ಸೋಮವಾರ, ಜೂನ್ 14, 2021
21 °C

ಶತಮಾನೋತ್ಸವ ಸಂಭ್ರಮದಲ್ಲಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಗರದ ಕೋಟೆ ಆಂಜನೇಯ ರಸ್ತೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಆರಂಭವಾಗಿ ಮಾರ್ಚ್ 5ಕ್ಕೆ ನೂರು ವರ್ಷ ತುಂಬಲಿದ್ದು, ಶತಮಾನೋತ್ಸವ ಆಚರಿಸುತ್ತಿರುವ ನಗರದ ಪ್ರಥಮ ಸಹಕಾರಿ ಬ್ಯಾಂಕ್‌ಯಾಗಿದೆ ಎಂದು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.1912 ಮಾರ್ಚ್ 5ರಂದು ನಗರದ ವಕೀಲ ಎಸ್.ಆರ್. ಬಾಲಕೃಷ್ಣರಾಯರ ನೇತೃತ್ವದಲ್ಲಿ ಬಿ.ಸಿ. ಕೇಶವಯ್ಯ, ಸಿ. ಸುಬ್ಬರಾವ್, ಎನ್. ಶೇಷಶಾಸ್ತ್ರಿ, ಅನಂತಯ್ಯ, ಎಚ್. ನರಸಿಂಹಯ್ಯ ಹಾಗೂ ಶಂಕರನಾರಾಯಣ ಮತ್ತಿತರರು ಸೇರಿ ಹುಟ್ಟು ಹಾಕಿದ ಸಿಟಿ ಕೋ-ಆಪರೇಟಿವ್ ಬ್ಯಾಂಕ್, ಇಂದು 9,750 ಸದಸ್ಯರನ್ನು ಒಳಗೊಂಡು ರೂ.1 ಕೋಟಿ 70 ಲಕ್ಷ ಷೇರು ಬಂಡವಾಳ ಹಾಗೂ 46 ಜನ ನೌಕರರನ್ನು ಒಳಗೊಂಡಿದೆ ಎಂದರು.ಈ ಬ್ಯಾಂಕ್ 1966ರಿಂದ ರಿಸರ್ವ್ ಬ್ಯಾಂಕ್ ಮೇಲ್ವಿಚಾರಣೆಗೆ ಒಳಪಟ್ಟಿದ್ದು, ಬ್ಯಾಂಕಿಂಗ್ ನಿಯಮಗಳನ್ನು ಪಾಲಿಸಿಕೊಂಡು ಬರಲಾಗಿದೆ. ಅಲ್ಲದೇ ಇಲ್ಲಿನ ಠೇವಣಿದಾರರಿಗೆ ರೂ. 1 ಲಕ್ಷದವರೆಗೆ ವಿಮಾ ರಕ್ಷಣೆ ನೀಡಲಾಗುತ್ತದೆ. ಸೇಫ್ ಡಿಪಾಜಿಟ್ ಲಾಕರ್ ಅಳವಡಿಕೆ, `ಎ~ ವರ್ಗದ ಸದಸ್ಯರಿಗೆ 25 ಸಾವಿರವರೆಗೆ ಅಪಘಾತ ವಿಮೆ ನೀಡುವುದಲ್ಲದೇ, ಬ್ಯಾಂಕಿನ ಕ್ಷೇತ್ರವನ್ನು ಶಿವಮೊಗ್ಗ- ಭದ್ರಾವತಿ ತಾಲ್ಲೂಕಿಗೆ ವಿಸ್ತರಿಸಲಾಗಿದೆ ಎಂದು ವಿವರಿಸಿದರು.ಬ್ಯಾಂಕಿನ ಶತಮಾನೋತ್ಸವದ ಅಂಗವಾಗಿ ಮುಂದಿನ ಎರಡು ತಿಂಗಳ ಒಳಗೆ ಅದ್ದೂರಿ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲು ತಿರ್ಮಾನಿಸಿದ್ದು, ಅದಕ್ಕಾಗಿ ರೂ.22.5 ಲಕ್ಷ ಮೀಸಲಿಡಲಾಗಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್, ಎಸ್.ಆರ್. ಕೃಷ್ಣಸಿಂಗ್, ಡಾ.ಎ.ಎನ್. ವ್ಯಾಸರಾವ್, ರುಕ್ಮಿಣಿ ವೇದವ್ಯಾಸ, ಎಸ್.ಪಿ. ಶೇಷಾದ್ರಿ, ಎಸ್.ಬಿ. ಸತ್ಯನಾರಾಯಣ, ರಿಚರ್ಡ್ ಕ್ವಾಡ್ರಸ್ ಮತ್ತಿತರರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.