ಶನಿವಾರ, ಜೂನ್ 19, 2021
23 °C

ಶೃಂಗೇರಿ: ಕೃಷಿಕರ ಮನೆಗೆ ನಕ್ಸಲರು ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೃಂಗೇರಿ:  ತಾಲ್ಲೂಕಿನ ನೆಮ್ಮಾರು ಗ್ರಾಮ ಪಂಚಾಯತಿಯ ಕೃಷಿಕರೊಬ್ಬರ ಮನೆಗೆ ನಕ್ಸಲರು ಭೇಟಿ ನೀಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ರಾತ್ರಿ 8 ಗಂಟೆ ಸುಮಾರಿಗೆ ನಾಯಿನಾಡಿನ ಕೃಷಿಕ ಆನಂದರಾವ್ ಅವರ ಮನೆಗೆ ಮುಂಡಗಾರು ಲತಾ ನೇತೃತ್ವದ ನಾಲ್ವರು ನಕ್ಸಲರು ಭೇಟಿ ನೀಡಿದ್ದು, ಸ್ಥಳೀಯ ಸಮಸ್ಯೆಗಳು ಹಾಗೂ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.ಈ ಸಂದರ್ಭದಲ್ಲಿ ಒತ್ತುವರಿ ಸಮಸ್ಯೆ ಹಾಗೂ ಹುಲಿಯೋಜನೆ ಕುರಿತು ಮಾಹಿತಿ ಪಡೆಯುವುದರೊಂದಿಗೆ ನಕ್ಸಲ್‌ ಸಂಘಟನೆಗೆ ಬೆಂಬಲ ನೀಡುವಂತೆ ಕೋರಿ ಪ್ರತಿ ವರ್ಷ 25 ಸಾವಿರ ದೇಣಿಗೆ ನೀಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.