ಸುಶ್ರಾವ್ಯ ಕಂಠದ ವ್ಯಾಸರಾಜ್ಗೆ ರೇಡಿಯೊ ಸಿಟಿ 91.1 ಎಫ್ಎಂ ಆಯೋಜಿಸಿದ್ದ `ರೇಡಿಯೊ ಸಿಟಿ ಸೂಪರ್ ಸಿಂಗರ್ ಆಫ್ ಬೆಂಗಳೂರು~ ಕಿರೀಟ.ರಾಯಲ್ ಮೀನಾಕ್ಷಿ ಮಾಲ್ ನಡೆಸಿದ ಗ್ರಾಂಡ್ ಫಿನಾಲೆಯಲ್ಲಿ ಅವರು `ಸೂಪರ್ ಸಿಂಗರ್~ ಆಗಿ ಹೊರಹೊಮ್ಮಿದರು. ಸಂಗೀತ ನಿರ್ದೇಶಕ ಮಣಿಕಂಠ ಕದ್ರಿ ಹಾಗೂ ಹಿನ್ನೆಲೆ ಗಾಯಕಿ ಎಂ.ಡಿ.ಪಲ್ಲವಿ ಅವರು ತೀರ್ಪುಗಾರರಾಗಿದ್ದರು.

ಬೆಂಗಳೂರಿನ ಕೇಳುಗರಿಂದ ಅತಿ ಹೆಚ್ಚು ವೋಟ್ ಹಾಗೂ ನಿರ್ಣಾಯಕರ ತೀರ್ಮಾನದ ಮೂಲಕ ವಿಜೇತ ಸ್ಥಾನಕ್ಕೆ ಏರಿದ ವ್ಯಾಸರಾಜ್ ಅವರಿಗೆ 1 ಲಕ್ಷ ರೂಪಾಯಿ ನಗದು ಹಾಗೂ ಒಂದು ವರ್ಷ ರೇಡಿಯೊ ಸಿಟಿಯ ಧ್ವನಿಯಾಗುವ ಅವಕಾಶ ದೊರೆಯಿತು.

ಫೈನಲ್ಸ್ಗೆ ಬಂದಿದ್ದ ಅಶ್ವಿನಿ, ಪೂಜಾ ರಾವ್, ಸಂಗೀತಾ, ವೈಭವ್, ವ್ಯಾಸರಾಜ್ ಹಾಗೂ ಶ್ರೀನಿಧಿ ಅವರುಗಳು ಹಾಡಿನ ಮೋಡಿಗೆ ಪ್ರೇಕ್ಷಕರು ಶರಣಾಗಿದ್ದರು. ಸಂಗೀತ, ಮಾಧುರ್ಯ ಹಾಗೂ ಖುಷಿ ತುಂಬಿದ್ದ ಕಾರ್ಯಕ್ರಮ ಇದಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ರೇಡಿಯೊ ಸಿಟಿ ಸಿಇಓ ಅಪೂರ್ವ ಪುರೋಹಿತ್, ನಾವು ಸದಾ ನಮ್ಮ ಕೇಳುಗರ ಆಕಾಂಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ನಿರೂಪಿಸುತ್ತ ಬರುತ್ತಿದ್ದೇವೆ. ಬೆಂಗಳೂರಿನಲ್ಲಿ ಅನೇಕ ಸಂಗೀತ ಪ್ರತಿಭೆಗಳಿದ್ದಾರೆ.

ಅವರನ್ನು ಬೆಳಕಿಗೆ ತರುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಂಗೀತ ಕ್ಷೇತ್ರದಲ್ಲಿ ಬೆಳೆಯಬೇಕು ಎಂಬ ಆಶಯವನ್ನು ಇರಿಸಿಕೊಂಡಿರುವ ಪ್ರತಿಭೆಗಳಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದೆ~ ಎಂದು ತಮ್ಮ ಖುಷಿ ವ್ಯಕ್ತಪಡಿಸಿದರು.

ಆರ್ಜೆಗಳಾದ ಪ್ರದೀಪ್ ಮತ್ತು ವಿನಾಯಕ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.