ಮುಕ್ತಛಂದ
ಶೋಷಿತ ಸಮುದಾಯಗಳ ಮತ್ತು ಬಡವರ ಮಕ್ಕಳೇ ಬರುತ್ತಿರುವ ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಸಲು ಗಂಭೀರ ಪ್ರಯತ್ನ ಮಾಡಬೇಕೇ ಅಥವಾ ಒಣ ಚರ್ಚೆಗಳಲ್ಲಿಯೇ ಕಳೆದುಹೋಗಬೇಕೆ ಎನ್ನುವುದು ಈಗ ನಮ್ಮ ಮುಂದಿರುವ ಪ್ರಶ್ನೆ. ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಂಕೀರ್ಣ ಸವಾಲುಗಳ ಚಿತ್ರಣ ನಮಗೆ ದಕ್ಕಿದೆಯೇ?

`ನಿಮ್ಮ ಹಳ್ಳಿಯಲ್ಲಿಯೇ ಸರ್ಕಾರಿ ಶಾಲೆ ಇದ್ದರೂ ಯಾಕೆ ಖಾಸಗಿ ಶಾಲೆಗೆ ಮಕ್ಕಳನ್ನು ಕಳಿಸ್ತೀರಿ?~ ಎಂದು ಒಬ್ಬರು ಪೋಷಕರನ್ನು ಕೇಳಿದಾಗ ಅವರಿಂದ ಬಂದ ಉತ್ತರ, `ಅಲ್ಲಿ ಇಂಗ್ಲಿಶ್ ಚೆನ್ನಾಗಿ ಹೇಳಿ ಕೊಡ್ತವ್ರೆ. ಮಕ್ಳು ಟೈ, ಶೂಸ್ ಹಾಕ್ಕಂಡು ಶಿಸ್ತಾಗಿ ಹೋಗ್ತವೆ, ಅಲ್ಲಿ ಸ್ಕೂಲ್ ಚೆಂದಾಗೈತೆ?~

ಈಗ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸುವ ಪೋಷಕರು ಹೆಚ್ಚಿನದಾಗಿ ದಲಿತ ವರ್ಗಗಳು, ಕೃಷಿ ಕೂಲಿಕಾರರು ಅಥವಾ ಎರಡು ಮೂರು ಎಕರೆ ಜಮೀನಿದ್ದವರು ಮತ್ತು ಖಾಸಗಿ ಶಾಲೆಗೆ ಮಕ್ಕಳನ್ನು ಫೀಸ್ ಕೊಟ್ಟು ಕಳುಹಿಸಲಾಗದವರು ಮಾತ್ರ.

ಹಾಗೆಂದು ಖಾಸಗಿ ಶಾಲೆಯಲ್ಲಿ ಉತ್ತಮ ಸೌಲಭ್ಯಗಳು ಇವೆ ಅಥವಾ ಇಂಗ್ಲಿಶ್ ಭಾಷೆಯನ್ನು ಚೆನ್ನಾಗಿ ಹೇಳಿಕೊಡ್ತಿದ್ದಾರೆ ಎಂದೇನಲ್ಲ. ಅಲ್ಲಿ ಮಕ್ಕಳು ಕಂಠಪಾಠ ಮಾಡಿ ಬರೀತಾರೆ, ಸರ್ಕಾರಿ ಶಾಲೆಯ ಹಾಗೆ ಬಿಸಿಯೂಟದ ಸೌಲಭ್ಯವಿಲ್ಲ, ತರಬೇತಿ ಪಡೆದ ಶಿಕ್ಷಕರು ಇರುವುದಿಲ್ಲ. ಆದ್ರೂ ಯಾಕಿಂಥ ವ್ಯಾಮೋಹ? ಉತ್ತರ ಅಷ್ಟು ಸರಳವಿಲ್ಲ.

`ಕಾನ್ವೆಂಟ್ಗೆ ಕಳಿಸೋ ಮಕ್ಳಿಗಾದ್ರೆ ಅಪ್ಪ, ಅಮ್ಮಂದಿರು ಮಕ್ಳು ಮನ್ಯಾಗೆ ಏನು ಬರೀತಾರೆ, ಓದ್ತಾರೆ ಅಂತ ಕುಂತು ಓದುಸ್ತಾರೆ, ಬರಸ್ತಾರೆ. ಅದೇ ನಮ್ಮ ಸರ್ಕಾರಿ ಶಾಲೆಗೆ ಮಕ್ಳನ್ನ ಕಳಿಸಿದ ಮೇಲೆ ಅಪ್ಪ, ಅಮ್ಮಂದಿರು ಇತ್ತ ಕಡೆ ತಿರುಗಿ ನೋಡೋದೆ ಇಲ್ಲ~ ಅನ್ನೋದು ಸರ್ಕಾರಿ ಶಾಲೆಗಳ ಶಿಕ್ಷಕ ಶಿಕ್ಷಕಿಯರ ಅಳಲು.

`ಒಳ್ಳೆ ನಾಯಿಕೊಡೆಗಳ ಹಂಗೆ ಎಲ್ಲ ಕಡೆ ಖಾಸಗಿ ಶಾಲೆ ತೆರೆಯಕ್ಕೆ ಸರ್ಕಾರ ಯಾಕೆ ಪರವಾನಗಿ ಕೊಡ್ಬೇಕು?~ ಎಂದು ಗ್ರಾಮ ಪಂಚಾಯಿತಿಯ ಒಬ್ಬರು ಸದಸ್ಯರು ಜೋರಾಗಿ ಕೇಳಿದರೆ ಇನ್ನೊಬ್ಬರು `ಶಿಕ್ಷಕರು ತಮ್ಮ ಮಕ್ಳನ್ನೇ ಖಾಸಗಿ ಶಾಲೆಗೆ ಕಳಿಸ್ತಾರೆ, ಅಂದ್ರೆ ಅವ್ರಿಗೆ ತಾವು ಕಲಿಸೋ ಶಾಲೆ ಬಗ್ಗೆ ನಂಬಿಕೆ ಇಲ್ವಾ? ಮೊದ್ಲು ಅವರು ತಮ್ಮ ಮಕ್ಳನ್ನ ಸರ್ಕಾರಿ ಶಾಲೆಗೆ ಕಳಿಸಲಿ~ ಎಂದು ವಾದಿಸುತ್ತಾರೆ.

`ಮೊದ್ಲು ನಮ್ಮ ಸರ್ಕಾರಿ ಶಾಲೆಗೆ ಕುಡಿಯೋ ನೀರು, ಶೌಚಾಲಯ, ಮೈದಾನ ಹಿಂಗೆ ಬೇಕಾಗಿರೋ ಎಲ್ಲ ಸೌಲಭ್ಯಾನ ಕಲ್ಪಿಸಿಕೊಡಲಿ. ವಿಷಯವಾರು ಶಿಕ್ಷಕರು ಇರ್ಬೇಕು ಸ್ವಾಮಿ. ಖಾಸಗಿ ಕಾನ್ವೆಂಟ್ಗಳಲ್ಲಿ ಒಂದೊಂದು ತರಗತಿಗೆ ಒಬ್ಬೊಬ್ರು ಟೀಚರ್ ಇರ್ತಾರೆ. ಕ್ಲರ್ಕ್ ಅಂತ ಇರ್ತಾರೆ.

ಇಲ್ಲಿ ಹಂಗಲ್ಲ. ನಾವು ಬಿಸಿಯೂಟಕ್ಕೆ ಸಾಮಾನು ತರದ್ರಿಂದ ಹಿಡಿದು ಗಣತಿ, ಚುನಾವಣೆವರೆಗೆ ಎಲ್ಲ ಕೆಲಸಾನೂ ಮಾಡ್ಬೇಕು ಅಂದ್ರೆ ಪಾಠ ಮಾಡದು ಯಾವಾಗ?~- ಇದು ಇನ್ನೊಬ್ಬ ಶಿಕ್ಷಕರ ಪ್ರಶ್ನೆ.

`ಇಂಗ್ಲಿಶ್ ಮೀಡಿಯಂನಾಗೆ ಓದಿದ್ರೆ ಒಳ್ಳೆ ಕೆಲ್ಸ ಸಿಗ್ತೈತೆ. ಇಲ್ಲಿ ಕನ್ನಡದಾಗೆ ಓದಿದ್ರೆ ಕೆಲಸನೂ ಸಿಗಂಗಿಲ್ಲ, ಪಿಯುಸಿ, ಬಿಎ ಮಾಡ್ಕಂಡು ಕೆಲಸ ಸಿಗ್ಲಿಲ್ಲ ಅಂದ್ರೆ ಹುಡುಗ್ರು ವಾಪ್ಸು ಬೇಸಾಯನೂ ಮಾಡಲ್ಲ~ ಎಂಬುದು ಎರಡು ಎಕರೆ ಒಣಭೂಮಿ ಇರುವ ಪೋಷಕರೊಬ್ಬರ ಅಳಲು. `ನಾವಂತೂ ಕೂಲಿ ಕೆಲ್ಸ ಮಾಡ್ಕಂಡು, ಎಂಗೋ ಕಷ್ಟದಾಗೆ ಜೀವನ ಸಾಗಸಕಂಡು ಬಂದೋ.

ನಮ್ಮ ಮಕ್ಳಾದ್ರೂ ಇಂಗ್ಲೀಸು ಕಲ್ತು, ಒಳ್ಳೆ ನೌಕರಿ ಮಾಡ್ಕಂಡು ಇರ್ಲಿ. ನಮ್ಮಂಗೆ ಬವಣೆ ಪಡಾದು ಯಾಕ್ಹೇಳಿ?~ ಎನ್ನುವುದು ಸರ್ಕಾರಿ ಶಾಲೆಗೆ ಮಗಳನ್ನು ಕಳಿಸುವ ಕೂಲಿಗೆ ಹೋಗುವ ತಾಯಿಯೊಬ್ಬಳ ಪ್ರಶ್ನೆ. ಇವೆಲ್ಲ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಂಕೀರ್ಣ ಸವಾಲುಗಳು.

ಖಾಸಗಿ ಶಾಲೆಗಳ ವ್ಯಾಮೋಹ ಹೆಚ್ಚಲು ಮತ್ತು ಸರ್ಕಾರಿ ಶಾಲೆಗಳು ಇಂದು ಮುಚ್ಚುತ್ತಿರುವುದಕ್ಕೆ ಆರ್ಥಿಕ-ಸಾಮಾಜಿಕ ಆಯಾಮವೂ ಇದೆ. ಹಳ್ಳಿಗಳಲ್ಲಿ ಇಂದು ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ.

ಅನಿಶ್ಚಿತ ಮಳೆ ಮತ್ತು ಬೆಳೆ, ಮಧ್ಯವರ್ತಿಗಳ ಹಾವಳಿ, ಆಳಕ್ಕಿಳಿದ ಅಂತರ್ಜಲ ಮಟ್ಟ, ಏರುತ್ತಿರುವ ರಸಗೊಬ್ಬರ ಬೆಲೆ, ಸರ್ಕಾರದ ಎಡಬಿಡಂಗಿ ನೀತಿಗಳು ಇದೆಲ್ಲದರಿಂದ ಚಿಕ್ಕ ಹಿಡುವಳಿದಾರರು ಮತ್ತು ಕೃಷಿಕೂಲಿಕಾರರಿಗೆ ಬದುಕು ಅನಿಶ್ಚಿತತೆಯ ತೂಗುಯ್ಯಾಲೆಯಾಗಿದೆ.

ನಿಶ್ಚಿತ ವೇತನ ಬರುವ, ದೈಹಿಕ ಶ್ರಮ ಬೇಡದ, ಸುರಕ್ಷಿತ ಬದುಕು ಮತ್ತು ಅಂಥದೊಂದು ಬದುಕಿನ ಕನಸು ಕಟ್ಟಿಕೊಡುವ ಖಾಸಗಿ ಶಾಲೆಗಳು ಮತ್ತು ಇಂಗ್ಲಿಶ್ ಕಲಿಕೆ ಯಾರಿಗೆ ಬೇಡ ಹೇಳಿ.

ಪೋಷಕರಾಗಲೀ, ನಾಗರಿಕರಾಗಲೀ ಸರ್ಕಾರಿ ಶಾಲೆಗಳ ಒಳ ಹೋಗಿ ಏನಿದೆ, ಏನಿಲ್ಲ ಎಂದು ನೋಡಿದ್ದೇವೆಯೇ? ಇಲ್ಲ. ಅದು ಹೋಗಲಿ, ನಮ್ಮ ಸರ್ಕಾರಿ ಶಾಲೆಗಳಾದರೂ ಖಾಸಗಿ ಶಾಲೆಗಳಲ್ಲಿ ಇಲ್ಲದ ಏನೆಲ್ಲ ಸೌಲಭ್ಯಗಳು ತಮ್ಮಲ್ಲಿವೆಯೆಂದು ಸಮುದಾಯಕ್ಕೆ ಹೇಳುವ ಪ್ರಯತ್ನ ಮಾಡಿವೆಯೇ ಎಂದರೆ ಅದೂ ಇಲ್ಲ. ಸರ್ಕಾರಿ ಶಾಲೆಗಳು ಮತ್ತು ಪೋಷಕರ ಮಧ್ಯೆ ಇರುವ ಈ ಕಂದರವನ್ನು ಪರಸ್ಪರರು ಹತ್ತಿರ ಬಂದಾಗ ಮಾತ್ರ ತುಂಬಬಹುದು.

ಇನ್ನು ನಮ್ಮ ಗ್ರಾಮ ಪಂಚಾಯಿತಿಗಳು ರಸ್ತೆ, ಬೀದಿದೀಪ, ಉದ್ಯೋಗ ಖಾತ್ರಿ ಯೋಜನೆ, ರಾಜಕೀಯ ಲೆಕ್ಕಾಚಾರಗಳು ಇವುಗಳಲ್ಲಿಯೇ ಮುಳುಗಿವೆಯೇ ವಿನಾ ಸ್ಥಳೀಯ ಸರ್ಕಾರವಾಗಿ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ಏನು ಮಾಡಬಹುದು ಎಂದು ಯೋಚಿಸುತ್ತಿಲ್ಲ.

ಸರ್ಕಾರ ಕೂಡ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವಣ ವ್ಯತ್ಯಾಸವನ್ನು, ಅಸಮಾನತೆಯನ್ನು ಕಾಯ್ದುಕೊಂಡೇ ಬರಲು ಪ್ರಯತ್ನಿಸುತ್ತಿದೆ. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ವಿವಿಧ ಆಯಾಮಗಳಲ್ಲಿ ಪ್ರಾಮಾಣಿಕ ರೀತಿಯಲ್ಲಿ ಪ್ರಯತ್ನ ಮಾಡದೇ, ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೆ ಅನ್ವಯವಾಗುವಂತೆ ಸಮಾನ ಶಿಕ್ಷಣ ನೀತಿಯನ್ನು ಜಾರಿಗೊಳಿಸದೇ ದಲಿತರು, ದುರ್ಬಲ ವರ್ಗಗಳು, ಅವಕಾಶ ವಂಚಿತರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತ ಬಂದಿದೆ.

ಆ ಮೂಲಕ ಈ ವರ್ಗಗಳ ಮಕ್ಕಳು ನೌಕರಿ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೇ ಪಡೆದುಕೊಳ್ಳದಂತೆ ನೋಡಿಕೊಳ್ಳುತ್ತ, ಎಂದಿಗೂ ಮೇಲೆ ಬಾರದಂತೆ ತಡೆಯುವ ಪ್ರಭುತ್ವದ ಹುನ್ನಾರ ಕೂಡ ಇದರಲ್ಲಿ ಅಡಗಿದೆಯೇ ಎಂದು ಅನುಮಾನ ಬರುವಂತೆ ನಮ್ಮ ಶಿಕ್ಷಣ ನೀತಿಗಳು ಇವೆ.

ಇನ್ನೊಂದು ಮುಖ್ಯ ವಿಚಾರವೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಎಂಟು ವಿಧದ ಶಾಲಾ ಶಿಕ್ಷಣವಿದ್ದು, ಈ ಸ್ತರಗಳ ಅಂತರ ಕಡಿಮೆಯಾಗದೇ ಎಲ್ಲ ಮಕ್ಕಳಿಗೆ ಸಮಾನ ಶಿಕ್ಷಣ ಎನ್ನುವುದು ಕನಸಿನ ಮಾತೇ ಸರಿ.

ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಬಿಡಿಬಿಡಿಯಾಗಿ ನೋಡದೇ, ಸಮಗ್ರ ರೀತಿಯಲ್ಲಿ ನೋಡುತ್ತ, ಎಲ್ಲ ಮಕ್ಕಳಿಗೆ ಗುಣಾತ್ಮಕ ಸಮಾನ ಶಿಕ್ಷಣ ಒದಗಿಸುವ ದೃಷ್ಟಿಕೋನವನ್ನು ಕಟ್ಟಿಕೊಳ್ಳುವ ತುರ್ತು ಅಗತ್ಯವಿದೆ.

ಜೊತೆಗೆ ಪರಸ್ಪರ ದೂರುತ್ತಲೇ ಕುಳಿತುಕೊಳ್ಳುವ ಬದಲಿಗೆ ಶಿಕ್ಷಣ ಇಲಾಖೆ, ಪಂಚಾಯತ್ರಾಜ್ ಸಂಸ್ಥೆಗಳು, ನಾಗರಿಕರು, ಶಿಕ್ಷಣ ತಜ್ಞರು ಮತ್ತು ಸಂಘಸಂಸ್ಥೆಗಳು ಎಲ್ಲರೂ ಒಟ್ಟು ಸೇರಿ ಸವಾಲುಗಳ ಪರಿಹಾರಕ್ಕೆ ಸಮನ್ವಯದ ಪ್ರಯತ್ನ ಮಾಡಬೇಕಿದೆ.

ಉಂಬರ್ಟೊ ಇಕೊ ಅವರ `ಖಾಸಗಿ ಶಾಲೆಗಳು ಮತ್ತು ಪ್ರಜಾಪ್ರಭುತ್ವ~ (ಏ.1, ಸಾ.ಪು.) ಚಿಂತನೆಗೆ ಪ್ರತಿಕ್ರಿಯೆ ರೂಪದ ಬರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.