ಸೋಮವಾರ, ಜೂನ್ 21, 2021
30 °C

ಸಂಘಟನೆ ಮೂಲಕ ಸಮಾಜಸೇವೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ಸಮುದಾಯಗಳು ಸಂಘಟನೆ ಮೂಲಕ ಸೇವಾ ಕಾರ್ಯ ಕೈಗೊಂಡು ಉತ್ತಮ ಸಮಾಜ ಸ್ಥಾಪನೆಗೆ ಮುಂದಾಗಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಸಲಹೆ ಮಾಡಿದರು.ಇಲ್ಲಿನ ಕೆಳಗಿನ ಈಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ತಮ್ಮ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಆರ್ಥಿಕ ಅಶಕ್ತರಿಗೆ ಆಯಾ ಸಮುದಾಯಗಳಲ್ಲಿ ಅಭಿವೃದ್ಧಿ ಸಾಧಿಸಿದವರು ಸಹಕಾರ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಅನುದಾನ ನೀಡುವುದಕ್ಕೂ ಹೆಚ್ಚಿನ ರೀತಿ ನೀಡಿದ ಅನುದಾನ ದುರ್ಬಳಕೆ ಆಗದಂತೆ ನೋಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಸಮಾಜದಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಸಮಾಜ ಬಗ್ಗೆ ಜವಾಬ್ದಾರಿ ಇರಬೇಕು ಎಂದು ಹೇಳಿದರು.ಇದೇ ವೇಳೆ ಅವರು ಈಶ್ವರಸ್ವಾಮಿ ದೇವಸ್ಥಾನ ಸಮುದಾಯ ಭವನದ ಊಟದ ಕಟ್ಟಡಕ್ಕೆ ್ಙ 3 ಲಕ್ಷ ಹಾಗೂ ಸರ್ಕಾರದಿಂದ ನೂತನ ಸಮುದಾಯ ಭವನ ನಿರ್ಮಾಣಕ್ಕೆ ್ಙ 12-15 ಲಕ್ಷ ಕೊಡಿಸುವುದಾಗಿ ಹಾಗೂ ಈ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.ದಾನಿಗಳ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದ ಸಂಡೂರಿನ ಸಮಾಜ ಸೇವಕಿ ರೂಪಾ ಉದಯ್‌ಸಿಂಗ್ ಲಾಡ್, `ಸಮಾಜಕ್ಕೆ ನಾವು ಸ್ಪಂದಿಸಿದ ರೀತಿಯಲ್ಲಿಯೇ ಸಮಾಜವೂ ಸಹ ಪ್ರತ್ಯುತ್ತರವಾಗಿ ಸ್ಪಂದನೆ ಮಾಡುತ್ತದೆ. ಈ ನೀತಿ ಇಟ್ಟುಕೊಂಡು ಸಮಾಜಕ್ಕೆ ಶ್ರಮಿಸುವ ಮೂಲಕ ಶಾಶ್ವತ ಕಾರ್ಯ ಕೈಗೊಳ್ಳಬೇಕು~ ಎಂದು ಹೇಳಿದರು.ಸ್ವಕುಳಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜಿ. ಸೂರ್ಯ ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು.

ಸ್ವಕುಳಸಾಳಿ ಸಮಾಜದ ಮುಖಂಡರಾದ ಗೋಪಾಲರಾವ್, ಸ್ವಾಮಿದೇವ ಗಾಯಕ್‌ವಾಡ್, ಎಂ.ಎಸ್. ತಿಪ್ಪೇಸ್ವಾಮಿ, ಮಹಿಳಾ ಸಮಾಜದ ಅಧ್ಯಕ್ಷೆ ರಾಧಾಮಣಿ ಗಾಯಕವಾಡ್, ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಕೆ. ಕುಮಾರಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷ ಕೆ. ಜಗಳೂರಯ್ಯ, ಶಿವಾಜಿ ವಾಂಜ್ರೆ, ವಾಂಜ್ರೆ ರಮೇಶ್, ಡಾ.ಬಿ.ಜಿ. ಜ್ಞಾನದೇವ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.