ಬೆಳಗಾವಿ: ರಸ್ತೆಯ ಮೇಲೆ ಅತ್ತಿಂದಿತ್ತ ನರ್ತನ ಮಾಡುವ ಕಸ, ಅವುಗಳಲ್ಲಿರುವ ಆಹಾರ ತಿನ್ನಲು ಕಿತ್ತಾಡುವ ನಾಯಿ- ಹಂದಿಗಳ ದಂಡು; ತಲೆ ಕೆಳಗಾಗಿ ಬಿದ್ದುಕೊಂಡಿರುವ ತ್ಯಾಜ್ಯ ತೊಟ್ಟಿಗಳು...

ಇಲ್ಲಿನ ಶಾಹುನಗರದಲ್ಲಿ ಒಂದು ಸುತ್ತು ಹಾಕಿದರೆ, ಇಂಥ ಹಲವು ದೃಶ್ಯಗಳು ಕಣ್ಣಿಗೆ ರಾಚುತ್ತವೆ. ಶಾಹುನಗರದ ನಿವಾಸಿಗಳು ನಿತ್ಯ ಅನುಭವಿಸುತ್ತಿರುವ ನರಕಯಾತನೆಯ ದರ್ಶನವಾಗುತ್ತದೆ. ಎರಡನೇ ರಾಜಧಾನಿ ಎನಿಸಿಕೊಳ್ಳಲು ಸಜ್ಜಾಗುತ್ತಿರುವ ಬೆಳಗಾವಿ ನಗರದ ಅಭಿವೃದ್ಧಿಯಲ್ಲೇ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಆದರೆ, ಮಹಾನಗರ ಪಾಲಿಕೆಯ ಅಧಿಕಾರಿಗಳಿಂದ ಶಾಹುನಗರವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, `ಅಭಿವೃದ್ಧಿ'ಗೆ ಒಂದು ಕಪ್ಪು ಚುಕ್ಕೆ ಇಟ್ಟಂತಿದೆ.

ಶಾಹುನಗರದ ಮುಖ್ಯ ರಸ್ತೆಯ ಪಕ್ಕದಲ್ಲಿ ಇಟ್ಟಿರುವ ಸಣ್ಣ ಕಸದ ತೊಟ್ಟಿ ತುಂಬಿ ರಸ್ತೆಯ ಸುತ್ತಲೆಲ್ಲ ಹರಡಿಕೊಂಡರೂ ಇದರತ್ತ ಯಾರೂ ಗಮನ ಹರಿಸುತ್ತಿಲ್ಲ. ಅದರ ಸಮೀಪದಲ್ಲೇ ನಿತ್ಯ ತರಕಾರಿ ಮಾರಾಟ ಮಾಡಲು ಕುಳಿತುಕೊಳ್ಳುವ ವ್ಯಾಪಾರಿಗಳು ಹಾಗೂ ಸ್ಥಳೀಯ ನಾಗರಿಕರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತೊಟ್ಟಿಯಿಂದ ಹೊರಗೆ ಚೆಲ್ಲಿರುವ ಕಸದ ಪೊಟ್ಟಣಗಳನ್ನು ಬೀದಿ ನಾಯಿಗಳು ತಿನ್ನಲು ಪರಸ್ಪರ ಕಚ್ಚಾಡುತ್ತಿರುತ್ತವೆ. ಹೀಗಾಗಿ ಕಸದ ರಾಶಿಯ ನಡು ರಸ್ತೆಯವರೆಗೂ ಒಮ್ಮಮ್ಮೆ ಬಂದು ಬೀಳುತ್ತಿವೆ. ಇದರಿಂದಾಗಿ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ಶಾಹುನಗರದ ಬಡಾವಣೆಯಲ್ಲಿ ಕೆಲವೆಡೆ ಸಣ್ಣ ಕಸದ ತೊಟ್ಟಿಯನ್ನು ಇಡಲಾಗಿದೆ. ಇವು ತುಂಬಿ ಕಸ ಹೊರಗೆ ಚೆಲ್ಲಿದರೂ ಪೌರ ಕಾರ್ಮಿಕರು ಒಯ್ಯುತ್ತಿಲ್ಲ. ಇದರಿಂದಾಗಿ ಸುತ್ತಲಿನ ಮನೆಯವರೆಗೆ ದುರ್ನಾಥ ಬೀರುತ್ತಿದೆ.

ಶಾಹುನಗರದಲ್ಲಿ ಮನೆ ಬಾಗಿಲಿಗೆ ಬಂದು ಕಸ ಒಯ್ಯುವ ಪದ್ಧತಿ ಸಮರ್ಪಕವಾಗಿ ನಡೆಯುತ್ತಿಲ್ಲ. ಹೀಗಾಗಿ ಜನರು ಕಸವನ್ನು ಸಮೀಪದ ಕಸದ ತೊಟ್ಟಿಗೆ ಹೋಗಿ ಎಸೆಯುತ್ತಿದ್ದಾರೆ. ಆದರೆ, ಕೆಲವೆಡೆ ಸಣ್ಣ ಕಸದ ತೊಟ್ಟಿಗಳು ತಲೆಕೆಳಗಾಗಿ ಬಿದ್ದಿಕೊಂಡಿರುವುದನ್ನು ಕಾಣಬಹುದು. ಇನ್ನು ಕೆಲವು ಹಳೆಯ ತೊಟ್ಟಿಗಳನ್ನು ಮನಸ್ಸಿಗೆ ಬಂದಂತೆ ರಸ್ತೆ ಪಕ್ಕದಲ್ಲಿ ಎಸೆಯಲಾಗಿದೆ.

ಮತ್ತೆ ಕೆಲವು ತೊಟ್ಟಿಗಳ ನಡುವೆ ರಂದ್ರಗಳು ಬಿದ್ದಿರುವುದರಿಂದ ಕಸ ಹೊರಗಡೆ ಬರುತ್ತಿವೆ. ಇದರಿಂದಾಗಿ ಜನರು ತೊಟ್ಟಿಯ ಬಳಿ ಬಂದು ಕಸ ಎಸೆಯುವುದರ ಬದಲು ದೂರಲ್ಲೇ ನಿಂತು ಎಸೆಯುವಂತಾಗಿದೆ.

`ಶಾಹುನಗರದಲ್ಲಿ ತ್ಯಾಜ್ಯ ನಿರ್ವಹಣೆ ಸಮಸ್ಯೆ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಖಾಲಿ ನಿವೇಶನ, ರಸ್ತೆಗಳ ಮೇಲೆ ಕಸ ಎಸೆಯುತ್ತಿರುವುದರಿಂದ ಚರಂಡಿಗಳು ಕಟ್ಟಿಕೊಳ್ಳುತ್ತಿವೆ. ಇದರಿಂದಾಗಿ ಹಂದಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಬಡಾವಣೆಯಲ್ಲಿ ದೊಡ್ಡ ಕಸದ ತೊಟ್ಟಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಟ್ಟು, ನಿತ್ಯ ಅವುಗಳಿಂದ ಕಸವನ್ನು ತೆಗೆದುಕೊಂಡು ಹೋಗಬೇಕು.

ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಲಿಖಿತವಾಗಿ ನಾವು ಮನವಿ ಸಲ್ಲಿಸಿದ್ದೇವೆ. ಆದರೆ, ಇದುವರೆಗೂ ಅವರು ಇತ್ತ ಕಡೆ ಗಮನ ಹರಿಸಿಲ್ಲ' ಎಂದು ಶಾಹುನಗರ ರಹವಾಸಿಗಳ ಸಂಘದ ಅಧ್ಯಕ್ಷ ಡಾ. ಎಸ್.ವಿ. ದಿವೇಕರ ವಿಷಾದ ವ್ಯಕ್ತಪಡಿಸುತ್ತಾರೆ.

`ಅಜಮ್ನಗರದಿಂದ ಕ್ರಿಶ್ಚನ್ ಕಾಲೋನಿಯನ್ನು ಸಂಪರ್ಕಿಸುವ ಮುಖ್ಯ ರಸ್ತೆ ಅಗಲಗೊಳಿಸುವ ಕಾರ್ಯವನ್ನು ಮಳೆಗಾಲದ ಮೊದಲೇ ಮುಗಿಸುವುದಾಗಿ ಪಾಲಿಕೆಯ ಸಿಟಿ ಎಂಜಿನಿಯರ್ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಈ ಕೆಲಸ ನಡೆದಿಲ್ಲ.

ವಿನಾಯಕನಗರದಿಂದ ಶಾಹುನಗರ ಹಾಗೂ ಅಜಮ್ನಗರವನ್ನು ಸಂಪರ್ಕಿಸುವ 60 ಅಡಿ ಅಗಲದ ರಸ್ತೆಯನ್ನು ಶೀಘ್ರವೇ ಸರಿಪಡಿಸದಿದ್ದರೆ, ಅತಿಕ್ರಮಣ ನಡೆಯುವ ಸಾಧ್ಯತೆ ಇದೆ. ಕನಿಷ್ಠ ಪಕ್ಷ ಬಡಾವಣೆಯ ರಸ್ತೆಗಳಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಹೊಂಡಗಳನ್ನಾದರೂ ಕೂಡಲೇ ಮುಚ್ಚಬೇಕು' ಎಂದು ಡಾ. ದಿವೇಕರ ಒತ್ತಾಯಿಸುತ್ತಾರೆ.

`ಬಡಾವಣೆಯ ಗಣೇಶ ಮಂದಿರದ ಬಳಿಯ ಖಾಲಿ ಇರುವ ನಿವೇಶನದಲ್ಲಿ ಹೊಸ ಉದ್ಯಾನ ನಿರ್ಮಿಸುವ ಕೆಲಸ ಪ್ರಗತಿಯಲ್ಲಿ ಇಲ್ಲ. ಉದ್ಯಾನಕ್ಕೆ ಇನ್ನೂ ಆವರಣ ಗೋಡೆ ನಿರ್ಮಾಣಗೊಂಡಿಲ್ಲ. ಹೀಗಾಗಿ ಇದರ ಕಾಮಗಾರಿಯ ಮಾಹಿತಿಯನ್ನು ನಮಗೆ ನೀಡಿದರೆ, ಕೆಲಸದ ಮೇಲೆ ನಿಗಾ ವಹಿಸಲು ಅನುಕೂಲವಾಗುತ್ತದೆ' ಎಂದು ಡಾ. ದಿವೇಕರ ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.