ಗಂಗಾವತಿ: ತಾಲ್ಲೂಕಿನ ಮಲಕನ ಮರಡಿ ಗ್ರಾಮದ ರೈತ ವೀರನಗೌಡ ಕುಲಕರ್ಣಿ ಅವರ ಕೃಷಿಯಲ್ಲಿನ ಗಮನಾರ್ಹ ಸಾಧನೆಗೆ ಮೂರು ದಶಕಗಳನ್ನು ಹಿಡಿದಿದೆ. ಆದ್ದರಿಂದಲೇ ವೀರನಗೌಡರು ಪ್ರತಿ ವಾರ, ತಿಂಗಳು ನಿರಂತರ ಹಣ ಎಣಿಸುತ್ತಲೇ ಇದ್ದಾರೆ. ಸಂಪ್ರದಾಯಿಕ ಕೃಷಿಯೊಂದಿಗೆ ವೈಜ್ಞಾನಿಕ ಮನೋಭಾವ ಮತ್ತು ತಾಂತ್ರಿಕತೆಯನ್ನು ರೂಢಿಸಿಕೊಂಡರೆ ಕೃಷಿ ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳ ಬಹುದು ಎಂಬುವುದನ್ನು ನಿರೂಪಿಸಿದ್ದಾರೆ.

ಇವರ ಹೊಲಕ್ಕೆ ಕಾಲಿಟ್ಟರೆ ಸಾಕು, ಅಲ್ಲಿನ ಕೃಷಿ ವಿಧಾನ, ಕೈಗೊಂಡ ಚಟುವಟಿಕೆ ಪ್ರತಿಯೊಬ್ಬ ರೈತನನ್ನು ಸ್ವಾವಲಂಬನೆಯತ್ತ ಹೆಜ್ಜೆ ಇಡಬೇಕು ಎಂಬ ದೃಢನಿಶ್ಚಯ ಮಾಡುವಂತೆ ಪ್ರೇರೇಪಿಸುತ್ತವೆ.

ತಮಗಿರುವ 18 ಎಕರೆ ಜಮೀನಿನಲ್ಲಿ ಎರಡು ಎಕರೆಯನ್ನು ಭತ್ತಕ್ಕೆ ಮೀಸಲಿ ಟ್ಟಿದ್ದಾರೆ. ಎರಡೂವರೆ ಎಕರೆಯಲ್ಲಿ ರೇಷ್ಮೆ, ಐದು ಎಕರೆಯಲ್ಲಿ ಪಪ್ಪಾಯಿ, ಮೂರು ಎಕರೆಯಲ್ಲಿ ಬಾಳೆ, ತಲಾ ಅರ್ಧ ಎಕರೆಯಲ್ಲಿ ಕರಿಬೇವು, ನುಗ್ಗೆ ಹಾಕಿದ್ದಾರೆ.

ಲಾರಿ ಮತ್ತು ಬಸ್ಗಳನ್ನು ಕಟ್ಟಲು ಉಪ ಯೋಗಿಸುವ ಅತ್ಯಂತ ಬಲಿಷ್ಠ ವಾದ ಸಿಲ್ವರ್ ಓಕ್ 300 ಗಿಡಗಳನ್ನು ಬೆಳೆಸುತ್ತಿದ್ದಾರೆ. ಅಧಿಕ ಫಸಲು ಬಿಡುವ ಹುಣಸೆ, ಕನಕಾಂಬರ ಗಿಡ ಗಳನ್ನು ನೆಟ್ಟಿದ್ದಾರೆ. ಇದಷ್ಟೇ ಅಲ್ಲದೇ 80ಕ್ಕೂ ಹೆಚ್ಚು ತೆಂಗಿನಮರ, 300ಕ್ಕೂ ಹೆಚ್ಚು ಶ್ರೀಗಂಧದ ಮರ, 400 ಸಾಗುವಾನಿ ಹೊಲದಲ್ಲಿವೆ. ತೇವಾಂಶ ವುಳ್ಳ ಮಲೆನಾಡಿನ ಭಾಗಕ್ಕೆ ಸೀಮಿತವಾದ ಅಡಿಕೆಯನ್ನು ಗಂಗಾವತಿ ಯಂಥ ಪ್ರದೇಶದಲ್ಲೂ ಬೆಳೆಸಬಹುದು ಎನ್ನುವುದನ್ನು ತೋರಿಸುವ ಸಲುವಾಗಿ 300 ಸಸಿಗಳನ್ನು ನಾಟಿ ಮಾಡಿದರು. ಈಗ 80ಕ್ಕೂ ಹೆಚ್ಚು ಮರದಿಂದ ಫಸಲು ತೆಗೆಯುವಲ್ಲಿ ಯಶಸ್ವಿಯಾಗಿ ಗಮನಸೆಳೆದಿದ್ದಾರೆ.

‘ಅಡಿಕೆ ಬೆಳೆಯುವ ಪ್ರಯೋಗಕ್ಕೆ ಮುಂದಾ ದಾಗ ಕೆಲವೊಂದು ಎಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕಾಯಿತು. ಅಡಿಕೆ ಸಸಿಗಳನ್ನು ಬಿಸಿಲಿನ ತಾಪದಿಂದ ರಕ್ಷಿಸಲು ತೆಂಗಿನಮರ ಗಳನ್ನು ಸುತ್ತಲೂ ಬೆಳೆಸಿ ರಕ್ಷಣೆ ನೀಡಿದೆ. ಅದರ ಫಲವಾಗಿ ಅಡಿಕೆ ಫಸಲು ಸಿಕ್ಕಿದೆ' ಎಂದು ವೀರನಗೌಡ ಹೇಳುತ್ತಾರೆ.

ನಾನಾ ಪ್ರಯೋಗಗಳ ಕ್ಷೇತ್ರ: ಭೂಮಿ ಕೇವಲ ಒಂದೇ ಬೆಳೆಗೆ ಸೀಮಿತವಾಗಿರ ಬಾರದು, ಭೂಮಿಯಿಂದ ನಿರಂತರ ಸ್ಥಿರ ಆದಾಯ ಸಿಗಬೇಕು ಎನ್ನುವ ಕಾರಣಕ್ಕೆ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ, ಜೈವಿಕ ಗೊಬ್ಬರ ಉತ್ಪಾದನೆಗೆ ಮುಂದಾಗಿರುವ ಇವರು ವಾರ್ಷಿಕ ಖರ್ಚು ಕಳೆದು ₨1.5 ರಿಂದ 2 ಲಕ್ಷ ಆದಾಯಗಳಿಸುತ್ತಿದ್ದಾರೆ.

ಹನಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿರುವ ವೀರನಗೌಡ, ತಮ್ಮ ಹೊಲದಲ್ಲಿರುವ ಎರಡರಿಂದ ಎರಡೂ ವರೆ ಇಂಚಿನ ನಾಲ್ಕು ಕೊಳವೆಬಾವಿ ಗಳಿಂದ 18 ಎಕರೆಯಲ್ಲಿರುವ ಸಮಗ್ರ ಕೃಷಿಗೂ ನೀರುಣಿಸುವ ಮೂಲಕ ಹಿತ-ಮಿತವಾಗಿ ನೀರನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆಯುತ್ತಿದ್ದಾರೆ.

ಹೊಲದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಮರು ಸಂಸ್ಕರಿಸಿ ಬಳಸುವ ಉದ್ದೇಶಕ್ಕೆ ಜೀವಸಾರ ಘಟಕ ಸ್ಥಾಪಿಸಿಕೊಂಡಿರುವ ಇವರು, ಅದರಿಂದ ಬರುವ ಸಾವ ಯವ ಗೊಬ್ಬರದಿಂದ ತಮ್ಮ ತೋಟ, ಹೊಲಕ್ಕೆ ಬೇಕಾಗುವ ಜೀವಸಾರ ಉಪಯೋಗಿಸಿಕೊಳ್ಳುತ್ತಿದ್ದಾರೆ.
‘ಶೇಂಗಾ, ಸೂರ್ಯಕಾಂತಿ ಇನ್ನಿತರ ಬೆಳೆಯಿಂದ ಪ್ರತಿ ಬೆಳೆಗೆ ₨10 ಸಾವಿರ ದಂತೆ ವರ್ಷದಲ್ಲಿ ಎರಡು ಬೆಳೆಗೆ ₨20 ಸಾವಿರ ಮಾತ್ರ ಆದಾಯ ಗಳಿಸಬಹುದು. ಆದರೆ ಬಹು ವಿಧದ ಬೆಳೆ ಪದ್ಧತಿಯಿಂದ ರೈತನಿಗೆ ನಿರಂತರ ಆದಾಯ ಬರುತ್ತದೆ' ಎನ್ನುತ್ತಾರೆ ವೀರನಗೌಡರ ಪುತ್ರ ಶರಣಬಸವ.

ಕೂಲಿ ಕಾರ್ಮಿಕರ ಕೊರತೆ: ‘ದೇಶದ ಬೆನ್ನೆಲುಬು ಕೃಷಿಕ. ನಮ್ಮ ಬೆನ್ನೆಲುಬು ಕೂಲಿ ಕಾರ್ಮಿಕರು. ಆದರೆ ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿ ಕರು ರೈತನ ಬೆನ್ನೆಲುಬು ಮುರಿಯುತ್ತಿದ್ದಾರೆ. ಕೇವಲ ಕಾರ್ಮಿಕರು ಅಲ್ಲ, ಕೃಷಿ ಇಲಾಖೆ ಯಿಂದಲೂ ರೈತರ ಶೋಷಣೆ ನಡೆದಿದೆ’ ಎಂದು ವೀರನಗೌಡ ಕಳವಳ ವ್ಯಕ್ತಪಡಿಸುತ್ತಾರೆ.

ಕೃಷಿ ಚಟುವಟಿಕೆ ಕೈಗೊಳ್ಳಲು ಸಕಾಲಕ್ಕೆ ಕೂಲಿ ಕಾರ್ಮಿಕರು ದೊರೆಯದಿರು ವುದು ಒಂದು ಸಮಸ್ಯೆಯಾದರೆ, ಕೃಷಿ, ತೋಟಗಾರಿಕೆ, ರೇಷ್ಮೆ,, ಜಲಾನಯನ ಸೇರಿದತೆ ಸಾಕಷ್ಟು ಇಲಾಖೆ ಯಲ್ಲಿ ರೈತರಿಗೆ ಯೋಜನೆಗಳಿವೆ. ಯೋಜನೆ ಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕಿರುವುದು ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸುತ್ತಾರೆ. ಆದರೆ ಇದೇ ಅಧಿಕಾರಿಗಳು ಯೋಜನೆ ಗನ್ನು ರೈತರಿಗೆ ತಲುಪಿಸುವಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಾರೆ. ರೇಷ್ಮೆ ಕೃಷಿಯಲ್ಲಿ ತೊಡಗಿದಾಗ ಸರ್ಕಾರದಿಂದ ₨ 50 ಸಾವಿರ ಸಬ್ಸಿಡಿ ಬಂತು. ಆದರೆ ಅಧಿಕಾರಿಗಳು ₨ 7 ಸಾವಿರ ಲಂಚ ಕೇಳಿದರು ಎಂದು ವೀರನಗೌಡ ಘಟನೆಯೊಂದನ್ನು ನೆನಪಿಸಿಕೊಂಡರು. (ಮೊ:9480145737)

‘ಸ್ವಾವಲಂಬಿಯಾಗಲು ದಾರಿ’
ಒಬ್ಬ ರೈತ ಸ್ವಾವಲಂಬನೆಯಾಗಲು ಏನು ಮಾಡಬೇಕೋ ಅದನ್ನೆಲ್ಲ ವೀರನಗೌಡ ತಮ್ಮ ಹೊಲದಲ್ಲಿ ಮಾಡಿದ್ದಾರೆ. ಕೃಷಿಯಲ್ಲಾಗುವ ತಾಂತ್ರಿಕ ಆವಿಷ್ಕಾರಗಳಲ್ಲಿ ಆಸಕ್ತಿ ಹೊಂದಿರುವ ಇವರು ಅವನ್ನು ಅಳವಡಿಸಕೊಳ್ಳುವ ಮೂಲಕ ಪ್ರಗತಿಪರ ರೈತರಾಗಿದ್ದಾರೆ.
–ಮಸ್ತಾನರೆಡ್ಡಿ, ಕೃಷಿ ತಜ್ಞ, ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ

‘ಗಮನ ಸೆಳೆಯುತ್ತಿದ್ದಾರೆ’
ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಲಾಭವಿಲ್ಲದಂತಾಗಿದೆ. ಇದೇ ಕಾರಣಕ್ಕೆ ಕೃಷಿ ಬಿಟ್ಟು ಪರ್ಯಾಯ ಉದ್ಯೋಗ ಹುಡುಕಿಕೊಳ್ಳುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕಳೆದ 30 ವರ್ಷದಿಂದ ವೀರನಗೌಡ ಬಹುವಿಧದ ಬೆಳೆ ಹಾಕಿ ನಿರಂತರ ಲಾಭಗಳಿಸುವ ಮೂಲಕ ಇತರ ರೈತರ ಗಮನ ಸೆಳೆಯುತ್ತಿದ್ದಾರೆ.
–ಸೂರ್ಯರೆಡ್ಡಿ, ರೈತ, ವಡ್ಡರಹಟ್ಟಿ,

ಸಮಗ್ರ ಕೃಷಿ ಪದ್ಧತಿ ಅಳವಡಿಕೆ’
‘ಸಮಗ್ರ ಕೃಷಿ ಪದ್ಧತಿಯ ಮೂಲಕ ಸ್ಥಿರ ಆರ್ಥಿಕತೆಯತ್ತ ಹೆಜ್ಜೆ ಇಟ್ಟಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ, ಜೈವಿಕ ಘಟಕ ಹೀಗೆ ನಾನಾ ಕ್ಷೇತ್ರದಲ್ಲಿ ಸದಾ ಪ್ರಯೋಗ ಮಾಡುವ ರೈತ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಇದು ಬೇರೆ ರೈತರಿಗೆ ಮಾದರಿಯಾಗಿದೆ.
–ಪಿ.ಆರ್. ಬದ್ರಿಪ್ರಸಾದ, ಕೀಟ ಶಾಸ್ತ್ರಜ್ಞ,
ಕೃಷಿ ಸಂಶೋಧನಾ ಕೇಂದ್ರ, ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.