ಮಂಗಳವಾರ, ಮೇ 18, 2021
22 °C

ಸಮರ್ಪಕ ಪುನರ್ವಸತಿ ಕಲ್ಪಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರದ ಬಸಪ್ಪ ಛತ್ರದಲ್ಲಿನ ಮನೆಗಳಿಂದ ತಮ್ಮನ್ನು ತೆರವುಗೊಳಿಸಿ, ಸಮರ್ಪಕ ವಸತಿ ಸೌಕರ್ಯ ಕಲ್ಪಿಸದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ನಗರಸಭೆ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.ನಗರದ ಪ್ರವಾಸಿ ಮಂದಿರದಿಂದ ನಗರಸಭೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, `ಬಸಪ್ಪ ಛತ್ರದಲ್ಲಿನ ಮನೆಗಳಿಂದ ತೆರವುಗೊಳಿಸಿ ವರ್ಷವಾದರೂ ಸಮರ್ಪಕ ಪುನರ್ವಸತಿ ಕಲ್ಪಿಸಲಾಗಿಲ್ಲ. ಕೆಲವರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಿದರೂ ಯಾವುದೇ ಸೌಕರ್ಯ ಪೂರೈಸಲಾಗಿಲ್ಲ~ ಎಂದು ಆರೋಪಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಸಿಪಿಎಂ ಮುಖಂಡ ಲಕ್ಷ್ಮಯ್ಯ ಮಾತನಾಡಿ, `ಹೈಟೆಕ್ ಆಸ್ಪತ್ರೆ, ಇತರ ಕಟ್ಟಡಗಳನ್ನು ನಿರ್ಮಿಸುವ ಉದ್ದೇಶದಿಂದ ಬಸಪ್ಪ ಛತ್ರದ ಬಡಾವಣೆಯಲ್ಲಿ ವಾಸವಿದ್ದ 40ಕ್ಕೂ ಹೆಚ್ಚು ಕುಟುಂಬವನ್ನು ತೆರವುಗೊಳಿಸಲಾಯಿತು.

 

ಶೀಘ್ರವೇ ವಸತಿ ಸೌಕರ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾಡಳಿತ ನೀಡಿತ್ತು. ನಗರ ಹೊರವಲಯದ ಕಂದವಾರದ ಬಳಿ ಟೆಂಟ್-ಶೀಟುಗಳ ಮನೆಗಳಲ್ಲಿ ತಾತ್ಕಾಲಿಕವಾಗಿ ವಸತಿ ಕಲ್ಪಿಸಲಾಯಿತು. ಆದರೆ ಈವರೆಗೆ ಮೂಲಸೌಕರ್ಯ ಕಲ್ಪಿಸಿಲ್ಲ~ ಎಂದು ದೂರಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.