ಕರಾರುವಕ್ಕಾದ ದಾಳಿಗೆ ದಕ್ಷಿಣ ಆಫ್ರಿಕಾ ತಂಡ ತೀವ್ರ ಆಘಾತ ಅನುಭವಿಸಿದೆ. ಅತಿಥೇಯರು ಮೊದಲ ಇನ್ನಿಂಗ್ಸ್ನಲ್ಲಿ 230 ರನ್ಗಳಿಗೆ ಆಲೌಟ್ ಆಗಿದ್ದು, 36 ರನ್ಗಳ ಹಿನ್ನಡೆಯಾಗಿದೆ.

ಎರಡನೇ ದಿನದಾಟದಂತ್ಯಕ್ಕೆ 213ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ದ. ಆಫ್ರಿಕಾ ತಂಡ, ಶುಕ್ರವಾರ 17 ರನ್ ಸೇರಿಸುವಷ್ಟರಲ್ಲಿ ಉಳಿದ 4 ವಿಕೆಟ್ಗಳನ್ನು ಒಪ್ಪಿಸಿತು.

ಮೂರನೇ ದಿನವಾದ ಇಂದು ಉತ್ತಮ ದಾಳಿ ನಡೆಸಿದ ಅನುಭವಿ ವೇಗಿ ಜಹೀರ್ ಖಾನ್ ಮೂರು ವಿಕೆಟ್ ಪಡೆದು ಹರಿಣಗಳ ಹಿನ್ನಡೆಗೆ ಪ್ರಮುಖ ಪಾತ್ರ ವಹಿಸಿದರು. ಗುರುವಾರ ಮೂರು ವಿಕೆಟ್ ಪಡೆದಿದ್ದ ಇಶಾಂತ್ ಶರ್ಮಾ ಇಂದು ಒಂದು ವಿಕೆಟನ್ನು ಪಡೆದರು.

ಭಾರತ ತಂಡವು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು ವಿಕೆಟ್ ನಷ್ಟವಿಲ್ಲದೆ 14 ರನ್ ಕಲೆಹಾಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ http://www.prajavani.net/cricket

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.