ಶುಕ್ರವಾರ, ಏಪ್ರಿಲ್ 23, 2021
21 °C

ವೇತನ ಹೆಚ್ಚಳಕ್ಕೆ ಆಗ್ರಹ:ಜಾಡಮಾಲಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬೀದಿ ಕಸ ಗುಡಿಸುವುದು ಹಾಗೂ ಸ್ವಚ್ಛತಾ ಕಾರ್ಯವನ್ನು ಕೆಲಕಾಲ ಸ್ಥಗಿತಗೊಳಿಸಿ ಸ್ಥಳೀಯ ಗ್ರಾಮ ಪಂಚಾಯಿತಿ ಜಾಡಮಾಲಿ ಸಿಬ್ಬಂದಿ ಬುಧವಾರ ಮುಂಜಾನೆ ಏಕಾಏಕಿ ಪ್ರತಿಭಟನೆ ನಡೆಸಿದರು.ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಜಾಡಮಾಲಿ ಸಿಬ್ಬಂದಿಗೆ ಸೂಕ್ತ ವೇತನ ನೀಡಲಾ ಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದ್ದು ಮನೆತನದ ನಿರ್ವಹಣೆ ಕಷ್ಟಕರವಾಗಿ ಪರಿವರ್ತನೆಗೊಂಡಿದೆ. ಇಂತಹ ಸಂದರ್ಭದಲ್ಲಿ ತಮ್ಮ ಕೆಲಸಕ್ಕೆ ಸರಿಯಾದ ವೇತನವನ್ನು ಗ್ರಾ.ಪಂ. ಆಡಳಿತ ಮಂಡಳಿ ನೀಡುತ್ತಿಲ್ಲ ಎಂದು ಆರೋಪಿಸಿ ಜಾಡಮಾಲಿ ಸಿಬ್ಬಂದಿ ಇಲ್ಲಿಯ ಪೇಟೆ ಓಣಿಯಲ್ಲಿ ಮಿಂಚಿನ ಪ್ರತಿಭಟನೆ ನಡೆಸಿ ಆಡಳಿತ ಮಂಡಳಿಗೆ ಚುರುಕು ಮುಟ್ಟಿಸಿದರು.ಪ್ರತಿಭಟನೆಯ ವೇಳೆಯಲ್ಲಿ ಮಾತ ನಾಡಿದ ಜಾಡಮಾಲಿ ಸಿಬ್ಬಂದಿ, ತಮಗೆ ದೊರೆಯುತ್ತಿರುವ ವೇತನ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಯೋಗ್ಯ ವೇತನವನ್ನು ನೀಡುವಂತೆ ಈ ಹಿಂದೆ ಸಾಕಷ್ಟು ಬಾರಿ ಆಡಳಿತ ಮಂಡಳಿಗೆ ಮನವಿ ಮಾಡಿಕೊಂಡರೂ ಸಹ ತಮ್ಮ ಬೇಡಿಕೆಗೆ ಮನ್ನಣೆ ದೊರೆತಿಲ್ಲ. ತಮ್ಮ ಸಂಕಷ್ಟವನ್ನು ಅರಿಯುವಲ್ಲಿ ಆಡಳಿತ ಮಂಡಳಿ ನಿಷ್ಕಾಳಜಿ ವಹಿಸಿದೆ ಎಂದು ದೂರಿದ ಅವರು ಸೂಕ್ತ ವೇತನ ಪ್ರಕಟಿಸುವವರೆಗೆ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.ಈ ವೇಳೆ ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ. ಅಧ್ಯಕ್ಷ ಕುಮಾರ ಧಾರವಾಡ, ಸದಸ್ಯರು ಗಳಾದ ಎಲ್.ಎಚ್. ಹೊನ್ನಣ್ಣನವರ, ಹರೀಶ ಸುಲಾಖೆ ಮತ್ತಿತರರು ಜಾಡ ಮಾಲಿ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸದಸ್ಯರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಆವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗು ವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸದೇ ಕೆಲಕಾಲ ಪ್ರತಿಭಟನೆ ಮುಂದುವರೆಸಿದ ಜಾಡ ಮಾಲಿ ಸಿಬ್ಬಂದಿ ಕೊನೆಗೆ ತಮ್ಮ ಪಟ್ಟಿನಿಂದ ಹಿಂದಕ್ಕೆ ಸರಿದು ಮುಂದಿನ ಸೋಮವಾರದ ಒಳಗಾಗಿ ತಮ್ಮ ವೇತನವನ್ನು ಹೆಚ್ಚಳಗೊಳಿಸಬೇಕು. ಇಲ್ಲದಿದ್ದಲ್ಲಿ ಗ್ರಾ.ಪಂ. ಕಚೇರಿ ಎದುರಿಗೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು.ಪ್ರತಿಭಟನೆಯಲ್ಲಿ ಸೋಮಣ್ಣ ಮಾದರ, ಗಂಗವ್ವ ಮಾದರ, ಕೆಂಚವ್ವ ಮಾದರ, ಫಕ್ಕೀರವ್ವ ಮಾದರ, ಪರಸಪ್ಪ ಕಮತದ, ಮಂಜವ್ವ ಕೊರಚರ, ಧರ್ಮವ್ವ ಮಾದರ, ದುರುಗಪ್ಪ ಮಾದರ, ಗಿರಿಜವ್ವ ಮಾದರ, ಭರಮಗೌಡ ಪಾಟೀಲ, ಬಸವನಗೌಡ ಪಾಟೀಲ, ಸುರೇಶ ಮಾದರ, ಭರಮಪ್ಪ ಮಾದರ, ಭಿಷ್ಟಪ್ಪ ಕಮತದ, ಪ್ರಕಾಶ ಮಾದರ ಸೇರಿದಂತೆ ಇನ್ನೂ ಹಲವರು ಪಾಲ್ಗೊಂಡಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.