ಕೆರೂರ: ಪ್ರತಿ ಶಿವರಾತ್ರಿಯನ್ನು ವೈಭವವಾಗಿ ಆಚರಿಸುವ ಶ್ರೀಗಳು, ಭಾರತೀಯ ಸಂಸ್ಕೃತಿ, ಧಾರ್ಮಿಕ ಆಚರಣೆಗೆ ಮನಸೋತು ಸ್ವಯಂ ಪ್ರೇರಿತರಾಗಿ ಬಂದ ಮೂವರು ವಿದೇಶಿಯರು ಶಿವರಾತ್ರಿ ಸಂದರ್ಭದಲ್ಲಿ ಬುಧವಾರ ಲಿಂಗ ದೀಕ್ಷೆ ಪಡೆದು, ವಿಭಿನ್ನ ರೀತಿಯಲ್ಲಿ ಆಚರಿಸಿದರು. ಸ್ಥಳೀಯ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಸಮ್ಮುಖದಲ್ಲಿ ಅಪ್ಪಟ ಭಾರತೀಯ ಶೈಲಿಯಲ್ಲಿ ಸೀರೆಯುಟ್ಟ ಸ್ವಿಟ್ಜರ್ಲೆಂಡ್ನ ಜೋವೆಲ್, ವೃದ್ಧರ ಶಿಕ್ಷಕಿ ಚಾರೋಲೆಟ್ ಹಾಗೂ ಫ್ರಾನ್ಸ್ನ ಸಂಗೀತ ಶಿಕ್ಷಕಿ ಫ್ಲಾರೆನ್ ಶಿವಪೂಜೆ ಸಲ್ಲಿಸಿದರು. ನಂತರ ವಿದೇಶಿ ಅತಿಥಿಗಳಿಗೆ ಸ್ವಾಮೀಜಿ ಲಿಂಗದೀಕ್ಷೆ ನೀಡಿ, ಮಂತ್ರ ಬೋಧನೆ ಮಾಡಿದರು.

ಕೇರಳದಲ್ಲಿ ಆಯುರ್ವೇದ ವೈದ್ಯರಾಗಿ ಲೋಕೇಶ ಹಿರೇಮಠ ಅವರು ಅಲ್ಲಿ ನಿತ್ಯ ಲಿಂಗಪೂಜೆ ಮಾಡುತ್ತಿದ್ದರು. ಅದನ್ನು ಗಮನಿಸಿ ಆಸಕ್ತಿ ತಾಳಿದ ಅವರು ಲಿಂಗಾರ್ಚನೆಗಾಗಿ ದೀಕ್ಷೆ ಪಡೆಯಲು ಮುಂದಾಗಿದ್ದರು. ಆಸಕ್ತಿಯಿಂದ ಇಲ್ಲಿಯ ಚರಂತಿಮಠಕ್ಕೆ ಆಗಮಿಸಿದ್ದರು. ಡಾ. ಶಿವಕುಮಾರ ಸ್ವಾಮೀಜಿ ಅವರು ಸಾಮೂಹಿಕವಾಗಿ ಲಿಂಗ ದೀಕ್ಷೆ ನೀಡಿ, ಸುಮಾರು 3 ತಾಸು ಕಾಲ ಶಿವ ಜಪ ಮಾಡಿಸಿದರು. ಲಿಂಗಧಾರಣೆಗೆ ಬೆಳ್ಳಿಯ ಗುಂಡಗಡಿಗೆಯನ್ನೂ ಖರೀದಿಸಿದರು. ವಿದೇಶಿಯರ ಲಿಂಗಪೂಜೆ, ಧ್ಯಾನ, ಲಿಂಗ ದೀಕ್ಷೆಯನ್ನು ಸುತ್ತಲಿನ ಗ್ರಾಮಗಳ ಭಕ್ತರು ಕುತೂಹಲದಿಂದ ವೀಕ್ಷಿಸಿದರು.

‘ದೇವರಿದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ಅಗೋಚರ ಶಕ್ತಿ ಇರುವದು ಖಚಿತ. ಭಾರತೀಯ ಭವ್ಯ ಸಂಸ್ಕೃತಿ, ಅಮೂಲ್ಯ ಯೋಗ, ಧ್ಯಾನ, ಆಚರಣೆಗಳು ಶಕ್ತಿಯುತವಾಗಿವೆ. ಶಿವರಾತ್ರಿ ಆಚರಣೆ ಮನಸ್ಸನ್ನು ಸಾಕಷ್ಟು ನೆಮ್ಮದಿ ತಂದಿದೆ ಎಂದು ವಿದೇಶಿ ಭಕ್ತರು ತಮ್ಮ ಅನುಭ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.