ಮಕ್ಕಳು ಶೈಕ್ಷಣಿಕ ವರ್ಷದ ಕೊನೆಯ ಘಟ್ಟದಲ್ಲಿದ್ದಾರೆ. ಕೆಲವರಿಗೆ ವಾರ್ಷಿಕ ಪರೀಕ್ಷೆ ಮುಗಿಸಿ ಫಲಿತಾಂಶದ ನಿರೀಕ್ಷೆ, ಇನ್ನೂ ಕೆಲವರಿಗೆ ಪರೀಕ್ಷೆಯ ಬಿಸಿ ಆರಲು ಈ ವಾರಾಂತ್ಯದವರೆಗೂ ಕಾಯಬೇಕು. ರಜೆ ಆರಂಭವಾಗುತ್ತಿದ್ದಂತೆ ಬೇಸಿಗೆ ಶಿಬಿರ, ಪ್ರವಾಸ, ಯಾತ್ರೆ, ನೆಂಟರಿಷ್ಟರ ಮನೆಗೆ ಭೇಟಿ ಮುಂತಾದ ಚಟುವಟಿಕೆಗಳು ಶುರುವಾಗುತ್ತವೆ. ಇದರ ಜತೆಗೆ ಸಂಗೀತ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ನಗರದ ಕೆಲವು ಶಾಲೆಗಳಲ್ಲಿ ಸಂಗೀತ ಮಾತ್ರ ಇದ್ದರೆ ಇನ್ನು ಕೆಲವು ಕಡೆ ಸಂಗೀತದ ಜತೆಗೆ ನೃತ್ಯವನ್ನೂ ಕಲಿಯುವ ಅವಕಾಶವಿದೆ. ಇಂತಹ ಅಪರೂಪದ ಸಂಗೀತ-ನೃತ್ಯ ಎರಡನ್ನೂ ಕಲಿಸುವ ಶಾಲೆ ಜಯನಗರ ಒಂಬತ್ತನೇ ಬ್ಲಾಕ್ನಲ್ಲಿದೆ.

ಶ್ರೀ ವೆಂಕಟ ಅಕಾಡೆಮಿ ಆಫ್ ಮ್ಯೂಸಿಕ್ ಕಳೆದ 12 ವರ್ಷಗಳಿಂದ ಮಕ್ಕಳಿಗೆ ಸಂಗೀತ -ನೃತ್ಯ ಕಲಿಸುತ್ತಾ ಬಂದಿದೆ. ಸಂಗೀತ ವಿದ್ವಾಂಸರಾಗಿದ್ದ ಮಹಾರಾಜಾಪುರಂ ವಿಶ್ವನಾಥ ಅಯ್ಯರ್ ಅವರ ಶಿಷ್ಯರಾಗಿದ್ದ ಪಿ.ವೆಂಕಟಸುಬ್ಬಯ್ಯ ಅವರ ಸವಿನೆನಪಿಗಾಗಿ ಈ ಸಂಗೀತ ಶಾಲೆಯನ್ನು ಸ್ಥಾಪಿಸಲಾಯಿತು. ವಿದುಷಿ ಪಿ. ಶೈಲಜಾ ಅವರು ಈ ಸಂಗೀತ ಶಾಲೆಯ ರೂವಾರಿ.

ಸಂಗೀತ-ನೃತ್ಯ ಎರಡೂ
ಈ ಸಂಗೀತ ಶಾಲೆಯಲ್ಲಿ ಕರ್ನಾಟಕ ಸಂಗೀತ, ಪಿಟೀಲು, ವೀಣೆ, ಮೃದಂಗ, ಹಿಂದೂಸ್ತಾನಿ ಗಾಯನ, ತಬಲಾ, ಗಿಟಾರ್, ಕೀಬೋರ್ಡ್, ಮೌತ್ ಆರ್ಗನ್ ಕಲಿಸಲಾಗುತ್ತದೆ. ಸಂಗೀತದ ಜತೆಗೆ ನೃತ್ಯಾಸಕ್ತರಿಗಾಗಿ ಭರತನಾಟ್ಯ, ಕೂಚಿಪುಡಿ, ಕಥಕ್ ಮತ್ತು ಪಾಶ್ಚಾತ್ಯ ನೃತ್ಯ ಕಲಿಸಲಾಗುತ್ತದೆ. ಸುಮಾರು 150 ಮಕ್ಕಳು ಇಲ್ಲಿ ಸಂಗೀತದ ವಿವಿಧ ಪ್ರಕಾರಗಳನ್ನು ಕಲಿಯುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಗಾಯನವನ್ನು ಕಲಿಯಲು 40 ಮಂದಿ ಮಕ್ಕಳಿದ್ದಾರೆ. ಹಿರಿಯ ಶಿಷ್ಯಂದಿರಿಗೆ ಪ್ರತ್ಯೇಕ ಪಾಠ ಇದ್ದು, ಉಳಿದವರನ್ನು 8 ಮಕ್ಕಳ ಗುಂಪು ಮಾಡಿ ಪಾಠ ಕಲಿಸಲಾಗುತ್ತದೆ.

ಆದರೆ ಪ್ರತಿಯೊಬ್ಬರ ಸಂಗೀತ ಕಲಿಕೆಯನ್ನು ಗಮನಿಸಲಾಗುತ್ತದೆ. ಆಸಕ್ತ ಬಡ ಮಕ್ಕಳಿಗೆ ಉಚಿತವಾಗಿಯೂ ಸಂಗೀತ ಹೇಳಿಕೊಡಲಾಗುತ್ತದೆ. ವಿದುಷಿ ಶೈಲಜಾ ವೀಣೆ ಮತ್ತು ಗಾಯನ, ಎಂ.ಡಿ. ಕಾವ್ಯಶ್ರೀ ಪಿಟೀಲು ಪಾಠವನ್ನು ಹೇಳಿಕೊಡುತ್ತಿದ್ದು, ಉಳಿದ ಪ್ರಕಾರಗಳನ್ನು ನುರಿತ ಸಂಗೀತ ಶಿಕ್ಷಕರು ಕಲಿಸುತ್ತಾರೆ. ಶಾಲಾ ವಿದ್ಯಾರ್ಥಿಗಳಲ್ಲದೆ ಗೃಹಿಣಿಯರು, ಎಂಜಿನಿಯರರು, ವೈದ್ಯರು, ಉದ್ಯಮಿಗಳೂ ಇಲ್ಲಿ ಸಂಗೀತ ಕಲಿಯುತ್ತಿದ್ದಾರೆ.

‘ಮಕ್ಕಳಿಗೆ ವೇದಿಕೆ ಒದಗಿಸಲು ಪ್ರತೀವರ್ಷ ವಾರ್ಷಿಕೋತ್ಸವ, ತ್ಯಾಗರಾಜರ ಆರಾಧನೋತ್ಸವ, ಗಣೇಶೋತ್ಸವ ಆಚರಿಸುತ್ತೇವೆ. ನಗರದ ಉದಯಭಾನು ಕಲಾಸಂಘ, ರಾಗಿಗುಡ್ಡ ಆಂಜನೇಯ ದೇವಾಲಯ, ರಾಮಮಂದಿರಗಳಲ್ಲಿ ಇಲ್ಲಿನ ಮಕ್ಕಳಿಗೆ ತಮ್ಮ ಪ್ರತಿಭೆ ಮೆರೆಯಲು ವೇದಿಕೆ ಸಿಕ್ಕಿದೆ. ಅನೇಕ ಮಕ್ಕಳು ಶಾಲಾ ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾಗಿದ್ದಾರೆ. ಇಲ್ಲಿ ಕಲಿಯುತ್ತಿರುವ ಸೌಮ್ಯ ಲಕ್ಷ್ಮಿ, ರಕ್ಷಾ, ರಾಘವಿ, ಸಿಂಧು, ಪ್ರಕೃತಿ, ಅಮೃತಾ ಮುಂತಾದವರು ಈಗಾಗಲೇ ಅನೇಕ ಸಂಗೀತ ಕಛೇರಿಗಳಲ್ಲಿ ಹಾಡಿದ್ದಾರೆ ಎಂದು ವಿವರ ನೀಡುತ್ತಾರೆ ವಿದುಷಿ ಶೈಲಜಾ.

ಸಂಗೀತವೆಂಬ ಮಂತ್ರದಂಡ
‘ಮಾನಸಿಕ ಒತ್ತಡ ನಿವಾರಣೆಗೆ ಸಂಗೀತ ಸಹಕಾರಿ. ಈ ನಿಟ್ಟಿನಲ್ಲಿ ‘ಮ್ಯೂಸಿಕ್ ಈಸ್ ಎ ಮ್ಯಾಜಿಕ್’ ಎನ್ನುವ ಶೈಲಜಾ, ದೈನಂದಿನ ಬದುಕಿನಲ್ಲಿ ಭಾವನೆಗಳ ಹತೋಟಿಗೆ, ಏಕಾಗ್ರತೆಗೆ, ಸಾಮಾಜಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಸಂಗೀತದ ಕೊಡುಗೆ ಬಹಳಷ್ಟಿದೆ ಎಂದು ವಿವರಿಸುತ್ತಾರೆ.

ಸಂಗೀತವನ್ನು ಪ್ರತಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯ ಪಠ್ಯವಾಗಿ ರೂಪಿಸಬೇಕು. ಆಗ ಮಕ್ಕಳ ಮನೋವಿಕಾಸ, ಕಲಿಕೆಯಲ್ಲಿ ಪ್ರಗತಿ ಉಂಟಾಗಲು ಸಾಧ್ಯವಾಗುತ್ತದೆ’ ಎಂದೂ ಹೇಳುತ್ತಾರೆ ಅವರು.

ಗುರುಕುಲ ಪದ್ಧತಿ
ವಿದುಷಿ ಪಿ. ಶೈಲಜಾ ಅವರು ಕರ್ನಾಟಕ ಸಂಗೀತದ ಹಿರಿಯ ಕಲಾವಿದೆಯಾಗಿದ್ದ ವಿದುಷಿ ಎಂ.ಎಲ್. ವಸಂತಕುಮಾರಿ ಅವರ ಶಿಷ್ಯೆ. ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರೆ. ತಮ್ಮ ಹತ್ತನೇ ವಯಸ್ಸಿನಲ್ಲಿ ವಿದುಷಿ ಪಿ. ರಮಾದೇವಿ ಅವರ ಬಳಿ ಆರಂಭದ ಸಂಗೀತ ಕಲಿತರು. ಮದನಪಲ್ಲಿಯ ರಿಷಿ ವ್ಯಾಲಿಯಲ್ಲಿ ಸುಮಾರು ಏಳು ವರ್ಷಗಳ ಕಾಲ ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿತವರು.

ಡಾ.ಎಂಎಲ್ವಿ ಅವರ ಜತೆಗೆ ಅನೇಕ ಕಛೇರಿಗಳಲ್ಲಿ ಸಹಗಾಯನ ನಡೆಸಿದ ಹೆಗ್ಗಳಿಕೆ ಇವರಿಗಿದೆ. ಬೆಂಗಳೂರಿನಲ್ಲೂ ರಾಮಸೇವಾ ಮಂಡಳಿ, ಶೇಷಾದ್ರಿಪುರಂ ಶಾಲೆ, ಚೆನ್ನೈ, ತಿರುಪತಿಯ ಅಣ್ಣಮಾಚಾರ್ಯರ ಸಂಸ್ಥೆ ಹೀಗೆ ವಸಂತಕುಮಾರಿ ಅವರ ಜತೆಗೆ ಹಾಡಿದ್ದಾರೆ.

ಆಕಾಶವಾಣಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ಪಡೆದವರು. ತಮ್ಮ ಸಂಗೀತ ಶಾಲೆಯಲ್ಲೂ ಗುರುಕುಲ ಪದ್ಧತಿಯಲ್ಲೇ ಕಲಿಸಬೇಕು ಎನ್ನುವ ತುಡಿತ ಇಟ್ಟುಕೊಂಡಿರುವ ಈ ವಿದುಷಿ, ಸಂಗೀತದ ವರ್ಣ, ಗೀತೆ, ಕೀರ್ತನೆಗಳ ರಾಗ, ರಾಗಲಕ್ಷಣಗಳನ್ನು ಸ್ವರಗಳ ಸಹಿತ ವಿವರಿಸಿಯೇ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ.

ವಿಳಾಸ: ವಿದುಷಿ ಪಿ. ಶೈಲಜಾ, ವೆಂಕಟ್ ಅಕಾಡೆಮಿ ಆಫ್ ಮ್ಯೂಸಿಕ್, ನಂ.1965/1, ಸೌತ್ ಎಂಡ್ ಡಿ ಕ್ರಾಸ್, 26ನೇ ಮುಖ್ಯ ರಸ್ತೆ, ರಾಗಿಗುಡ್ಡ ದೇವಸ್ಥಾನ ರಸ್ತೆ, ಜಯನಗರ 9ನೇ ಬ್ಲಾಕ್, ಬೆಂಗಳೂರು 69. ಫೋನ್- 96323-36711/ 080-26588829.

ವಿಶಿಷ್ಟ ಬೋಧನಾ ಶೈಲಿ
ಕರ್ನಾಟಕ ಶಾಸ್ತ್ರೀಯದ ಗಾಯನ-ಲಕ್ಷಣ ಎರಡೂ ಭಾಗಗಳನ್ನು ಕಲಿಸುವ ಗುರು ಶೈಲಜಾ ಅವರ ಬೋಧನಾ ಶೈಲಿ ಸಂಗೀತದಲ್ಲಿ ಆಸಕ್ತಿ ಇಲ್ಲದ ಮಕ್ಕಳನ್ನೂ ಸೆಳೆಯುತ್ತದೆ. ಇದಕ್ಕೆ ಕಾರಣ ಮಕ್ಕಳ ಅಭ್ಯಾಸದ ಕಡೆಗೆ ಅವರು ಕೊಡುವ ಗಮನ, ಎಲ್ಲೂ ಬೋರ್ ಆಗದ ಹಾಗೆ ಸೃಜನಶೀಲವಾಗಿ ಕಲಿಸುವ ಕಲಾತ್ಮಕತೆ ಅವರಲ್ಲಿದೆ. ನಾವಿಬ್ಬರೂ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದು, ಈಗಾಗಲೇ ಜೂನಿಯರ್ ಪರೀಕ್ಷೆಯನ್ನು ಉತ್ತಮ ಅಂಕ ಗಳಿಸಿ ಪಾಸಾಗಿದ್ದೇವೆ. ಸೀನಿಯರ್ ಹಂತದ ಪಾಠವನ್ನು ಈಗ ಕಲಿಯುತ್ತಿದ್ದು, ಬೇರೆ ಬೇರೆ ಕಡೆಗಳಲ್ಲಿ ಸಂಗೀತ ಹಾಡಿದ್ದೇವೆ.

ಪ್ರತಿಯೊಂದು ಗೀತೆ, ವರ್ಣ, ಕೃತಿ, ಕೀರ್ತನೆ ಹೇಳಿಕೊಡುವಾಗಲೂ ಅವುಗಳ ರಾಗ, ಆರೋಹಣ, ಅವರೋಹಣ, ಯಾವ ಮೇಳಕರ್ತ ರಾಗ, ಯಾವ ರಾಗದಲ್ಲಿ ಜನ್ಯವಾಗಿದೆ.. ಮುಂತಾದ ಎಲ್ಲ ಅಂಶಗಳನ್ನು ವಿವರಿಸಿ ಪಾಠ ಹೇಳಿಕೊಡುವುದರಿಂದ ಮಕ್ಕಳಿಗೆ ಸಂಗೀತ ಜ್ಞಾನ ವಿಸ್ತಾರಕ್ಕೆ ಸಹಾಯವಾಗುತ್ತದೆ. ರಾಗದ ಸಂಪೂರ್ಣ ಸಾರವನ್ನು ಅರಿಯಲು ಸಾಧ್ಯವಾಗುತ್ತದೆ. ಹೀಗಾಗಿ ಇಲ್ಲಿ ಕಲಿಯುವ ಮಕ್ಕಳು ಕ್ಲಾಸಿಗೆ ಚಕ್ಕರ್ ಕೊಡುವುದು ಅಪರೂಪ. ಜತೆಗೆ ಶಿಕ್ಷಕಿಯ ಕಟ್ಟುನಿಟ್ಟು, ಶಿಸ್ತು ಮಾದರಿ ಎನಿಸುತ್ತದೆ.

ಒಂದು ದಿನ ಮಾಡಿದ ಪಾಠವನ್ನು ಮುಂದಿನ ಕ್ಲಾಸ್ನಲ್ಲಿ ಸರಿಯಾಗಿ ಒಪ್ಪಿಸಬೇಕು. ಹಾಗಿದ್ದರೆ ಮಾತ್ರ ಪಾಠ ಮುಂದೆ ಹೋಗುವುದು. ಕಲಿಸಿದ ಸಂಗೀತ ಭಾಗ ಸರಿಯಾಗಿ ಮನವರಿಕೆ ಆಗಿ, ಸ್ವರಸ್ಥಾನ ಸರಿಯಾಗಿ ಬರುವವರೆಗೂ ಅದನ್ನೇ ಮತ್ತೆ ಮತ್ತೆ ಹೇಳಿಕೊಡುವ ರೀತಿ ಕೂಡ ವಿಶಿಷ್ಟವಾಗಿದೆ. ಸಂಗೀತದಲ್ಲಿ ವಿದ್ವತ್ಪೂರ್ಣ ಸಾಧನೆ ಮಾಡುವ ಆಸೆ ನಮಗಿದೆ.
- ಪ್ರಕೃತಿ, ಅಮೃತಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.