ಚಿಕ್ಕಮಗಳೂರು: ಬೆಲೆ ಕುಸಿತ ಮತ್ತು ಕೊಳೆ ರೋಗದಿಂದ ನೆಲಕಚ್ಚಿದ್ದ ಶುಂಠಿ ಬೆಳೆಗಾರರು ನಿರೀಕ್ಷೆಗಳು ಗರಿಗೆದರುವಂತೆ ಮಾರುಕಟ್ಟೆಯಲ್ಲಿ ಶುಂಠಿಗೆ ಬಂಪರ್ ಬೆಲೆ ಬಂದಿದೆ. ಬೆಳೆಗಾರರಿಗೆ ಶುಕ್ರದೆಸೆ ತಿರುಗುವ ಲಕ್ಷಣಗಳು ಮೂಡಲಾರಂಭಿಸಿವೆ.

ಹಾಸನ ಮಾರುಕಟ್ಟೆಯಲ್ಲಿ ಉತ್ತಮ ಶುಂಠಿ 60 ಕೆ.ಜಿ. ಪ್ರತಿ ಚೀಲಕ್ಕೆ 1200 ರೂಪಾಯಿ ದರ ನಿಗದಿಯಾಗಿದ್ದರೆ, ಶಿವಮೊಗ್ಗ ಮಾರುಕಟ್ಟೆಯಲ್ಲಿ 1800 ದರ ನಿಗದಿಯಾಗಿದೆ. ಚಿಕ್ಕಮಗಳೂರು ಮಾರುಕಟ್ಟೆಯಲ್ಲೂ ಉತ್ತಮ ಧಾರಣೆಯಲ್ಲಿ ಶುಂಠಿ ಖರೀದಿಸ ಲಾಗುತ್ತಿದೆ.

ಚಿಕ್ಕಮಗಳೂರು ಮಾರುಕಟ್ಟೆಯಲ್ಲಿ ಅತ್ಯುತ್ತಮ ಶುಂಠಿ ಪ್ರತಿ ಕೆ.ಜಿ.ಗೆ 10 ರೂಪಾಯಿಗಳಿಂದ 12 ರೂಪಾಯಿ, ಉತ್ತಮ ಶುಂಠಿ 6 ರೂಪಾಯಿಗಳಿಂದ 8 ರೂಪಾಯಿ ಹಾಗೂ ಸಾಮಾನ್ಯ ಶುಂಠಿ 3 ರೂಪಾಯಿಗಳಿಂದ 4 ರೂಪಾಯಿವರೆಗೆ ಖರೀದಿಸಲಾಗುತ್ತಿದೆ.

ಶುಂಠಿ ಕೀಳುವ ಸಮಯದಲ್ಲಿ ಪ್ರತಿ ಚೀಲಕ್ಕೆ 300 ರೂಪಾಯಿ ದರ ನಿಗದಿಯಾಗಿತ್ತು. ನಂತರ ಸ್ವಲ್ಪ ಏರಿಕೆಯಾಗಿ 600 ರೂಪಾಯಿಂದ 800 ರೂಪಾಯಿಗೆ ಹೆಚ್ಚಳಗೊಂಡಿತು. ಈಗ ಏಕಾಏಕಿ 1200 ರೂಪಾಯಿ ವರೆಗೆ ಶುಂಠಿ ಬೆಲೆ ಏರಿಕೆಯಾಗಿ ಬೆಳೆಗಾರರನ್ನು ಅಚ್ಚರಿಗೊಳಿಸಿದೆ.

ಕಳೆದ ವರ್ಷ ಶುಂಠಿ 60 ಕೆ.ಜಿ. ಪ್ರತಿ ಚೀಲಕ್ಕೆ ಕನಿಷ್ಠ 500 ರೂಪಾಯಿ ಗಳಿಂದ 900 ರೂಪಾಯಿವರೆಗೆ ಮರಾಟವಾಗಿ ರೈತರು ಅಲ್ಪಸ್ವಲ್ಪ ಆದಾಯ ಗಳಿಸಿದ್ದರು. ಈ ವರ್ಷ ಅದೇ ದರ ಇರಬಹುದೆಂದು ತಿಳಿದು ರೈತರು ಗದ್ದೆ ಹೊಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆದಿದ್ದರು. ಆದರೆ ಆರಂಭದಲ್ಲಿ 300 ರೂಪಾಯಿ ಗಳಲ್ಲಿ ಶುಂಠಿ ಮಾರಾಟ ಮಾಡಬೇಕಾಯಿತು.

ಸ್ವಲ್ಪ ದರ ಹೆಚ್ಚಳಗೊಳ್ಳ ಬಹುದೆಂದು ನಿರೀಕ್ಷೆಯ ಲ್ಲಿದ್ದವರಿಗೆ ದರ 500ರೂಪಾಯಿಗೆ ಬಂದು ನಿಂತಿತು. ಕೊನೆ ಗಳಿಗೆಯಲ್ಲಿ ಏನು ಮಾಡಲಾಗದೆ, ಇದ್ದಬದ್ದ ಶುಂಠಿ ಮಾರಾಟ ಮಾಡಿದರು. ಕಳೆದೆರಡು ದಿನಗಳಿಂದ ಶುಂಠಿಗೆ 1200 ರೂಪಾಯಿ ದರಕ್ಕೆ ಮಾರಾಟವಾಗುತ್ತಿದೆ.

ಗದ್ದೆಯಲ್ಲಿದ್ದ ಶುಂಠಿ ಕಿತ್ತು ಮನೆಯಲ್ಲಿಯೇ ಶೇಖರಣೆ ಮಾಡಿದವರು ಉತ್ತಮ ಧಾರಣೆಗೆ ಮಾರಾಟ ಮಾಡುತ್ತಿದ್ದರೆ, ಮತ್ತೆ ಕೆಲವರು ಗದ್ದೆಯಲ್ಲಿ ಉಳಿದಿದ್ದ ಶುಂಠಿ ಹುಡುಕಿ ತಂದು ಮಾರಾಟ ಮಾಡುತ್ತಿದ್ದಾರೆ.
ಸಂತೆ ದಿನವಾದ ಬುಧವಾರ ನಗರಕ್ಕೆ ಬಂದವರು ಶುಂಠಿ ದರ ಕೇಳಿಕೊಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು.

ಮಾರುಕಟ್ಟೆಯಲ್ಲಿ ದರ ಕೇಳಲು ಬಂದ ಮಾಗಡಿ ಕೈಮರ ರೈತರನ್ನು ವಿಚಾರಿಸಿದಾಗ, ಈ ವರ್ಷ ಐದಾರು ಚೀಲ ಶುಂಠಿ ಬೆಳೆಯಲಾಗಿತ್ತು. ಬೆಲೆಯಿಲ್ಲದೆ ಕೇವಲ 300 ರೂಪಾಯಿಗೆ ಮಾರಾಟ ಮಾಡಿದ್ದೆ.

ಬೀಜಕ್ಕೆಂದು ಒಂದು ಗದ್ದೆಯಲ್ಲಿ ಶುಂಠಿ ಹಾಗೆ ಇದ್ದು, ರೇಟು ಹೆಚ್ಚಾಗಿದ್ದರಿಂದ ಮಾರಾಟ ಮಾಡಲು ಮುಂದಾಗಿದ್ದೇನೆ ಎಂದರು.

ಜಿಲ್ಲೆಯ ಬಹುತೇಕ ಬೆಳೆಗಾರರರು ಗದ್ದೆ-ಹೊಲಗಳಿಂದ ಶುಂಠಿ ಕಿತ್ತು ಖಾಲಿ ಮಾಡಿರುವಾಗ ಬೆಲೆ ಏರಿಕೆಯಾಗಿ ನಿರಾಸೆಯ ಮಡುವಿಗೆ ದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.