ಕಂದಘಾಟ್ (ಹಿಮಾಚಲ ಪ್ರದೇಶ) (ಐಎಎನ್ಎಸ್): ಬ್ರಿಟೀಷರಿಂದ 1903ರಲ್ಲಿ ಸಂಪೂರ್ಣ ಮರದಿಂದಲೇ ನಿರ್ಮಾಣಗೊಂಡ ಪಾರಂಪರಿಕ ತಾಣವಾಗಿದ್ದ ಇಲ್ಲಿನ ರೈಲು ನಿಲ್ದಾಣ ಮಂಗಳವಾರ ನಸುಕಿನಲ್ಲಿ ಬೆಂಕಿಗೆ ಆಹುತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
ಕಲ್ಕಾ- ಶಿಮ್ಲಾ ರೈಲು ಮಾರ್ಗಕ್ಕೆ ಈ ನಿಲ್ದಾಣ ಜಂಕ್ಷನ್ ಆಗಿತ್ತು. ಆದರೆ ಈ ಮಾರ್ಗದಲ್ಲಿ ಸಂಚಾರ ಸಾಮಾನ್ಯ ಮಟ್ಟದಲ್ಲಿತ್ತು.

ಶಿಮ್ಲಾದಿಂದ 25 ಕಿಮೀ ದೂರದಲ್ಲಿರುವ ಕಂದಘಾಟ್ ನಿಲ್ದಾಣದಲ್ಲಿ ಸಂಪರ್ಕ ಮತ್ತು ವಿದ್ಯುತ್ ಸೌಲಭ್ಯವನ್ನು ಶೀಘ್ರ ಮರುಸ್ಥಾಪಿಸಲಾಗುವುದು ಎಂದು ಶಿಮ್ಲಾದಲ್ಲಿರುವ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟ ಇರುಳಿನಲ್ಲಿ ಸಂಭವಿಸಿದ ಅನಾಹುತಕ್ಕೆ ಸೋಲನ್ ಜಿಲ್ಲೆಯಲ್ಲಿ ಕಲ್ಕಾ- ಶಿಮ್ಲಾ ಮಾರ್ಗದಲ್ಲಿದ್ದ ನಿಲ್ದಾಣ ಪೂರ್ಣ ಹಾನಿಗೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಈ ದುರಂತ ಸಂಭವಿಸಿರಬಹುದು ಎನ್ನಲಾಗಿದೆ. ಅಗ್ನಿಶಾಮಕ ದಳದ ಐದು ವಾಹನಗಳು ಬೆಂಕಿಯನ್ನು ನಿಯಂತ್ರಿಸಲು ಐದು ತಾಸಿಗೂ ಹೆಚ್ಚು ಕಾಲ ತೆಗೆದುಕೊಂಡವು.ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ಪಿ.ಕೆ. ಸಾಂಘ್ವಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯೂರೋಪಿಯನ್ನರು ಶಿಮ್ಲಾಕ್ಕೆ ಬರಲು ಮತ್ತು ಇಲ್ಲಿಂದ ತೆರಳಲು ಶತಮಾನದ ಹಿಂದೆಯೇ ಕಲ್ಕಾ- ಶಿಮ್ಲಾ ರೈಲು ಮಾರ್ಗ (96 ಕಿಮೀ ಉದ್ದದ ನ್ಯಾರೊಗೇಜ್)ವನ್ನು ನಿರ್ಮಿಸಲಾಗಿತ್ತು.ಆಗ ಭಾರತದಲ್ಲಿದ್ದ ಆಂಗ್ಲರಿಗೆ ಶಿಮ್ಲಾ ಬೇಸಿಗೆ ಕಾಲದ ರಾಜಧಾನಿಯೂ ಆಗಿತ್ತು. 2008ರಲ್ಲಿ ಯುನೆಸ್ಕೊ ಈ ರೈಲು ನಿಲ್ದಾಣವನ್ನು ಪಾರಂಪರಿಕ ತಾಣವೆಂದು ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.