ತುಮರಿ: ಕರೂರು ಹೋಬಳಿಯ ತುಮರಿ ಮತ್ತು ಬ್ಯಾಕೋಡು ಸರ್ಕಾರಿ ಆಸ್ಪತ್ರೆಗಳು ವೈದ್ಯರಿಲ್ಲದ ಹಿನ್ನೆಲೆಯಲ್ಲಿ `ಪ್ರಮುಖ ಆರೋಗ್ಯ ಸೇವೆ'ಯನ್ನು ಸ್ಥಗಿತಗೊಳಿಸಿವೆ. ಪರಿಣಾಮ ಇಪ್ಪತ್ತು ಸಾವಿರ ಜನಸಂಖ್ಯೆಯನ್ನು ಹೊಂದಿರುವ ದ್ವೀಪದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ಹತ್ತು ವರ್ಷಗಳಿಂದ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಡಾ.ನಾಗಭೂಷಣ್ ಕಾರ್ಯ ನಿರ್ವಹಿಸಿದ್ದರು. ಆದರೆ, ಸಮೀಪದ ಬ್ಯಾಕೋಡು ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಕಾಲ ವೈದ್ಯರೆ ಇರಲಿಲ್ಲ. ಕಳೆದ ವಾರದವರೆಗೂ ಇಡೀ ದ್ವೀಪಕ್ಕೆ ಒಬ್ಬ ವೈದ್ಯರ ಸೇವೆ ಮಾತ್ರ ಲಭ್ಯವಾಗಿತ್ತು.

ಆದರೆ ಶನಿವಾರದಿಂದ ಡಾ.ನಾಗಭೂಷಣ್ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ರಜೆಯ ಮೇಲೆ ತೆರಳಿರುವುದರಿಂದ ದ್ವೀಪದಲ್ಲಿ ವೈದ್ಯರ ಸೇವೆಯೇ ಇಲ್ಲವಾಗಿದೆ. ಪರಿಣಾಮ ಬ್ಯಾಕೋಡು ಮತ್ತು ತುಮರಿಯ ಆಸ್ಪತ್ರೆಗಳಿಗೆ ದೂರದ ಹಳ್ಳಿಗಳಿಂದ ಆಗಮಿಸುವ ರೋಗಿಗಳಲ್ಲಿ ದಿಕ್ಕೇ ತೋಚದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದ ಸಹಜ ಕಾಯಿಲೆಗಳಾದ ಜ್ವರ, ತಲೆನೋವುಗಳಿಗೆ ಆಸ್ಪತ್ರೆಯಿಂದ ಜನರು ಮಾತ್ರೆಗಳನ್ನು ಕೇಳಿ ಪಡೆದು ಹಿಂತಿರುಗುತ್ತಿದ್ದ ದೃಶ್ಯ ಎರಡು ಆಸ್ಪತ್ರೆಯಲ್ಲಿ ಸಾಮಾನ್ಯವಾಗಿದೆ. ಸಣ್ಣ ಕಾಯಿಲೆಗೂ ಕೂಡಾ 80 ಕಿಲೋ ಮೀಟರ್ ದೂರದ ಸಾಗರದ ವಿಭಾಗೀಯ ಆಸ್ಪತ್ರೆಗೆ ಕ್ರಮಿಸಲು ಸಾಧ್ಯವೇ ಎಂಬ ಪ್ರಶ್ನೆ ಅವರದ್ದು.

ಇನ್ನು ಗರ್ಭಿಣಿಯರ ಸ್ಥಿತಿಯಂತೂ ಹೇಳತೀರದು. ಹಿಂದೆ ನುರಿತ ದಾದಿಯರು ದ್ವೀಪದಲ್ಲಿ ಹೆರಿಗೆಯ ಸಾಹಸಕ್ಕೆ ಮುಂದಾಗುತ್ತಿದ್ದರು. ಆದರೆ, ವೈದ್ಯರ ಅನುಪಸ್ಥಿತಿಯಿಂದ ಈಗ ಹೆರಿಗೆಯ ನಿರೀಕ್ಷಿತ ದಿನಕ್ಕಿಂದ ವಾರದ ಮುಂಚೆಯೇ ಸಾಗರಕ್ಕೆ ತೆರಳಬೇಕಿದೆ.

ದ್ವೀಪಕ್ಕೆ 108 ತುರ್ತು ಸೇವೆ ಕೂಡಾ ವಿಸ್ತರಿಸಿಲ್ಲದ ಕಾರಣ ಖಾಸಗಿ ವಾಹನದ ವೆಚ್ಚವು ಕೂಡಾ ಹೊರೆಯಾಗಿ ಪರಿಣಮಿಸಿದೆ. ಇನ್ನು ದ್ವೀಪದ ಎರಡು ಆಸ್ಪತ್ರೆಗಳ ಸ್ಥಿತಿ ಶೋಚನೀಯವಾಗಿದೆ. ತುಮರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬೆಡ್ ಹಾಗೂ ಬೆಡ್ಶೀಟ್ಗಳು ಹರಿದುಹೋಗಿವೆ.

ಆಸ್ಪತ್ರೆಯ ಸೋಲಾರ್ ವ್ಯವಸ್ಥೆ ಕೆಟ್ಟು ಹೋಗಿದ್ದು ರಾತ್ರಿ ಪಾಳಯದಲ್ಲಿ ಕೆಲಸ ನಿರ್ವಹಿಸುವ ನರ್ಸ್ಗಳು ಮತ್ತು ಎನ್ಆರ್ಎಚ್ಎಂ ಸಹಾಯಕಿಯರು ಮೇಣದಬತ್ತಿ ಹಚ್ಚಿಕೊಂಡು ಭಯದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.

ಆಸ್ಪತ್ರೆಯ ಹೆರಿಗೆ ವಾರ್ಡ್ ಒಳಗೊಂಡಂತೆ ಪ್ರಮುಖ ಕೊಠಡಿಗಳಿಗೆ ತೆರಳುವ ಪ್ಯಾಸೇಜ್ಗಳಲ್ಲಿ ವಿದ್ಯುತ್ಬಲ್ಪ್ಗಳಿಲ್ಲ.

ದ್ವೀಪದ ಭೌಗೋಳಿಕ ಸ್ಥಿತಿಯಲ್ಲಿ ವ್ಯವಸ್ಥಿತ ಆಸ್ಪತ್ರೆಯ ಜತೆ ಉತ್ತಮ ವೈದ್ಯರ ಸೇವೆ ಅಗತ್ಯವಾಗಿದ್ದು, ಸರ್ಕಾರ ತುರ್ತಾಗಿ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.