ಶನಿವಾರ, ಏಪ್ರಿಲ್ 10, 2021
33 °C

ಶಿಕಾರಿಪುರ: ಮಳೆಗಾಗಿ ಪ್ರಾರ್ಥಿಸಿ ಪರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕಾರಿಪುರ: ಪಟ್ಟಣದಲ್ಲಿ ಮಳೆಯ ಆಗಮನಕ್ಕಾಗಿ ಪ್ರಾರ್ಥಿಸಿ ಸೋಮವಾರ ದೊಡ್ಡಕೇರಿ ಗಿಡ್ಡೇಶ್ವರ ದೇವಸ್ಥಾನ ಸಮಿತಿ ಹಾಗೂ ಕುರುಬ ಸಮುದಾಯದಿಂದ ಗಿಡ್ಡೇಶ್ವರ ಹಾಗೂ ಶಿರಸಿ ಮಾರಿಕಾಂಬಾ ದೇವರ ಪಲ್ಲಕ್ಕಿ ಮೆರವಣಿಗೆ ಹಾಗೂ ಪರವು ನಡೆಯಿತು.ಮಳೆಗಾಗಿ ಪ್ರಾರ್ಥಿಸಿ ನೂರಾರು ಭಕ್ತರಿಂದ ಬೆಳಿಗ್ಗೆಯಿಂದಲೇ ಗಿಡ್ಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೇರವೇರಿತು. ನಂತರ ಗಿಡ್ಡೇಶ್ವರ ಹಾಗೂ ಶಿರಸಿ ಮಾರಿಕಾಂಬಾ ದೇವರನ್ನು ಪಲ್ಲಕ್ಕಿಯಲ್ಲಿ  ಹೊತ್ತ ಭಕ್ತರು ಭಜನೆ, ಡೊಳ್ಳು ಕುಣಿತ ಕಲಾ ಮೇಳಗಳೊಂದಿಗೆ ಮೆರವಣಿಗೆ ನಡೆಸಿ, ಶಿವಗಿರಿ ಕಲ್ಯಾಣಮಂಟಪದ ಹತ್ತಿರ ಹೊಳೆ ಪೂಜೆ ನೇರವೇರಿಸಿದರು.ನಂತರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ದೇವರ ಹರಕೆ ಹೊತ್ತ ಮಹಿಳೆಯರು ಪೂರ್ಣಕುಂಭ ಹೊತ್ತು ದೇವರನ್ನು ಸ್ಮರಿಸುತ್ತಾ ಸಾಗಿದರು.

ಬೀದಿಗಳಲ್ಲಿ ಸಂಚರಿದ ವೇಳೆ ಮೈಲಾರಲಿಂಗ ದೇವರನ್ನು ಪ್ರಾರ್ಥಿಸಿ ಗೊರವಯ್ಯ ಅವರು ಬಾಳೆಹಣ್ಣು, ತುಪ್ಪ ಹಾಗೂ ಸಕ್ಕರೆ ಮಿಶ್ರಣದ ಹಣ್ಣು ತುಪ್ಪವನ್ನು ತಯಾರಿಸಿ ದೇವರ ನೈವೇದ್ಯ ಮಾಡಿ ಹಂಚಿದರು.

ಮೆರವಣಿಗೆ ದೇವಸ್ಥಾನಕ್ಕೆ ಮರಳಿದ ನಂತರ, ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.