ಗದಗ: ಜೈನ ಧರ್ಮವು ಪ್ರಾಚೀನ ಕಾಲದಿಂದಲೂ ಕನ್ನಡನಾಡಿನ ಇತಿಹಾಸ ಮತ್ತು ಸಂಸ್ಕೃತಿಯೊಂದಿಗೆ ಹಾಸು ಹೊಕ್ಕಿದೆ. ಭಾರತದ ಇತಿಹಾಸದ ಪರಂಪರೆಯಲ್ಲಿ ವಾಸ್ತು ಶಿಲ್ಪ ಕಲೆಗೆ ಜೈನ ಧರ್ಮದ ಕೊಡುಗೆ ಅಪಾರ ಎಂದು ಸರ್ಕಾರಿ ಪದವಿ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಅಪ್ಪಣ್ಣ ಹಂಜೆ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಜೈನ ವಾಸ್ತು, ಶಿಲ್ಪಕಲೆ ಕುರಿತು ಉಪನ್ಯಾಸ ನೀಡಿದ ಅವರು, ಜೈನ ಧರ್ಮದ ತತ್ವ-ದರ್ಶನ, ಪುರಾತತ್ವ, ಆಚಾರ-ವಿಚಾರ, ನಂಬಿಕೆ-ಸಂಪ್ರದಾಯ, ವಾಸ್ತು-ಶಿಲ್ಪ, ಶಾಸನ-ಸಾಹಿತ್ಯ ತನ್ನದೆಯಾದ ವಿಶಿಷ್ಟತೆ ಮೆರೆದಿದೆ. ಭಾರತದಲ್ಲಿ ಹಲವಾರು ಧರ್ಮಗಳು ತನ್ನದೆ ವಾಸ್ತುಶಿಲ್ಪ ಕಲೆ ಹೊಂದಿವೆ. ಅದರಲ್ಲಿ ಜೈನ ವಾಸ್ತುಶಿಲ್ಪ 4ನೇಯ ಶತಮಾನದ ಇತಿಹಾಸದ ಶಾಸನಗಳ ಆಧಾರದ ಮೇಲೆ ಕರ್ನಾಟಕದಲ್ಲಿ 8 ಸಾವಿರ ಜೈನ ಬಸದಿಗಳು, ಎತ್ತರ ಪ್ರದೇಶದಲ್ಲಿ ಬ್ರಹ್ಮಜಿನಾಲಯ, ಶಂಖಬಸದಿ, ಸಮ್ಯಕರ್ಣ, ಜ್ಞಾನ ಚಾರಿತ್ರ್ಯ, ಬಸದಿಗಳು ನಿರ್ಮಾಣವಾಗಿದ್ದವು. ಪ್ರಾಚೀನ ಜೈನ ಬಸದಿ ಬಸವ ಕಲ್ಯಾಣದಲ್ಲಿ ಸ್ಥಾಪಿತವಾಗಿದೆ. ಇವುಗಳಲ್ಲಿ ವಾಸ್ತುಶಿಲ್ಪ ಶೈಲಿ, ರಚನಾ ವಿನ್ಯಾಸವನ್ನು ಗಮನಿಸಿದಾಗ ತ್ರಿಕೂಟಾಚಲಗಳು ಕಂಡು ಬರುತ್ತವೆ. ದೇವಾಲಯಗಳ ಒಳವಿನ್ಯಾಸ ಗರ್ಭಗೃಹ, ಅಂತರಾಳ, ಅರ್ಧ ಮಂಟಪ, ನವರಂಗ ಭಾಗಗಳಿಂದ ಕೂಡಿರುತ್ತದೆ. ಗದಗ, ಲಕ್ಷ್ಮೇಶ್ವರ, ಲಕ್ಕುಂಡಿ, ಡಂಬಳ, ಪೇಠಾಲೂರ, ರೋಣ, ಸವಡಿ, ಸೂಡಿ, ರಾಜೂರ ಮುಂತಾದ ಸ್ಥಳಗಳಲ್ಲಿ ಜೈನ ವಾಸ್ತು, ಶಿಲ್ಪಕಲೆಯನ್ನು ಹೇರಳವಾಗಿ ಕಾಣಬಹುದಾಗಿದೆ ಎಂದು ನುಡಿದರು.

ಗೌರವ ಕೋಶಾಧ್ಯಕ್ಷ ಮಲ್ಲೇಶ ಡಿ. ಎಚ್. ಮಾತನಾಡಿ, ಪ್ರಾಚೀನ ಕಾಲದಿಂದಲೂ ರಾಜ ಮಹಾರಾಜರು, ಸಾಮಂತರು, ಶ್ರೀಮಂತರು ದೇವಾಲಯ ನಿರ್ಮಿಸಿ ಶಿಲ್ಪಕಲೆಗಳಿಗೆ ಆಶ್ರಯ ನೀಡಿದರು ಎಂದರು.

ಬೆಟಗೇರಿಯ ಹಿರಿಯ ಕವ್ರಿ ಗುಲಾಬಸಿಂಗ್ ಧಡೇಕರ್ ಅವರು ಅಳಲು ಮತ್ತು ಬಾ ಕನ್ನಡ ಕುವರ ಎಂಬ ಸ್ವರಚಿತ ಕವನ ವಾಚಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ, ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ, ಡಾ. ರಾಜೇಂದ್ರ ಗಡಾದ, ಎಸ್. ಎಸ್. ತಳ್ಳಿಹಾಳ, ಭೋಜರಾಜ ನಾವಳ್ಳಿ, ಸೋಮಶೇಖರ ದೊಡಮನಿ, , ಸಂಜೀವ ಸ್ವಾಮಿ, ಅ. ದ. ಕಟ್ಟಿಮನಿ, ಸುಚಿತಕುಮಾರ ಹರಿವಾಣ, ಪ್ರಕಾಶ ಬಂಡಿ, ಐಶ್ವರ್ಯ ಬಂಡಿ, ಸಂತೋಷ ನಿಂಗಾಪೂರ, ವಿ. ಬಿ. ಪಠಾಣಿ, ಆರ್. ಎಚ್. ಬಿ. ರಾಘವೇಂದ್ರ, ಸಿ. ಕೆ. ಕೇಸರಿ, ರಾಜಶೇಖರ ಕಾಲವಾಡಮಠ, ಶರಣಪ್ಪ ಬಾಲಣ್ಣವರ, ರಾಜಶೇಖರ ಕರಡಿ ಹಾಜರಿದ್ದರು. ಬಿ. ಬಿ. ಘಳಗಿ ಪ್ರಾರ್ಥಿಸಿದರು, ಎಸ್. ಎಸ್. ತಳ್ಳಿಹಾಳ ಸ್ವಾಗತಿಸಿದರು, ಶಿಕ್ಷಕರ ಸಂಘದ ಅಧ್ಯಕ್ಷ ಡಿ. ಎಸ್. ತಳವಾರ ನಿರೂಪಿಸಿದರು, ಶಂಕರ ಗಾಣಿಗೇರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.