ಮಂಗಳವಾರ, ಜನವರಿ 28, 2020
19 °C

ಶಿಕ್ಷಣ: ವಿಕಸನದ ದಾರಿಯಾಗಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜರಾಜೇಶ್ವರಿನಗರ: `ಶಿಕ್ಷಣ ಎಂದರೆ ಕೇವಲ ಓದು ಬರಹಗಳಷ್ಟೇ ಅಲ್ಲ; ಅದು ಒಬ್ಬ ವ್ಯಕ್ತಿಯ ವಿಕಸನದ ದಾರಿಯಾಗಬೇಕು~ ಎಂದು ಕಲಾವಿದ ಬಿ.ಕೆ.ಎಸ್.ವರ್ಮ ಅಭಿಪ್ರಾಯ ಪಟ್ಟರು.ಕೊಬಾಲ್ಟ್ ಕಲಾ ಸಂಸ್ಥೆಯ 5ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.`ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಶಿಕ್ಷಣದ ಜತೆ ಕಲೆ ಸಂಸ್ಕೃತಿಗಳೂ ಅವಶ್ಯ~ ಎಂದು ಅವರು ಈಸಂದರ್ಭದಲ್ಲಿ ಹೇಳಿದರು.ಚಿತ್ರನಟ ರಾಮಕೃಷ್ಣ ಬಹುಮಾನ ವಿತರಿಸಿ ಮಾತನಾಡಿದರು. ಕಾಂಗ್ರೆಸ್‌ನ ರಾಜರಾಜೇಶ್ವರಿನಗರ ಬ್ಲಾಕ್ ಅಧ್ಯಕ್ಷ ಎಂ.ರಾಜಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಎಸ್.ಐ.ಬಾವಿಕಟ್ಟಿ, ಸಂಸ್ಥೆಯ ಸ್ಥಾಪಕ ಗಣಪತಿ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಐದು ಮಕ್ಕಳಿಗೆ ಕೊಬಾಲ್ಟ್ ಪ್ರಶಸ್ತಿ ಗಳನ್ನು ನೀಡಲಾಯಿತು.

 

ಪ್ರತಿಕ್ರಿಯಿಸಿ (+)