ವಾಷಿಂಗ್ಟನ್ (ಪಿಟಿಐ): ವಿಶ್ರಾಂತಿಗಾಗಿ ಪ್ರತಿಯೊಬ್ಬರೂ ತಲೆದಿಂಬು ಬಳಸು ವುದು ಸಹಜ. ಹೀಗೆ ವಿರಮಿಸುವ ವೇಳೆ ಯಲ್ಲಿ ಸಂಗೀತದ ಮುದವನ್ನೂ ನೀಡುವ ನೂತನ ದಿಂಬನ್ನು ಆವಿಷ್ಕಾರ ಮಾಡಲಾಗಿದೆ.

ದಿಂಬಿನ ಮೇಲೆ ತಲೆ ಇಟ್ಟ ಕೂಡಲೇ ಹೊರಮೊಮ್ಮುವ ಧ್ವನಿಯ ತರಂಗ ಗಳು ವ್ಯಕ್ತಿಯ ಕಿವಿಗೆ ಸೀಮಿತವಾಗಿ ಮುದವಾದ ಸಂಗೀತವನ್ನು ಹೊರ ಸೂಸುತ್ತದೆ.
ಅಲ್ಲದೇ ಈ ದಿಂಬಿನ ಮೇಲೆ ವಿರಮಿಸುವ ವ್ಯಕ್ತಿಗೆ ಮಾತ್ರ ಸಂಗೀತ ಕೇಳಿ ಬರಲಿದ್ದು, ಪಕ್ಕದಲ್ಲಿಯೇ ಮಲಗಿ ರುವ ಬೇರೆಯವರಿಗೆ ಯಾವುದೇ ಕಿರಿಕಿರಿ ಆಗದಿರುವುದು ಈ ದಿಂಬಿನ ಮತ್ತೊಂದು ವಿಶೇಷ.

ದಿಂಬು 30x56x5 ಸೆ.ಮೀ ಅಳತೆ ಯದಾಗಿದ್ದು, 3.5ಮಿ.ಮೀ ಹೆಡ್ ಫೋನ್ ಜಾಕ್ನ ಮೂಲಕ ಸಂಗೀತ ಕೇಳಿ ಬರಲಿದೆ. ‘ಈ ದಿಂಬನ್ನು ಬಳಸುವುದರಿಂದ ಮಾನವನು ದಿನನಿತ್ಯದ ಒತ್ತಡಗಳಿಂದ ಕೊಂಚ ನೆಮ್ಮದಿ ಹೊಂದಲು ಮತ್ತು ಸುಖನಿದ್ರೆಗೆ ಜಾರಲು ಸಾಧ್ಯವಾಗಲಿದೆ. ಇದರಿಂದ ದೈಹಿಕವಾಗಿ, ಭಾವನಾತ್ಮಕ ವಾಗಿ ಮತ್ತು ಸಾಮಾಜಿಕವಾಗಿ ಕ್ರಿಯಾಶೀಲರಾಗಿರಲು ಸಾಧ್ಯವಾಗ ಲಿದೆ’ ಎಂದು ದಿಂಬಿನ ತಯಾರಕರು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.