ಕಾರವಾರ: ಬೇಸಿಗೆ ರಜೆಯ ಬಳಿಕ ಶುಕ್ರವಾರ ವಿದ್ಯಾರ್ಥಿಗಳು ಶಾಲೆಗಳತ್ತ ಮುಖಮಾಡಿದರು. ಶಾಲೆಗೆ ಮಾವಿನ ತೋರಣಗಳನ್ನು ಕಟ್ಟಿ, ರಂಗೋಲಿ ಹಾಕಿ ಹಬ್ಬದ ವಾತಾವರಣದಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಬರಮಾಡಿ ಕೊಂಡರು.

ಇಷ್ಟು ದಿನ ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನು ತ್ತಿದ್ದ ಶಾಲೆಗಳ ಆವರಣ ಮಕ್ಕಳಿಂದ ತುಂಬಿತು. ಹೊಸ ಉತ್ಸಾಹದೊಂದಿಗೆ ಬಂದ ವಿದ್ಯಾರ್ಥಿ ಗಳು ರಜೆ ಕಳೆದ ದಿನಗಳನ್ನು ಮೆಲುಕು ಹಾಕಿದರು.

ಬೇಸಿಗೆ ರಜೆಯಲ್ಲಿ ಅಜ್ಜಿ ಮನೆ, ಪ್ರವಾಸಿ ಸ್ಥಳ, ಶಿಬಿರಕ್ಕೆ ಹೋಗಿ ಅಲ್ಲಿ ಕಲಿತ ಪಾಠ, ಪಡೆದ ಅನುಭವಗಳನ್ನು ವಿದ್ಯಾರ್ಥಿಗಳು ಪರಸ್ಪರ ವಿನಿಮಯ ಮಾಡಿಕೊಂಡರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಸೂಚನೆಯಂತೆ ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟದೊಂದಿಗೆ ಸಿಹಿಯನ್ನೂ ವಿತರಿಸಲಾ ಯಿತು. ಪ್ರಾರಂಭೋತ್ಸವದಂದು 1, 6 ಮತ್ತು 8ನೇ ತರಗತಿಗಳಿಗೆ ವಿದ್ಯಾರ್ಥಿಗಳ ದಾಖಲಾ ತಿಯೂ ನಡೆಯಿತು.

ಶಾಲೆಗಳ ವಾರ್ಷಿಕ ಯೋಜನೆ, ಶೈಕ್ಷಣಿಕ ಯೋಜನೆ ಸಿದ್ದಪಡಿಸುವುದು, ಸೇತುಬಂಧ ಕಾರ್ಯಕ್ರಮ, ತಿಂಗಳವಾರು ಶೈಕ್ಷಣಿಕ ಚಟು ವಟಿಕೆಗಳು, ವಿದ್ಯಾರ್ಥಿಗಳ ಹಾಜರಾತಿ, ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನ, ಸಮುದಾಯದತ್ತ ಶಾಲಾ ಕಾರ್ಯಕ್ರಮ, ಶಾಲೆಯಲ್ಲಿ ನಿರ್ವಹಿಸಬೇಕಾದ ಸಂಘಗಳ ಕುರಿತು ಶಿಕ್ಷಕರಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

`ಗಡಿಭಾಗದಲ್ಲಿ ಶಾಲಾ ಪ್ರಾರಂಭೋತ್ಸವ ಮಾಡಬೇಕು ಎನ್ನುವ ದೃಷ್ಟಿಯಿಂದ ತಾಲ್ಲೂಕಿನ ಮೆಡಿಶಿಟ್ಟಾದಲ್ಲಿ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿತ್ತು. ಇದೇ ಸಂದರ್ಭದಲ್ಲಿ ಗೋವಾ ರಾಜ್ಯದ ಶಾಲೆಗೆ ಹೋಗುತ್ತಿದ್ದ ಐದು ಮಕ್ಕಳ ದಾಖಲಾತಿಯೂ ನಡೆಯಿತು' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ `ಪ್ರಜಾವಾಣಿ'ಗೆ ತಿಳಿಸಿದರು.

`ಶಾಲಾ ಪ್ರಾರಂಭೋತ್ಸವ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರಿ, ಅನುದಾನಿ ಮತ್ತು ಅನುದಾನಿತ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಸಿ ಇಲಾಖೆಯ ಮಾರ್ಗಸೂಚಿಗಳನ್ನು ತಿಳಿಸಲಾಗಿತ್ತು. ಅದರಂತೆ ತಳೀರು ತೋರಣಗಳನ್ನು ಕಟ್ಟಿ ಹಬ್ಬದ ವಾತಾವರಣದಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು' ಎಂದು ಅವರು ಹೇಳಿದರು.

`ರಜೆಯಲ್ಲಿ ಅಜ್ಜಿ ಮನೆಗೆ ಹೋಗಿದ್ದೆ, ಅಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ವಿಶೇಷ ಅನುಭವ ಪಡೆದೆ. ಮತ್ತೆ ಶಾಲೆಗೆ ಬಂದಿದ್ದೇನೆ. ಮೊದಲ ದಿನವೇ ಸಹಪಾಠಿಗಳೆಲ್ಲರೂ ಭೇಟಿಯಾದರು ತುಂಬಾ ಖುಷಿಯಾಗುತ್ತಿದೆ' ಎಂದು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ನೇಹಾ `ಪ್ರಜಾವಾಣಿ'ಯ ಜತೆ ಸಂತಸ ಹಂಚಿಕೊಂಡರು.

ಸಿದ್ದಾಪುರ ವರದಿ
ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ತಾಲ್ಲೂಕಿನ ದೇವಾಸದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಪ್ರಶಾಂತ ಡಿ.ನಾಯ್ಕ ಪಠ್ಯ-ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿ ಎಂ.ಡಿ.ನಾಯ್ಕ ಮಾತನಾಡಿದರು.ಎಸ್ಡಿಎಂಸಿ ಅಧ್ಯಕ್ಷ ಎಂ.ಡಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಶಿಕ್ಷಕ ಡಿ.ಎಲ್.ಭಾಗವತ ನಿರೂಪಿಸಿದರು.

ಹಾರ್ಸಿಕಟ್ಟಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರಾರಂಭೋತ್ಸವಕ್ಕೆ ಎಸ್ಡಿಎಂಸಿ ಅಧ್ಯಕ್ಷ ಶಶಿಧರ ಪಾಟೀಲ ಜ್ಯೋತಿ ಬೆಳಗಿಸುವ ಮೂಲಕ ಹಸಿರು ನಿಶಾನೆ ತೋರಿದರು. ಸಂಪನ್ಮೂಲ ವ್ಯಕ್ತಿ ಎಂ.ಡಿ.ನಾಯ್ಕ ಪಠ್ಯ-ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರಲ್ಲದೆ,ವಿದ್ಯಾರ್ಥಿಗಳ, ಪಾಲಕರ ಕರ್ತವ್ಯದ ಬಗ್ಗೆ ತಿಳಿಸಿದರು.ಮುಖ್ಯ ಶಿಕ್ಷಕಿ ಲೀಲಾವತಿ ಹೆಗಡೆ ಉಪಸ್ಥಿತರಿದ್ದರು. ವಿ.ಟಿ.ನಾಯ್ಕ ವಂದಿಸಿದರು. ಶಾಂತಿ ಹೆಗಡೆ ಸ್ವಾಗತಿಸಿದರು.ರಾಮನಾಥ ನಾಯ್ಕ ನಿರೂಪಿಸಿದರು.

ಹೂಕಾರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯೆ ಶಾಲಿನಿ ಕೆ.ಗೌಡರ್ ಪಠ್ಯ-ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕಿ ಸವಿತಾ.ಗೌಡರ್ ಮತ್ತಿತರರು ಉಪಸ್ಥಿತರಿದ್ದರು.

ಶಿರಸಿ ವರದಿ
ಅಜ್ಜನಮನೆಯ ಬೆಟ್ಟ ಸುತ್ತಿ ಕಾಡುಹಣ್ಣು ಮೆಲ್ಲುತ್ತ, ಸುಡು ಬಿಸಿಲು ಲೆಕ್ಕಿಸದೆ ಗೆಳೆಯರೊಂದಿಗೆ ಆಟ ಆಡುತ್ತ ದಿನ ಕಳೆಯುತ್ತಿದ್ದ ಮಕ್ಕಳು ಧೂಳು ಕೊಡವಿದ ಪಾಟಿಚೀಲ ಹಿಡಿದು, ಸಮವಸ್ತ್ರ ತೊಟ್ಟು ಶುಕ್ರವಾರ ಶಾಲೆಗೆ ತೆರಳಿದರು.

ಬೆಳಿಗ್ಗೆ 8 ಗಂಟೆಯಿಂದಲೇ ಸಮವಸ್ತ್ರ ಧರಿಸಿದ ಮಕ್ಕಳು ಗುಂಪುಗುಂಪಾಗಿ ರಸ್ತೆ ಬದಿಯಲ್ಲಿ ಹರಟೆ ಹೊಡೆಯುತ್ತ ಶಾಲೆಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು. ಶಾಲೆಗೆ ಬಂದ ಮಕ್ಕಳು ಬೇಸಿಗೆ ರಜೆಯ ಅನುಭವಗಳನ್ನು ಗೆಳೆಯ- ಗೆಳತಿಯರೊಂದಿಗೆ ಹಂಚಿಕೊಂಡರು. ಮಕ್ಕಳನ್ನು ಹೊಸ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಲು ಗುರುವಾರವೇ ಶಾಲೆಗೆ ಹಾಜರಾಗಿದ್ದ ಶಿಕ್ಷಕರು ಸಂಭ್ರಮದಿಂದ ಮಕ್ಕಳನ್ನು ಬರಮಾಡಿಕೊಂಡರು.

ಹೊಸದಾಗಿ ಪ್ರವೇಶ ಪಡೆದ ಮಕ್ಕಳು ಶಾಲೆಗೆ ಬಂದು ಶಿಕ್ಷಕರ ಪರಿಚಯ ಮಾಡಿಕೊಂಡರು. ಮಧ್ಯಾಹ್ನ ಮಕ್ಕಳಿಗೆ ಸಿಹಿ ಊಟ ಉಣಬಡಿಸಲಾಯಿತು. ಅತ್ಯಂತ ಹೆಚ್ಚು ವಿದ್ಯಾರ್ಥಿಗಳಿರುವ ನಗರದ ಮಾರಿಕಾಂಬಾ ಸಂಯುಕ್ತ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಜರಾಗಿದ್ದರು. ನಗರ ಹಾಗೂ ಗ್ರಾಮಾಂತರ ಭಾಗದ ಎಲ್ಲ ಶಾಲೆಗಳಲ್ಲಿ ಹೊಸ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಉತ್ಸಾಹದಿಂದ ನಡೆಯಿತು. ಎರಡು ತಿಂಗಳಿನಿಂದ ಬಿಕೋ ಎನ್ನುತ್ತಿದ್ದ ಶಾಲೆಯ ಆವರಣದಲ್ಲಿ ಮತ್ತೆ ಮಕ್ಕಳ ಕಲರವ ಶುರುವಾಗಿದೆ.

ಯಲ್ಲಾಪುರ ವರದಿ
ಜ್ಞಾನ ಹಾಗೂ ವಿಜ್ಞಾನದ ಕೇಂದ್ರವಾಗಿ ಎಲ್ಲ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು. ಮಕ್ಕಳ ಬೆಳವಣಿಗೆಗೆ ಇದು ಪೂರಕವಾಗಿದೆ ಎಂದು ಪತ್ರಕರ್ತ ಜಗದೀಶ ನಾಯಕ ಹೇಳಿದರು.

ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳನ್ನು ಶಾಲೆಗೆ ಸ್ವಾಗತಿಸುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಶೈಕ್ಷಣಿಕ ರಂಗದಲ್ಲಿ ಪ್ರಯೋಗಾತ್ಮಕ ವಿಚಾರಗಳು ಮಕ್ಕಳ ಮೇಲೆ ಪ್ರಭಾವ ಬೀಸುವುದಾಗಿ ಹೇಳಿದ ಅವರು, ನೈಸರ್ಗಿಕವಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಒತ್ತು ನೀಡಬೇಕು, ಖಾಸಗಿ ಶಾಲೆಗಳಗಿಂತ ಸರಕಾರಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರಭಾವ ಮೆರೆಯುವುದರೊಂದಿಗೆ ಉತ್ತಮ ಫಲಿತಾಂಶ ನೀಡುತ್ತಿದ್ದಾರೆ. ಈ ಫಲಿತಾಂಶದ ಹಿನ್ನಲೆಯಲ್ಲಿ ಸರಕಾರಿ ಶಾಲೆಯ ಶಿಕ್ಷಕರ ಪಾತ್ರ ಪ್ರಮುಖವಾದ್ದದ್ದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಾದ್ಯಾಪಕ ಮೋಹನ ರಾಥೊಡ ಮಾತನಾಡಿದರು. ಶಿಕ್ಷಕರಾದ ಸೀಮಾ ನಾಯಕ, ಶ್ಯಾಮಲಾ ನಾಯಕ, ವೃಂದಾ ನಾಯ್ಕ, ವಿದ್ಯಾ ನಾಯ್ಕ, ಅನಸೂಯಾ ಮುಂತಾದವರಿದ್ದರು.

ಕುಮಟಾ ವರದಿ
`ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನದಂತೆ ಮಕ್ಕಳು ನಡೆದುಕೊಂಡರೆ ಮುಂದೆ ಅವರು ಉತ್ತಮ ನಾಗರಿಕರಾಗುವುದರಲ್ಲಿ ಅನುಮಾನ ವಿಲ್ಲ' ಎಂದು ಪುರಸಭೆ ಸದಸ್ಯ ವಿಶ್ವನಾಥ ನಾಯ್ಕ ಅಭಿಪ್ರಾಯಪಟ್ಟರು.

ಕುಮಟಾದ ನೆಲ್ಲಿಕೇರಿ ಶಾಸಕರ ಮಾದರಿ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಬರಹಗಾರ ತಿಗಣೇಶ ಮಾಗೋಡ, `ಹೆಚ್ಚಿನ ಪ್ರಜ್ಞಾವಂತರು ಸರಕಾರದ ಎಲ್ಲ ಸೌಲಭ್ಯ ಪಡೆದುಕೊಳ್ಳಲು ಮುಂದೆ ಬರುತ್ತಾರೆ. ಆದರೆ ಸರಕಾರಿ ಶಾಲೆಗೆ ತಮ್ಮ ಮಕ್ಕಳು ಕಳಿಸಲು ಹಿಂದೇಟು ಹಾಕುತ್ತಾರೆ. ಸರಕಾರಿ ಶಾಲೆಗಳೂ ಇಂದು ಉತ್ತ ಗುಣಮಟ್ಟ ಹೊಂದಿವೆ ಎನ್ನುವುದನ್ನು ಅವರು ಮನಗಾಣ ಬೇಕಾಗಿದೆ' ಎಂದರು.

ಎಸ್ಡಿಎಂಸಿ ಉಪಾಧ್ಯಕ್ಷ ಉಮೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧ್ಯಾಪಕಿ ಮಂಗಲಾ ನಾಯಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಎಸ್ಡಿಎಂಸಿ ಸದಸ್ಯ ಮಂಜುನಾಥಗೌಡ ಇದ್ದರು. ಮಕ್ಕಳಿಗೆ ಪಠ್ಯಪುಸ್ತಕಗಳ ಜೊತೆ ಸಹಿಯನ್ನೂ ಹಂಚಲಾಯಿತು.

`ನೀರಿಗೆ 30ಲಕ್ಷ ಬಿಡುಗಡೆ'
ದಾಂಡೇಲಿ: ನಗರದಾದ್ಯಂತ ನೀರು ಸರಬರಾಜು ಮಾಡಲು ಇರುವ ವಿವಿಧ ಸಮಸ್ಯೆಗಳ ನಿವಾ ರಣೆಗೆ 30 ಲಕ್ಷ ರೂಪಾಯಿ ಬಿಡುಗಡೆ ಆಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳ ತಿಳಿಸಿದ್ದಾರೆ.

ಅವರು ಪಕ್ಷದ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ರಾದ ಆರ್.ವಿ.ದೇಶಪಾಂಡೆಯವರಿಗೆ ಇತ್ತೀಚೆಗೆ ಬ್ಲಾಕ್ ಕಾಂಗ್ರೆಸ್ ಮನವಿ ಮಾಡಿತ್ತು.

ಆದ್ದರಿಂದ ಈಗ ಸಂಬಂಧಪಟ್ಟ ಇಲಾಖೆ ಯಿಂದ ಸಮಸ್ಯೆ ನಿವಾರಣೆಗೆ ಸಚಿವರು ಹಣ ಬಿಡುಗಡೆ ಮಾಡಿಸಿದ್ದಾರೆ ಎಂದರು.
ನಗರದ ಅನೇಕ ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದ ಪ್ರದೇಶಗಳಲ್ಲಿ ನೀರು ಸರಬರಾಜು ಪೈಪ್ ದುರಸ್ತಿ ಕಾರ್ಯವನ್ನು ಸಹ ಕೈಗೊಳ್ಳ ಲಾಗುವುದು ಎಂದರು.

ಮುಖಂಡರಾದ ಎಸ್.ಎಸ್.ಪೂಜಾರ, ಪ್ರೊ. ಎಸ್.ವೈ.ಹಾದಿಮನಿ, ಕರೀಂ ಅಜರೇಕರ, ಎಸ್. ಜಿ.ಕೊಪ್ಪಳ, ಅನಿಲ್ ದಂಡಗಲ್, ದಿವಾಕರ್ ನಾಯ್ಕ, ಸತ್ಯಣ್ಣ, ಇಕ್ಬಾಲ್ ಶೇಖ್ ಸತೀಶ ಭೆಂಡೆ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.