ಲಂಡನ್ (ಪಿಟಿಐ): ಬ್ರಿಟಿಷ್ ತಜ್ಞ ವೈದ್ಯರ ತಂಡವೊಂದು ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಸಯಾಮಿ ಅವಳಿ ಸಹೋದರಿಯರ ತಲೆಯನ್ನು ಬೇರ್ಪಡಿಸಿ ವೈದ್ಯಕೀಯ ಲೋಕದಲ್ಲಿ ಮಹತ್ವದ ಸಾಧನೆ ಮಾಡಿದೆ.

ಲಂಡನ್ನ ಗ್ರೇಟ್ ಆರ್ಮಂಡ್ ಸ್ಟ್ರೀಟ್ ಮಕ್ಕಳ ಆಸ್ಪತ್ರೆಯ ಡೇವಿಡ್ ಡುನಾವೇ ನೇತೃತ್ವದ ತಜ್ಞರ ತಂಡವು, ರೀತಲ್ ಹಾಗೂ ರೀತಜ್ ಗಬೊರಾ ಎಂಬ 11 ತಿಂಗಳು ವಯೋಮಾನದ ಸಯಾಮಿ ಅವಳಿ ಹೆಣ್ಣುಮಕ್ಕಳ ತಲೆಯನ್ನು ಬೇರ್ಪಡಿಸಿದೆ ಎಂದು `ದಿ ಡೈಲಿ ಮೇಲ್~ ವರದಿ ಮಾಡಿದೆ.

ಈ ಅವಳಿ ಮಕ್ಕಳ ತಲೆಗಳು ಪರಸ್ಪರ ಅಂಟಿಕೊಂಡಿತ್ತು. ಇಂಥ ಪ್ರಕರಣಗಳಲ್ಲಿ ಬದುಕುಳಿಯುವರು ಕೋಟಿಗೊಬ್ಬರು. 2010 ರ ಅಕ್ಟೋಬರ್ನಲ್ಲಿ ಸೂಡಾನ್ನ ಖರ್ಟೊಮ್ನಲ್ಲಿ ಈ ಅವಳಿ ಮಕ್ಕಳು ಜನಿಸಿವೆ. ಈ ಮಕ್ಕಳ ಪೋಷಕರಿಬ್ಬರೂ ವೈದ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.