ಸವದತ್ತಿ: ಸದ್ಯದ ಪರಿಸ್ಥಿತಿಯಲ್ಲಿ ಮಲ ಪ್ರಭಾ ನದಿಯಿಂದ ಕುಡಿಯುವ ನೀರಿನ ಜೊತೆಗೆ ಕೃಷಿ ಹಾಗೂ ವಿದ್ಯುತ್ ಉತ್ಪಾ ದನೆಗೆ ಮಹದಾಯಿ ಜೋಡಣೆ ಅಗತ್ಯ ವಿದೆ. ಆ ನಿಟ್ಟಿನಲ್ಲಿ ಈ ಭಾಗದ ಸಮಸ್ತ ರೈತರು, ನಾಗರಿಕರು ಚಿಂತನೆ ಮಾಡು ವುದರೊಂದಿಗೆ ವ್ಯವಸ್ಥಿತ ಕಾನೂನು ಹೊರಾಟ ಮಾಡಬೇಕಿದೆ ಎಂದು ಜಯಸಿಂಗ್ ರಜಪೂತ ಹೇಳಿದರು.

ಮಿನಿ ವಿಧಾನಸೌಧದ ಎದುರು ಸೋಮವಾರ ರೈತ ಸೇನೆ ಆಯೋಜಿಸಿದ್ದ ಮಹದಾಯಿ– ಮಲಪ್ರಭಾ ಜೋಡಣೆ ಕುರಿತ ರೈತರ ಚಿಂತನ ಸಭೆಯಲ್ಲಿ ಅವರು ಮಾತನಾಡಿದರು. ಅಂದು ಮಲಪ್ರಭಾ ನದಿಗೆ ಅಣೆಕಟ್ಟೆ ನಿರ್ಮಿಸುವಾಗ ಹೊಲ, ಮನೆ ಎಲ್ಲವನ್ನು ತ್ಯಾಗ ಮಾಡಿದ ಮಹ ನೀಯರಿಗೆ ಮಹಾದಾಯಿ ಜೋಡಣೆಯ ಕುರಿತು ನೀಡಿದ ಭರವಸೆ ಇಂದಿಗೂ ಕನ ಸ್ಸಾಗಿ ಉಳಿದಿರುವುದು ಖಂಡನೀಯ ಎಂದರು.

ಮಲಪ್ರಭಾ ನದಿಗೆ ಹಳ್ಳ ಕೊಳ್ಳದಿಂದ ಬರುವ ಸುಮಾರು 7 ಟಿ.ಎಂ.ಸಿ ನೀರಿಗೆ ಅಲ್ಲಲ್ಲಿ ಚೆಕ್ ಡ್ಯಾಂ ಕಟ್ಟಲಾಗಿದೆ. ಈ ಭಾಗಕ್ಕೆ 25 ಟಿ.ಎಂ.ಸಿ ನೀರಿನ ಅವಶ್ ಯವಿದೆ. ಈ ಕುರಿತು ಇದೇ ತಿಂಗಳು ಭೇಟಿ ನೀಡುವ ಮಹದಾಯಿ ನ್ಯಾಯ ಮಂಡಳಿ ಸಮಿತಿಗೆ ಸೂಕ್ತ ಮಾಹಿತಿ ಒದಗಿಸುವದು ಅಗತ್ಯವಿದೆ. ಅದನ್ನು ಅಧಿಕಾರಿಗಳು, ಪ್ರತಿನಿಧಿಗಳು ಮಾಡ ಬೇಕಿದೆ ಎಂದರು.

ರೈತ ಸೇನಾ ಕಾರ್ಯದರ್ಶಿ ಶಂಕರಪ್ಪ ಅಂಬಲಿ ಮಾತನಾಡಿ, ಈ ಕುರಿತು ಸರ್ಕಾರದ ಗಮನಕ್ಕೆ ತಂದರೂ ಪ್ರಯೋ ಜನವಾಗಿಲ್ಲಾ. ನಮ್ಮ ಪಾಲಿನ ಹಕ್ಕನ್ನು ನಮಗೆ ಕೊಡಿ, ಈ ಬಗ್ಗೆ ಸರಿಯಾದ ಅಧ್ಯಯನದ ಜತೆ ಸ್ಥಳ ಪರಿಶೀಲನೆ ಮಾಡಿ ಈ ಭಾಗದ ಸಮಸ್ತ ಜನರ ಅನುಕೂಲಕ್ಕಾಗಿ ಮಹದಾಯಿ ನದಿ ಜೋಡಣೆಗೆ ಮುಂದಾಗಬೇಕಿದೆ ಎಂದರು.

ರೈತರ ಕಷ್ಟ ನಷ್ಟಗಳನ್ನು ಹಾಗೂ ಪರಿಹಾರದ ಕುರಿತು ಚಿಂತನೆ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಪಕ್ಷಾತೀತ ಹೋರಾಟದಲ್ಲಿ ಮಠಾಧೀಶರು, ರೈತರು, ಸಂಘ–ಸಂಸ್ಥೆಗಳು, ವಿದ್ಯಾರ್ಥಿ ಗಳು ಭಾಗವಹಿಸುವಂತೆ ಕಾನೂನು ಸಲಹೆಗಾರ ಬಸವರಾಜ ಕಬ್ಬೂರ ಕರೆ ನೀಡಿದರು. ಕಲ್ಮಠದ ಶಿವಲಿಂಗಸ್ವಾಮಿ, ಮೂಲಿ ಮಠದ ಮಲ್ಲಿಕಾರ್ಜುನ ಸ್ವಾಮಿ, ಅಜ್ಜಯ್ಯ ಸ್ವಾಮಿ, ಶ್ರೀಕಾಂತ ಹಟ್ಟಿಹೊಳಿ, ಆನಂದ ಛೋಪ್ರಾ, ಎಂ.ಟಿ ಶಿಗ್ಲಿ, ಈರಯ್ಯ ಕಾಮತಿಮಠ, ಪಂಚಪ್ಪ ಹನಸ್ಸಿ ಹಾಗೂ ರೈತರು ಪಾಲ್ಗೊಂ ಡಿದ್ದರು.

ಪಾದಯಾತ್ರೆ: ಸಭೆಗೂ ಮೊದಲು ಕಲ್ಮಠದಿಂದ ಮಿನಿ ವಿಧಾನ ಸೌಧದವರೆಗೆ ನಡದ ಪಾದಯಾತ್ರೆ ಯಲ್ಲಿ ಮಠಾಧೀಶರು, ವಿವಿಧ ಸಂಘಟ ನೆಗಳ ಪದಾಧಿಕಾರಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.