ಶಿರ್ವ: ಶಿರ್ವ ರೋಟರಿ ಸಂಸ್ಥೆಗೆ 2012-13ನೇ ಸಾಲಿನ ಉತ್ತಮ ಸಾಧನೆಗೆ ಜಿಲ್ಲಾ ಪ್ರಶಸ್ತಿ ಲಭಿಸಿದ್ದು, ರೋಟರಿ ಅಧ್ಯಕ್ಷ ಮತಾಯಸ್ ಲೋಬೊ, ಕಾರ್ಯದರ್ಶಿ ಎಸ್.ಪಾಂಡುರಂಗ ಕಾಮತ್ ಬಳಗವನ್ನು ಅಭಿನಂದಿಸಲಾಯಿತು.

ಶಿರ್ವ ಹೋಟೆಲ್ ಮಿಲನ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರೋಟರಿ ಕುಟುಂಬ ಸಮ್ಮಿಲನ- ಅಭಿನಂದನೆ ಕಾರ್ಯಕ್ರಮ ದಲ್ಲಿ ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಬಿ.ಪುಂಡಲೀಕ ಮರಾಠೆ ಮಾತನಾಡಿ, ಶತಮಾನೋತ್ತರ ಇತಿಹಾಸವಿರುವ ಅಂತರರಾಷ್ಟ್ರೀಯ ರೋಟರಿ ಸೇವಾ ಸಂಸ್ಥೆಯ ಸದಸ್ಯತ್ವ ಪಡೆಯುವುದು ವ್ಯಕ್ತಿಗೆ ಸಿಗುವ ಶ್ರೇಷ್ಠ ಗೌರವ ಎಂದರು.

ರೋಟರಿಯಲ್ಲಿ ಪ್ರತೀ ವರ್ಷ ಅಧಿಕಾರ ಬದಲಾವಣೆಯಾ ಗುತ್ತಿರುವು ದರಿಂದ ಹೊಸ ವಿಚಾರಗಳೊಂದಿಗೆ ಜವಾಬ್ದಾರಿ ಯುತ ನಾಯಕರ ನಿರ್ಮಾಣವಾಗುತ್ತಿದ್ದಾರೆ ಎಂದರು. ಸೇವೆ, ಸಹಬಾಳ್ವೆ, ಪ್ರೀತಿ ವಿಶ್ವಾಸದೊಂದಿಗೆ ವಿಶ್ವಮಾನವತೆಯ ಶಾಂತಿ ಸಂದೇಶ ರೋಟರಿಯು ನೀಡುತ್ತಿದೆ ಎಂದರು. ನಿಯೋಜಿತ ರೋಟರಿ ಅಧ್ಯಕ್ಷ ಲಿಯೊ ನೊರೋನ್ನಾ, ವಿಲಿಯಮ್ ಮಚಾದೊ ಅಭಿನಂದಿಸಿದರು. ಕಾರ್ಯದರ್ಶಿ ಎಸ್.ಪಿ.ಕಾಮತ್ ತಮ್ಮ ರೋಟರಿ ಅನುಭವ ತಿಳಿಸಿದರು.

ರೋಟರಿ ಅಧ್ಯಕ್ಷ ಮತಾಯಸ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಪೂವಾಧ್ಯಕ್ಷ ಲೂಕಾಸ್ ಡಿಸೋಜ ಸೌಹಾರ್ದ ಆಟಗಳನ್ನು ಸಂಯೋಜಿ ಸಿದ್ದರು. ಮಾಜಿ ಸಹಾಯಕ ಗವರ್ನರ್ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಹಿರಿಯ ರೊಟೇರಿಯನ್ ಡಾ.ಎನ್.ಎಸ್.ಶೆಟ್ಟಿ, ಸುಮಾ ನಾಯಕ್ ಮುಂಬಯಿ ಉಪಸ್ಥಿತರಿದ್ದರು. ರಘುಪತಿ ಐತಾಳ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.