ಸೋಮವಾರ, ಮಾರ್ಚ್ 8, 2021
31 °C
ಪ್ರತಿಯೊಂದು ತೊಂದರೆ ನಿವಾರಣೆ ನನ್ನ ಜವಾಬ್ದಾರಿಯಲ್ಲ ್ಞ ಶಾಸಕ ಪಿಳ್ಳಮುನಿಶ್ಯಾಮಪ್ಪ ಉವಾಚ

`ಸಣ್ಣಪುಟ್ಟ ಸಮಸ್ಯೆಗೆ ನನ್ನ ಬಳಿ ಬರಬೇಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸಣ್ಣಪುಟ್ಟ ಸಮಸ್ಯೆಗೆ ನನ್ನ ಬಳಿ ಬರಬೇಡಿ'

ದೇವನಹಳ್ಳಿ: `ಸಣ್ಣ ಪುಟ್ಟ ಸಮಸ್ಯೆ ನಿವಾರಿಸಿಕೊಡಿ ಎಂದು ಸಾರ್ವಜನಿಕರು ನನ್ನ ಬಳಿ ಬರಬಾರದು' ಎಂಬುದಾಗಿ ಶಾಸಕ ಪಿಳ್ಳಮುನಿಶ್ಯಾಮಪ್ಪ ಹೇಳಿದರು.ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, `ಜನರ ಪ್ರತಿಯೊಂದು ಸಮಸ್ಯೆ ನಿವಾರಿಸುವುದು ನನ್ನ ಜವಾಬ್ದಾರಿಯಲ್ಲ' ಎಂದರು.`ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳ ಸಹಕಾರ ಅಗತ್ಯ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ, ತ್ವರಿತ ಕಡತ ವಿಲೇವಾರಿಯಾಗುವಂತೆ ನೋಡಿಕೊಳ್ಳಬೇಕು' ಎಂದು ಸಲಹೆ ನೀಡಿದರು.

`ಪಹಣಿ ಮತ್ತು ಪಡಿತರ ಭಾವಚಿತ್ರ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ ಎಂಬ ದೂರುಗಳ ಕುರಿತು ಸ್ಪಷ್ಟನೆ ನೀಡುವಂತೆ ತಹಶೀಲ್ದಾರ್ ಅವರಿಗೆ ಅವರು ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಡಾ.ಎನ್.ಸಿ.ವೆಂಕಟರಾಜು, `ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ತಾಂತ್ರಿಕ ದೋಷದಿಂದ ಪಡಿತರ ವ್ಯವಸ್ಥೆಯಲ್ಲಿ ವಿಳಂಬವಾಗುತ್ತಿದೆ. ಈವರೆಗೂ 1,721 ಪಡಿತರ ಅರ್ಜಿಗಳು ಬಂದಿವೆ. ನಿತ್ಯವೂ 400 ರಿಂದ 450 ಅರ್ಜಿಗಳು ಟಪಾಲಿಗೆ ಬರುತ್ತಿವೆ. ಪಹಣಿ ತಿದ್ದುಪಡಿ, ಖಾತೆ ಸೇರಿದಂತೆ 400ಕ್ಕೂ ಹೆಚ್ಚು ಪ್ರಕರಣ ನ್ಯಾಯಾಲಯದಲ್ಲಿವೆ. ಪ್ರಕರಣದ ಇತ್ಯರ್ಥದ ತರುವಾಯ ಪಹಣಿ ವಿತರಿಸಲಾಗುವುದು. ಸಿಬ್ಬಂದಿ ಕೊರತೆಯನ್ನು ಶೀಘ್ರದಲ್ಲಿ ನಿವಾರಿಸಬೇಕು' ಎಂದು ಅವರು ತಿಳಿಸಿದರು.ಸಂಚಾರಿ ಪೊಲೀಸ್ ಇನ್‌ಸ್ಪೆಕ್ಟರ್ ಮಾತನಾಡಿ, `2008ರಿಂದ ಸಂಚಾರಿ ಪೊಲೀಸ್ ಠಾಣೆ ಆರಂಭಗೊಂಡಿದೆ. 2011ರಲ್ಲಿ 67, 2012ರಲ್ಲಿ 57, 2013ರ ಜನವರಿಯಿಂದ ಈವರೆಗೂ 50 ಅಪಘಾತ ಪ್ರಕರಣಗಳು ದಾಖಲಾಗಿವೆ. ಹೆಚ್ಚುತ್ತಿರುವ ವಾಹನ ಸಂಖ್ಯೆಗೆ ಅನುಗುಣವಾಗಿ ಇದುವರೆಗೂ ತಂಗುದಾಣಕ್ಕೆ ಸ್ಥಳವಿಲ್ಲ. ಪುರಸಭೆಗೆ ಜಾಗ ನೀಡುವಂತೆ ಕೋರಲಾಗಿದೆ' ಎಂದರು.ತಾಲ್ಲೂಕು ಆರೋಗ್ಯಾಧಿಕಾರಿ ಪ್ರಿಯಲತಾ ಮಾತನಾಡಿ, `ಅರದೇಶನಹಳ್ಳಿ, ವಿಶ್ವನಾಥಪುರ ಹಾಗೂ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ದೇವನಹಳ್ಳಿ ಸರ್ಕಾರಿ ಆಸ್ಪತ್ರೆ ಶವ ಪರೀಕ್ಷೆ ಕೊಠಡಿಯಲ್ಲಿ ಅಗತ್ಯವಾದ ಮೂಲ ಸೌಕರ್ಯಗಳು ಇಲ್ಲವಾಗಿವೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡುವಂತೆ ಶಾಸಕರಲ್ಲಿ ಕೋರಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮುನಿರಾಜು, ಕೃಷಿ ಇಲಾಖೆಯ ಸಕಾಯಕ ನಿರ್ದೇಶಕಿ ಟಿ.ಬಿ.ವಿನೋದಮ್ಮ, ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಯ ಪ್ರಗತಿ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರಾಧಿಕಾ, ಉಪಾಧ್ಯಕ್ಷ ಪಿ.ಪಟಲಪ್ಪ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಆಂಜಿನಪ್ಪ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.