ಯಲಹಂಕ: ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ, ಹವಾಮಾನ ಬದಲಾವಣೆ ಮತ್ತು ಜಾಗತೀಕರಣ, ಕೃಷಿ ವಲಯದಿಂದ ಬರುತ್ತಿರುವ ಕಡಿಮೆ ಆದಾಯ ಹಾಗೂ ಜನರ ಆಹಾರ ಪದ್ಧತಿಯಲ್ಲಿ ಆಗುತ್ತಿರುವ ಬದಲಾವಣೆಗಳು ಕೃಷಿ ಮೇಲೆ ಪರಿಣಾಮ ಬೀರಿವೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣಗೌಡ ಹೇಳಿದರು.

ಭಾರತೀಯ ಬೆಳೆ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ ಹಾಗೂ ಕೃಷಿ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿರುವ `ಭಾರತೀಯ ಆಹಾರ ಸಂಸ್ಕರಣೆಗೆ ಸೂಕ್ತ ತಂತ್ರಜ್ಞಾನ~ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಕೂಲ ಪರಿಸ್ಥಿತಿಯ ಸಮಸ್ಯೆಯನ್ನು ಮೆಟ್ಟಿನಿಂತು ಕೃಷಿ ವಲಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕಾದ ಅಗತ್ಯವಿದೆ ಎಂದರು.

ದೇಶದ ಶೇ 52 ರಷ್ಟು ಜನ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹವಾಗಿದ್ದರೂ ಆರ್ಥಿಕ ಬೆಳವಣಿಗೆಗೆ ಅಷ್ಟೇನು ಪರಿಣಾಮಕಾರಿಯಾದ ಕೊಡುಗೆ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಆಹಾರ ಸಂಸ್ಕರಣೆ ಮತ್ತೊಂದು ಪ್ರಮುಖ ವಲಯವಾಗಿದ್ದು, ರೈತರು ಬೆಳೆದ ಉತ್ಪನ್ನಗಳನ್ನು ಸಂಸ್ಕರಣೆ ಮಾಡುವುದರಿಂದ ನಷ್ಟ ತಪ್ಪಿಸುವುದರ ಜೊತೆಗೆ ಆದಾಯ ಹೆಚ್ಚಿಸಬಹುದು ಎಂದರು.

ಐಐಸಿಪಿಟಿ ನಿರ್ದೇಶಕ ಡಾ.ಕೆ.ಅಲಗುಸುಂದರಂ, ಕೃಷಿ ವಿ.ವಿ ಸಂಶೋಧನಾ ನಿರ್ದೇಶಕ ಡಾ.ಎಚ್.ಶಿವಣ್ಣ, ನಿವೃತ್ತ ಪ್ರಾಧ್ಯಾಪಕ ಡಾ.ಬಿ.ರಂಗಣ್ಣ, ಐಐಸಿಪಿಟಿಯ ವಿಜ್ಞಾನಿ ಡಾ.ಎ.ಸುರಭಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.