ಗುರುವಾರ , ಮೇ 6, 2021
24 °C

ವ್ಯಾನ್‌ಗೆ ಅಳವಡಿಸಿದ್ದ ಸಿಲಿಂಡರ್ ಸ್ಫೋಟ: ಇಬ್ಬರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪೇಟೆ: ಮಾರುತಿ ವ್ಯಾನ್‌ಗೆ ಅಳವಡಿಸಿದ್ದ ಅನಿಲ ಸಿಲಿಂಡರ್ ಸಿಡಿದ ಪರಿಣಾಮ ಮಹಿಳೆ ಮತ್ತು ಮಗುವಿಗೆ ತೀವ್ರವಾದ ಸುಟ್ಟು  ಗಾಯಗಳಾದ ಘಟನೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.ಕೆ.ಆರ್.ನಗರ ತಾಲ್ಲೂಕಿನ ದೊಡ್ಡಕೊಪ್ಪಲಿನ ಸಿರಾಜ್, ಪತ್ನಿ ಶಬನಾ ಮತ್ತು ಪುತ್ರ ಮೊಹಿದ್ ಅಹಮದ್ ಜೊತೆ ಕೆ.ಆರ್.ಪೇಟೆಯಿಂದ ತಮ್ಮೂರಿಗೆ  ಹಿಂದಿರುಗುವ ವೇಳೆ ಈ ಘಟನೆ ನಡೆದಿದೆ. ಶಬನಾ ಮತ್ತು ಮೊಹಿದ್‌ಗೆ ಬೆನ್ನು, ಕಾಲುಗಳಿಗೆ ತೀವ್ರ ಪ್ರಮಾಣದ ಗಾಯಗಳಾಗಿವೆ.

 

ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರಾಜ್ ಅವರಿಗೂ ಸ್ವಲ್ಪ ಪ್ರಮಾಣದ ಗಾಯಗಳಾಗಿದ್ದು,   ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಸಿಲಿಂಡರ್ ಖಾಲಿಯಾದಾಗ, ಚಾಲಕ ಪೆಟ್ರೋಲ್‌ಗೆ ಬದಲಾವಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.  ವ್ಯಾನ್ ಸಂಪೂರ್ಣಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.