ಶುಕ್ರವಾರ, ಜನವರಿ 24, 2020
16 °C

ಸಂಭ್ರಮದ ಪಂಚಲಿಂಗೇಶ್ವರ ತೆಪ್ಪೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ತಾಲ್ಲೂಕಿನ ಕೆರಗೋಡು ಗ್ರಾಮದ ಪಂಚಲಿಂಗೇಶ್ವರ ಸ್ವಾಮಿಯ ದೀಪ ಹಾಗೂ ತೆಪ್ಪೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು.ದೇವಾಲಯಕ್ಕೆ ಹೂವಿನ ವಿಶೇಷ ಅಲಂಕಾರದ ಜತೆಗೆ ದೇವಸ್ಥಾನದ ಮುಂಭಾಗದ ತಾವರಕೆರೆಯಲ್ಲಿ ನಡೆದ ದೀಪ ಹಾಗೂ ಬಸವನ ತೆಪ್ಪೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.1.8 ಲಕ್ಷ ದೀಪಗಳನ್ನು 800 ಲೀಟರ್‌ ಎಣ್ಣೆಯಲ್ಲಿ ಬೆಳಗಲಾಯಿತು. ಇದರಿಂದಾಗಿ ದೇವಸ್ಥಾನದ ಸುತ್ತ ಮುತ್ತಲೂ ಎಲ್ಲೆಲ್ಲೂ ಬೆಳಕು ಹರಡಿಕೊಂಡಿತ್ತು.ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ 4 ಕೌಂಟರ್‌ಗಳ ಮೂಲಕ ಪ್ರಸಾದ ವಿತರಣೆಯನ್ನು ಮಾಡಲಾಯಿತು.

ಪ್ರತಿಕ್ರಿಯಿಸಿ (+)