ಗೌರಿಬಿದನೂರು: ಕೇಂದ್ರ ಸರ್ಕಾರದ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಡಾ.ಪರಮಶಿವಯ್ಯ ಶಾಶ್ವತ ನೀರಾವರಿ ವರದಿಯನ್ನು ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಬೇಕು ಎಂದು ಒತ್ತಾಯಿಸಿ ಪಿನಾಕಿನಿ ಪಾಲರ್ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಾಗೂ ಇತರೆ ಸಂಘ- ಸಂಸ್ಥೆ ಸದಸ್ಯರು ಬುಧವಾರ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬಯಲು ಸೀಮೆಯ 6 ಜಿಲ್ಲೆಗಳ 2 ಕೋಟಿ ಜನರಿಗೆ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಂಡರೆ 8,299 ಕೆರೆಗಳು ಪುನಶ್ಚೇತನಗೊಳ್ಳುತ್ತವೆ. 9 ಲಕ್ಷ ತೆರೆದ ಬಾವಿ, ಕೊಳವೆ ಬಾವಿಗಳಲ್ಲಿ ಅಂತರ್ಜಲ ಅಭಿವೃದ್ಧಿಯಾಗುತ್ತದೆ. ಬತ್ತಿರುವ 18 ನದಿಗಳ ಸಾಂಪ್ರದಾಯಿಕ ಜಲ ಮೂಲಗಳು ವೃದ್ಧಿಯಾಗುತ್ತವೆ.

ಈ ಹಿನ್ನಲೆಯಲ್ಲಿ ಪರಮಶಿವಯ್ಯ ವರದಿಯನ್ನು ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿ ಪರಿಗಣಿಸಲು ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದು ಪಿನಾಕಿನಿ ಪಾಲರ್ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಚೌಡಪ್ಪ ಒತ್ತಾಯಿಸಿದರು.

ಕೋಚಿಮುಲ್ ನಿರ್ದೇಶಕ ಎಸ್.ರಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್.ನಿರಂಜನ್, ಪಟ್ಟಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ.ಸತೀಶ್, ಕಮಲಾಕರ್, ದಲಿತ ಮುಖಂಡ ಸಿ.ಜಿ.ಗಂಗಪ್ಪ, ನಿವೃತ್ತ ಪ್ರಾಂಶುಪಾಲ ಜಯರಾಮಯ್ಯ, ಕ್ಯಾಪ್ಟನ್ ಸತೀಶ್, ರೈತ ಸಂಘದ ಮುಖಂಡ ಮುದ್ದರಂಗಪ್ಪ, ಕಡಬೂರು ಅಶ್ವತ್ಥಪ್ಪ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.