ಶಿವಮೊಗ್ಗ: ಶಿವಮೊಗ್ಗ ಪೌರಾಣಿಕ ಮತ್ತು ಐತಿಹಾಸಿಕವಾಗಿ ಅತ್ಯಂತ ಪ್ರಸಿದ್ಧ ಸ್ಥಳ. ಇಲ್ಲಿನ ಪುರಾತನ ದೇವಾಲಯಗಳಲ್ಲಿ ಶಕ್ತಿದೇವತೆ ಶ್ರೀಮಾರಿಕಾಂಬೆಯ ದೇವಾಲಯ ಪ್ರಮುಖವಾದುದು. ಎಲ್ಲಾ ಜಾತಿ–ಜನಾಂಗಗಳೂ ಮಾರಿಕಾಂಬೆಯ ಭಕ್ತರು ಎನ್ನುವುದು ವಿಶೇಷವಾದದ್ದು.

ಮಾರಿಕಾಂಬೆಯ ಜಾತ್ರೆ ಮಾರ್ಚ್ 4ರಿಂದ ಆರಂಭವಾಗಲಿದ್ದು, ಮಾರ್ಚ್ 7ರವರೆಗೆ ನಡೆಯಲಿದೆ. ಈ ಜಾತ್ರೆಯನ್ನು ಸುಮಾರು 500 ವರ್ಷಗಳ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಈಗಿನ ಗಾಂಧಿಬಜಾರ್ ಹಿಂದೆ ದೊಡ್ಡಪೇಟೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅದು ಮಾರಿಕಾಂಬೆಯ ತವರು ಮನೆಯೆಂದೇ ಖ್ಯಾತಿ ಪಡೆದಿದೆ.

ವಿಶ್ವಕರ್ಮ ಸಮುದಾಯದವರು ದೇವಿಯ ವಿಗ್ರಹವನ್ನು ನಿರ್ದಿಷ್ಟಪಡಿಸಿದ ಮರದಲ್ಲಿ ನಿರ್ಮಿಸಿ, ಅದನ್ನು ಶಾಸ್ತ್ರೋಕ್ತವಾಗಿ ಪೂಜಿಸಿದ ನಂತರವೇ ಸಾರ್ವಜನಿಕರ ಪೂಜೆಗೆ ಅವಕಾಶ ಕಲ್ಪಿಸಿಕೊಡುತ್ತಿದ್ದರು ಎಂಬ ವಾಡಿಕೆಯಿದ್ದರೂ, ವಾಸ್ತವವಾಗಿ ಅಲ್ಲಿನ ಪ್ರಥಮ ಪೂಜಾವಿಧಿಯನ್ನು ನಡೆಸುತ್ತಿದ್ದವರು ಬ್ರಾಹ್ಮಣರಾಗಿದ್ದರು.

ನಾಡಿಗರ ಮನೆತನದವರು ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಮಾಡಿ, ಮಂಗಳ ದ್ರವ್ಯ ತಂದು, ಉಡಿತುಂಬಿ ಪ್ರಥಮ ಪೂಜೆಯನ್ನು ಮಾಡುತ್ತಿದ್ದರು. ಅದು ಇಂದಿಗೂ ನಡೆಯುತ್ತಿರುವ ಪದ್ಧತಿ ಯಾಗಿದೆ. ನಂತರ ಮಾರಿಕಾಂಬೆಯ ವಿಗ್ರಹವನ್ನು ನಿರ್ಮಿಸಿದ ವಿಶ್ವಕರ್ಮ ಜನಾಂಗದವರು ದೇವಿಯನ್ನು ಪೂಜಿಸುವ ಪದ್ಧತಿ ಬೆಳೆದು ಬಂದಿದೆ.

ಇಲ್ಲಿ ಪ್ರಾಣಿಬಲಿ ಕೊಡುವ ಪದ್ಧತಿಯಿತ್ತು. ಆದರೆ, ದೇವಾಲಯದ ಉದ್ಘಾಟನೆಗೆ ಆಗಮಿಸಿದ್ದ ಶೃಂಗೇರಿ ಸ್ವಾಮೀಜಿ ದೇವಾಲಯದ ಬಳಿ ಬಲಿ ನೀಡುವ ಪದ್ಧತಿಯನ್ನು ಕೈಬಿಡುವಂತೆ ತಿಳಿಸಿದ್ದರಿಂದ ಈಗ ಬಲಿ ನಿಷೇಧಿಸಲಾಗಿದೆ.

ಈ ಮೊದಲು ಮಾರಿ ಗದ್ದಿಗೆ ಎಂಬ ಸ್ಥಳದಲ್ಲಿ ಯಾವ ದೇವಾಲಯವೂ ಇರಲಿಲ್ಲ. ಆದರೆ, 1974ರಲ್ಲಿ ಮಾರಿಕಾಂಬಾ ಸೇವಾ ಸಮಿತಿ ರಚನೆಯಾದ ಮೇಲೆ ಇಲ್ಲಿ ಒಂದು ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗಿದ್ದು, ನಗರದ ಪ್ರಮುಖ ಆಕರ್ಷಣೆಯಾಗಿದೆ.

ದೇವಾಲಯದ ಕಟ್ಟಡ ನಿರ್ಮಾಣ ಕಾರ್ಯ 1981ರಲ್ಲಿ ಪ್ರಾರಂಭ ವಾಯಿತು. ಇಲ್ಲಿ ಮೂಲಗದ್ದುಗೆ ಹಿಂಭಾಗದಲ್ಲಿ ಕೃಷ್ಣಶಿಲೆಯಿಂದ ನಿರ್ಮಾಣವಾದ ಅಮ್ಮನವರ ಮೂರ್ತಿ ಕಣ್ಮನ ಸೆಳೆಯುವಂತಿದೆ. ದೇವಾಲಯದ ಒಳಭಾಗದಲ್ಲಿ ನವದುರ್ಗೆಯರ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಶ್ರೀಲಕ್ಷ್ಮಿ, ಚಂಡಿಕಾ ದುರ್ಗಾಮಾತೆ, ಆರ್ಯ ದುರ್ಗಾಮಾತೆ, ವಾಗೇಶ್ವರಿ ಮಾತೆ, ಆದಿಶಕ್ತಿ ಮಾತೆ, ಕುಮಾರಿ ದುರ್ಗಾದೇವಿ, ಭಗವತಿ ಮಾತೆ, ದುರ್ಗಾಮಾತೆ, ಮತ್ತು ಶಾರದಾ ಮಾತೆಯರ ವಿಗ್ರಹ ನೋಡಲು ಅತಿ ಸುಂದರವಾಗಿವೆ.

ಶಿಸ್ತಿನ ಶಿವಪ್ಪನಾಯಕ ಎಂಬ ಅರಸರು ಈ ಮಾರಿಕಾಂಬೆಗೆ ಪೂಜೆ ಸಲ್ಲಿಸಿಯೇ ಯುದ್ದಕ್ಕೆ ಹೊರಡು ತ್ತಿದ್ದರೆಂದು ಇತಿಹಾಸದಿಂದ ತಿಳಿದು ಬರುತ್ತದೆ.

ಜಾತ್ರೆಯ ಆಚರಣೆಗಳು ಶೂನ್ಯಮಾಸದಲ್ಲಿ ಆರಂಭವಾಗುತ್ತವೆ. ಮಡಿವಾಳ ಸಮಾಜದವರು ಕಾಡಿಗೆ ತೆರಳಿ ಮಾರಿ ವಿಗ್ರಹಕ್ಕೆ ಬೇಕಾಗುವ ಮರವನ್ನು ತರುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಕಾಡಿನಿಂದ ತಂದ ಮರವನ್ನು ಊರಿನ ಹೊರಭಾಗವಾದ ಹಳೆ ಮಂಡ್ಲಿ ಬಳಿ ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸುವ ಮೂಲಕ ಮಂಗಳ ವಾದ್ಯದೊಂದಿಗೆ ಪುರಪ್ರವೇಶಮಾಡಿ, ಗಾಂಧಿಬಜಾರ್ ವಿಶ್ವಕರ್ಮ ಸಮಾಜದ ಮಳಿಗೆ ತಂದು ವಿಗ್ರಹ ಕೆತ್ತನೆಗೆ ಕೊಡಲಾಗುವುದು. ತದನಂತರ ಮಾರಿಚಾತ್ರೆ ಒಂದುವಾರ ಇರುವಾಗ ಮಂಗಳವಾರದಂದು ದೇವಿಗೆ ಪೂಜೆ ಸಲ್ಲಿಸಿ, ಸಾರು (ಅಂಕೆ) ಹಾಕುವ ಶಾಸ್ತ್ರವನ್ನು ನಡೆಸಲಾಗುತ್ತದೆ.

ಮಾರ್ಚ್4ರ ಮಂಗಳವಾರ ಬೆಳಿಗ್ಗೆ 5ಕ್ಕೆ ಸಮಿತಿ ವತಿಯಿಂದ ಮಂಗಳ ವಾದ್ಯದೊಂದಿಗೆ ಬಿ.ಬಿ. ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಅಹ್ವಾನಿಸಲಾಗುತ್ತದೆ. ಅ ಸಮಾಜದ ಮುತ್ತೈದೆಯರು ಮಂಗಳ ದ್ರವ್ಯಾದಿಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದೊಂದಿಗೆ ಗಾಂಧಿಬಜಾರಿನ ತವರು ಮನೆಯಲ್ಲಿರುವ ಶ್ರೀಮಾರಿ ಕಾಂಬೆಗೆ ಉಡಿತುಂಬಿ, ಪೂಜೆ ಸಲ್ಲಿಸುತ್ತಾರೆ. ತದನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸುತ್ತಾರೆ.

ಮಂಗಳವಾರ ರಾತ್ರಿ 10ರವರೆಗೂ ಲಕ್ಷಾಂತರ ಮಹಿಳೆಯರು ಶ್ರೀಮಾರಿ ಕಾಂಬೆಗೆ ಮಡ್ಲಕ್ಕಿ ನೀಡಿ ತಮ್ಮ ಹರಕೆಯನ್ನು ಸಲ್ಲಿಸುತ್ತಾರೆ. ನಂತರ ಮಾರಿ ಕಾಂಬೆಯನ್ನು ರಥದಲ್ಲಿ ಕೂರಿಸಿ, ಮೆರವಣಿಗೆಯನ್ನು ಉಪ್ಪಾರ ಸಮಾಜ ಬಾಂಧವರು ಗದ್ದಿಗೆವರೆಗೂ ತರುತ್ತಾರೆ. ಈಮಧ್ಯೆ ಶ್ರೀಗಂಗಾ ಪರಮೇಶ್ವರಿ ದೇವಸ್ಥಾನದಿಂದ ಗಂಗೆಪೂಜೆಯೊಂದಿಗೆ ಅಮ್ಮನವರನ್ನು ಮಂಗಳ ವಾದ್ಯದೊಂದಿಗೆ ಎದುರುಗೊಂಡು ಗಂಗಾಮತಸ್ಥ ಸಮಾಜದವರು ಪೂಜೆ ಸಲ್ಲಿಸಿ, ಅಮ್ಮನವರ ಉತ್ಸವ ಮುಂದುವರಿಯಲು ಅವಕಾಶ ಕಲ್ಪಿಸಿಕೊಡುತ್ತಾರೆ.

ಬುಧವಾರ ಬೆಳಗಿನ ಜಾವ 4ರ ಸುಮಾರಿಗೆ ಹರಿಜನ ಸಮಾಜ ಬಾಂದವರು ಬೇವಿನುಡುಗೆಯೊಂದಿಗೆ ಆಗಮಿಸಿ ಶ್ರಿ ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ತದನಂತರ ಕುರುಬ ಜನಾಂಗದ ಶ್ರೀ ಗುತ್ಯಮ್ಮ ದೇವಾಲಯದ ಅರ್ಚಕರಾದ ಚೌಡಿಕೆ ಕುಟುಂಬದವರು ನೈವೇದ್ಯ ಮಾಡಿ ಪೂಜೆಯನ್ನು ಸಲ್ಲಿಸುತ್ತಾರೆ.

ಬುಧವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 11ರವರೆಗೆ ವಾಲ್ಮೀಕಿ ಸಮಾಜದವರು, 11ರಿಂದ 4ರವರೆಗೆ ಉಪ್ಪಾರ ಸಮಾಜದವರು, 4ರಿಂದ ರಾತ್ರಿ 11ರವರೆಗೆ ಮಡಿವಾಳ ಸಮಾಜ ದವರು ಸರದಿಯಂತೆ ನಾಲ್ಕು ದಿನಗಳ ಕಾಲ ಗದ್ದುಗೆಯಲ್ಲಿ ಪೂಜೆಯನ್ನು ಸಲ್ಲಿಸುತ್ತಾರೆ.

ಶುಕ್ರವಾರ ರಾತ್ರಿ 7ಕ್ಕೆ ಸುಮಾರಿಗೆ ಅಮ್ಮನವರಿಗೆ ಸಮಿತಿ ವತಿಯಿಂದ ಮಹಾಮಂಗಳಾರತಿ ಪೂಜಾ ಕಾರ್ಯ ನಡೆಯುತ್ತದೆ. ಜಾತ್ರೆಯ ಕೊನೆಯ ದಿನವಾದ ಮಾ.7ರ ಶನಿವಾರ ರಾತ್ರಿ 9ಕ್ಕೆ ಶ್ರೀಮಾರಿಕಾಂಬೆಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ, ಮೆರವಣಿಗೆ ಮೂಲಕ ವನಕ್ಕೆ ಕಳಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.