ಮಂಗಳವಾರ, ಜೂನ್ 22, 2021
29 °C

ಸರ್ಕಾರಿ ಶಾಲೆ: ರೋಬೊಟಿಕ್ ಬೋಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಣಿತ ಮತ್ತು ಭೌತ ವಿಜ್ಞಾನದ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವಲ್ಲಿ ನೆರವಾಗುವ ಸ್ಟೆಮ್ ಮತ್ತು ರೋಬೊಟಿಕ್ ಬೋಧನಾ ವಿಧಾನ­ವನ್ನು ನಗರದ ಎರಡು ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲಾಗಿದೆ. ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು  ತರಬೇತಿ ಸಂಸ್ಥೆ ಹಾಗೂ  ಎಲ್.ಎನ್ ಕ್ರಿಯೇಟಿವ್ ಲರ್ನಿಂಗ್ ಸಂಸ್ಥೆಯ ಸಹ­ಯೋಗದಲ್ಲಿ  ವೀರಭದ್ರನಗರ ಮತ್ತು ಹೊಸಕೆರೆಹಳ್ಳಿಯ ಸರ್ಕಾರಿ ಶಾಲೆ­ಗ­ಳಲ್ಲಿ ರೋಬೊಟಿಕ್ ಪ್ರಯೋಗಾಲ­ಯ­­ಗಳನ್ನು ಉಚಿತವಾಗಿ ನಿರ್ಮಿಸ­ಲಾಗಿದೆ.ಪ್ರಯೋಗಾಲಯಗಳು ಜಪಾನಿನ ಕ್ರಿಯೇಟಿವ್ ಲರ್ನಿಂಗ್ ಸಂಸ್ಥೆಯು ರೂಪಿಸಿರುವ ರೋಬೊಟಿಕ್ ತಂತ್ರ­ಜ್ಞಾನ ಅಳವಡಿಸಿರುವ 8 ಲ್ಯಾಪ್‌­ಟಾಪ್ ಮತ್ತು 15 ರೋಬೊಟ್‌­ಗ­ಳನ್ನು ಒಳಗೊಂಡಿದ್ದು  ಬೋಧನೆಗೆ ನುರಿತ ಶಿಕ್ಷಕರನ್ನು ನೇಮಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.