ಮಂಗಳವಾರ, ಮೇ 11, 2021
24 °C

ಶಿಕ್ಷಕರ ಬಡಾವಣೆ ನಿರ್ಮಿಸಲು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ:  `ಮನುಷ್ಯ ನೆಮ್ಮದಿಯಾಗಿ ಬದಕಲು ಮನೆ ಬೇಕು. ಕನಸಿನ ಮನೆ ನಿರ್ಮಾಣಕ್ಕೆ ಸುಸಜ್ಜಿತ ಬಡಾವಣೆ ಅಭಿವೃದ್ಧಿ ಅಗತ್ಯ~ ಎಂದು ಕೇಂದ್ರದ ಮಾಜಿ ಸಚಿವ ಅಂಬರೀಷ್ ಹೇಳಿದರು. ಪಟ್ಟಣದ ಹೊರವಲಯದ ಶ್ರೀನಿವಾಸಪುರ ಬಳಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಂಘ ಹಾಗೂ ಅಮರಾವತಿ ಡೆವಲಪರ್ಸ್‌ ಜಂಟಿಯಾಗಿ ನಿರ್ಮಿಸುತ್ತಿರುವ ಶಿಕ್ಷಕರ ಬಡಾವಣೆಗೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.`ಶಿಕ್ಷಕ ವೃತ್ತಿ ಬಗೆಗೆ ನನಗೆ ಅಪಾರ ಗೌರವವಿದೆ. ಅಷ್ಟೇನು ವಿದ್ಯಾವಂತನೂ, ಬುದ್ಧಿವಂತನೂ ಅಲ್ಲದ ನನ್ನನ್ನು ಶಿಕ್ಷಕರ ಬಡಾವಣೆಯ ಶಂಕುಸ್ಥಾಪನೆಗೆ ಆಹ್ವಾನಿಸಿರುವುದು ನಿಮ್ಮ ಹೃದಯ ವೈಶ್ಯಾಲತೆಗೆ ಸಾಕ್ಷಿ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಬಡಾವಣೆ ನಕ್ಷೆ ಅನಾವರಣಗೊಳಿಸಿ, `ಶಿಕ್ಷಕರ ಬಡಾವಣೆಯಲ್ಲಿ ಭವಿಷ್ಯದ ದೃಷ್ಟಿಯಿಂದ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಬೇಕು~ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕಿ ಕಲ್ಪನಾ ಸಿದ್ದರಾಜು ಮಾತನಾಡಿ, ಕಡಿಮೆ ವೆಚ್ಚದಲ್ಲಿ ಶಿಕ್ಷಕರಿಗೆ ಸುಸಜ್ಜಿತ ನಿವೇಶನಗಳು ದೊರಕಲಿ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಗೋಪಾಲ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬೋರೇಗೌಡ ಮಾತನಾಡಿದರು.ಅಮರಾವತಿ ಡೆವಲಪರ್ಸ್‌ ವ್ಯವಸ್ಥಾಪಕ ನಿರ್ದೇಶಕ ಸಿ.ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೋದಂಡರಾಮ, ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಮಲ್ಲಿಕಾರ್ಜುನ ರಾವ್, ಸಂಘದ ಅಧ್ಯಕ್ಷ ಎಚ್. ಟಿ.ನಾಗೇಂದ್ರರಾವ್,  ಉಪಾಧ್ಯಕ್ಷ ಕೆ.ಬಿ.ಅಶೋಕ್‌ಕುಮಾರ್, ಗೌರವ ಕಾರ್ಯದರ್ಶಿ ಎಚ್. ಟಿ.ಗುರುಲಿಂಗಯ್ಯ ಮತ್ತು ಪದಾಧಿಕಾರಿಗಳು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.