`ಚಿತ್ರದ ಪ್ರೀತಿ ಅದ್ದೂರಿ, ಮಾತು ಅದ್ದೂರಿ, ಕತೆ ಅದ್ದೂರಿ, ಚಿತ್ರೀಕರಣ ಅದ್ದೂರಿ, ಹಾಡು ಅದ್ದೂರಿ~ ನಿರ್ದೇಶಕ ಅರ್ಜುನ್ ತಮ್ಮ ಅದ್ದೂರಿ ಚಿತ್ರವನ್ನು ಬಣ್ಣಿಸಿದ್ದು ಹೀಗೆ.

`ಅಂಬಾರಿ~ಯಂತಹ ಯಶಸ್ವಿ ಚಿತ್ರವನ್ನು ಕೊಟ್ಟ ಅವರ ಪಾಲಿಗೆ ಇದು ಮಹತ್ವದ ಚಿತ್ರ.
`ಅಮ್ಮಾಟೆ~ ಹಾಡು ಸೇರಿದಂತೆ ಚಿತ್ರದ ಸಂಗೀತ ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯವಾಗಿರುವ ಖುಷಿ ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿ ಅದು.

`ಮುಸ್ಸಂಜೆ...~, `ಹೋಗೆ ಹೋಗೆ~, `ಎಬಿಸಿಡಿ~, `ಸಿಂಡ್ರೆಲಾ~ ಹಾಡುಗಳ ಬಗ್ಗೆಯೂ ಉತ್ತಮ ಪ್ರತಿಕ್ರಿಯೆ ಬಂದಿದೆಯಂತೆ. `ಸಿಂಡ್ರೆಲಾ~ ಮತ್ತು `ಹೋಗೆ ಹೋಗೆ~ ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಮಲೇಷ್ಯಾ, ಸಿಂಗಪುರ, ಶ್ರೀಲಂಕಾಗಳಲ್ಲಿ ಸುತ್ತಾಡಿ ಬಂದಿದೆಯಂತೆ. ಅಮ್ಮಾಟೆ ಹಾಡನ್ನು ಭಿನ್ನವಾಗಿ ಚಿತ್ರೀಕರಿಸಲು ಅವರು ನೃತ್ಯ ನಿರ್ದೇಶಕ ಎ. ಹರ್ಷ ಅವರ ಮೊರೆ ಹೋಗಿದ್ದಾರೆ. ಇದೇ 12ರಿಂದ ಹಾಡಿನ ಚಿತ್ರೀಕರಣ ನಡೆಯಲಿದೆ.

ಚಿತ್ರದ ಚಿತ್ರೀಕರಣ ಆರಂಭವಾಗಿ ಸುಮಾರು ಒಂದೂವರೆ ವರ್ಷ ಕಳೆದಿದೆ. ವಿಳಂಬಕ್ಕೆ ಕಾರಣವೇನು ಎಂಬ ಪ್ರಶ್ನೆ ಛೂ ಬಿಟ್ಟಾಗ ಅರ್ಜುನ್ ಲಹರಿಗೆ ಜಾರಿದರು. `ನಾಯಕ ನಟ ಧ್ರುವ ಸರ್ಜಾ ಹೊಸಬರಾಗಿದ್ದುದರಿಂದ ಅವರಿಗೆ ತರಬೇತಿ ನೀಡಬೇಕಿತ್ತು.

ಇದಕ್ಕಾಗಿಯೇ ಸುಮಾರು ಆರು ತಿಂಗಳ ಕಾಲ ಸರಿಯಿತು. ಚಿತ್ರಕತೆಯನ್ನಿಟ್ಟುಕೊಂಡು ಮೂರು ಬಾರಿ ರಿಹರ್ಸಲ್ ಮಾಡಲಾಯಿತು. ನಾಯಕಿ ರಾಧಿಕಾ ಪಂಡಿತ್ ರಿಹರ್ಸಲ್ನಲ್ಲಿ ಪಾಲ್ಗೊಂಡು ಧ್ರುವ ಅವರಿಗೆ ಮಾರ್ಗದರ್ಶನ ಮಾಡಿದರು~ ಎಂದು ಸ್ಮರಿಸಿದರು.

ಧ್ರುವ `ಅಭಿನಯ ತರಂಗ~ದ ವಿದ್ಯಾರ್ಥಿ. ಕತೆಗಾಗಿ ಭಿನ್ನ ರೀತಿಯಲ್ಲಿ ಅವರನ್ನು ತಯಾರಿ ಮಾಡಬೇಕಿತ್ತಂತೆ. ಒಳ್ಳೆಯ ಚಿತ್ರ ಮಾಡುವ ಉದ್ದೇಶದಿಂದಲೇ ವಿಳಂಬನೀತಿ ಅನುಸರಿಸಲಾಗಿದೆಯಂತೆ. ಅಂದಹಾಗೆ ರಿಹರ್ಸಲ್ಗಾಗಿ ನಿರ್ಮಾಪಕರ ಹಣವನ್ನು ವೆಚ್ಚ ಮಾಡಿಲ್ಲವಂತೆ. ಅಲ್ಲಿಗೆ ಶುಭಂ!

ನಾಯಕ ಅಚ್ಚು ನಾಯಕಿ ರಚ್ಚು ಇಬ್ಬರೂ ಕಾಲೇಜು ವಿದ್ಯಾರ್ಥಿಗಳು. ವರ್ಷಾನುಗಟ್ಟಲೆ ಕಟ್ಟಿದ ಪ್ರೇಮದ ಮಹಲು ಒಂದೇ ಬಾರಿಗೆ ಹೇಗೆ ಬಿದ್ದು ಹೋಗುತ್ತದೆ ಎಂಬುದು ಚಿತ್ರದ ಕತೆಯಂತೆ. ಅಚ್ಚುವಿನ ಕತೆ ನಿರ್ದೇಶಕ ಅರ್ಜುನ್ದೇ ಇರಬಹುದೇ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗಲಿಲ್ಲ.

ರಾಧಿಕಾ ಪಂಡಿತ್ ಅವರದು ಚಿತ್ರದಲ್ಲಿ ರಂಗುರಂಗಿನ ಪಾತ್ರ. `ನನ್ನದು ಈ ಕಾಲದ ಹುಡುಗಿಯ ಪಾತ್ರ. ಪಾಶ್ಚಾತ್ಯ ಉಡುಗೆಗಳಲ್ಲೇ ಕಾಣಿಸಿಕೊಳ್ಳುವ ಪಾತ್ರ. ಇಲ್ಲಿ ಅಹಂ, ಭಾವುಕತೆ, ಎಲ್ಲಕ್ಕೂ ಅವಕಾಶವಿದೆ. ಪ್ರೀತಿಯ ಜತೆಗೆ ಜಗಳವೂ ಇದೆ~ ಎಂದರು ಅವರು.

ಪುಟ್ಟ ಮಗುವಿನಂತೆ ಕಣ್ಣುಕಣ್ಣು ಬಿಡುತ್ತ ಕುಳಿತಿದ್ದ ಧ್ರುವ ತಮ್ಮ ತಾಲೀಮಿನ ಬಗ್ಗೆ ಹೆಚ್ಚು ಮಾತನಾಡಿದರು. ವಾಸ್ತವಕ್ಕೆ ಹತ್ತಿರವಾಗಿ ಚಿತ್ರವನ್ನು ತರಲು ಇಷ್ಟೆಲ್ಲಾ ತಯಾರಿ ಬೇಕಾಯಿತಂತೆ. ಹೊಡೆದಾಟಕ್ಕಾಗಿ ಅವರು ಡ್ಯೂಪ್ಗಳನ್ನು ಅವಲಂಬಿಸಿಲ್ಲ. `ನನ್ನ ಸ್ವಭಾವಕ್ಕೆ ಸಂಪೂರ್ಣ ವಿರುದ್ಧವಾದ ಪಾತ್ರ ಇದು. ಇಂಥ ಒಳ್ಳೆಯ ತಂಡದಲ್ಲಿ ಭಾಗವಹಿಸಿದ್ದು ನನ್ನ ಅದೃಷ್ಟ~ ಎಂಬ ಕೃತಜ್ಞತೆ ಅವರಲ್ಲಿ ಹಬೆಯಾಡುತ್ತಿತ್ತು.

ಛಾಯಾಗ್ರಾಹಕ ರವಿಕಿರಣ್ ಚಿತ್ರದ ದೃಶ್ಯಗಳನ್ನು ಹುಣ್ಣಿಮೆ ಬೆಳದಿಂಗಳಿನಲ್ಲಿ ಬಡಿಸಿದ ಊಟಕ್ಕೆ ಹೋಲಿಸಿದರು. ಅವರ ಪ್ರಕಾರ ಹಾಡುಗಳು ಕೇಳಲು ಎಷ್ಟು ಸೊಗಸಾಗಿವೆಯೋ ನೋಡಲೂ ಅಷ್ಟೇ ಚೆನ್ನಾಗಿವೆ. ವಿದೇಶಗಳಲ್ಲಿ ನಡೆಸಿದ ಚಿತ್ರೀಕರಣ ಅದ್ದೂರಿಯಾಗಿ ಮೂಡಿಬಂದಿದೆ ಎಂದರು. ಆನಂದ್ ಆಡಿಯೋದ ಶ್ಯಾಂ ಹಾಡುಗಳು ಹಿಟ್ ಆಗಿರುವ ಖುಷಿಯಲ್ಲಿದ್ದರು.

ಚಿತ್ರೀಕರಣ ವಿಳಂಬವಾದರೂ ಉತ್ತಮವಾಗಿ ಚಿತ್ರ ಮೂಡಿಬಂದಿದೆ ಎಂಬ ತೃಪ್ತಿಯ ಭಾವ ನಿರ್ಮಾಪಕ ಸಿಎಂಆರ್ ಶಂಕರ್ ರೆಡ್ಡಿ ಅವರಲ್ಲಿತ್ತು. ಚಿತ್ರಕ್ಕೆ ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚವಾಗಿದೆ. ರಾಜು ತಾಳಿಕೋಟೆ, ನೀನಾಸಂ ಸತೀಶ್ ಜತೆಗೆ ವಿಶೇಷ ಪಾತ್ರದಲ್ಲಿ ನಾಗತೀಹಳ್ಳಿ ಚಂದ್ರಶೇಖರ್ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.