ಚಿತ್ರದುರ್ಗ(ಟಿ.ಎಸ್.ವೆಂಕಣ್ಣಯ್ಯ ವೇದಿಕೆ): ಪೂರ್ಣಗೊಳ್ಳದ ಭದ್ರಾ ಮೇಲ್ದಂಡೆ ಯೋಜನೆಗೆ ವಿಷಾದ, ಜಿಲ್ಲಾ ಉತ್ಸವ ನಡೆಸದ ಜಿಲ್ಲಾಡಳಿತ ಕ್ರಮಕ್ಕೆ ಆಕ್ಷೇಪ, ಅಭಿವೃದ್ಧಿಯಾಗದ ಪ್ರವಾಸೋದ್ಯಮದ ಬಗ್ಗೆ ಬೇಸರ, ಬರದಲ್ಲೂ ಸಾಂಸ್ಕೃತಿಕ ಶ್ರೀಮಂತಿಕೆ ಮೆರೆಯುತ್ತಿರುವ ಜಿಲ್ಲೆಯ ಬಗ್ಗೆ ಹೆಮ್ಮೆ, ಭಾಷೆ, ಪ್ರದೇಶಾಭಿವೃದ್ಧಿಯ ಪೂರಕ ಚಟುವಟಿಕೆಗಳಿಗೆ ಆದ್ಯತೆ ನೀಡಿ ಎಂಬ ಸಲಹೆ...

ಇವು ಹನ್ನೊಂದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಖ್ಯಾತ ಕಾದಂಬರಿಕಾರ ಬಿ.ಎಲ್.ವೇಣು ಅವರ ಭಾಷಣದ ಮುಖ್ಯಾಂಶಗಳು.

ನಗರದ ಎಸ್ಜೆಎಂ ಸಭಾಂಗಣದಲ್ಲಿ ಸೋಮವಾರದಿಂದ ಆರಂಭವಾಗಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ, `ಚಿತ್ರದುರ್ಗ ಜಿಲ್ಲೆಯ ಸಾಂಸ್ಕೃತಿಕ ವೈಭವ ಕೊಂಡಾಡಿದ ವೇಣು, ಈ ನೆಲದಲ್ಲಿ ಹುಟ್ಟಿದವರು ರಾಜಕೀಯವಾಗಿ, ಧಾರ್ಮಿಕವಾಗಿ, ಸಾಹಿತ್ಯಿಕವಾಗಿ ಜನಪದ, ಸಂಶೋಧನೆ, ರಂಗಕಲೆ, ಚಿತ್ರಕಲೆ ಎಲ್ಲಾ ಕ್ಷೇತ್ರದಲ್ಲೂ ಪ್ರಸಿದ್ಧಿ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು.

ಇಂಥ ಹೆಮ್ಮೆಯ ವಿಚಾರಗಳ ನಡುವೆಯೇ ಚಿತ್ರದುರ್ಗ ಜಿಲ್ಲೆಯನ್ನು ರಾಜಕೀಯವಾಗಿ ಕಡೆಗಣಿಸಲಾಗುತ್ತಿದೆ ಎಂದು ವಿಷಾದಿಸಿದರು. ಇಲ್ಲಿನ ಜನಪ್ರತಿನಿಧಿಗಳಿಗೆ ಓಟು ಬೇಕೇ ಹೊರತು, ಪುರೋಭಿವೃದ್ಧಿ, ಜಿಲ್ಲಾಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲ. ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂಬ ಮನಸ್ಸೂ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪೂರ್ಣಗೊಳ್ಳದ ಭದ್ರಾ: ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಷ್ಟ್ರನಾಯಕ ನಿಜಲಿಂಗಪ್ಪ ಅವರು, ಆ ಕಾಲದಲ್ಲಿ ಮನಸ್ಸು ಮಾಡಿದ್ದರೆ, ್ಙ 3 ಕೋಟಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಬಹುದಿತ್ತು. ಇದೀಗ ಕೊಳಕು ರಾಜಕೀಯದಲ್ಲಿ ಸಿಲುಕಿ ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದರೂ, ಹಣವೆಲ್ಲ ಅವರಿವರ ಜೇಬು ತುಂಬಿಕೊಳ್ಳುತ್ತಾ, ಆ ಯೋಜನೆ ಭರವಸೆಯಾಗಿಯೇ ಉಳಿದಿದೆ. ಇದಕ್ಕೆ ನಮ್ಮ ನಾಯಕರಲ್ಲಿರುವ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ: `ಚಿತ್ರದುರ್ಗ ಪ್ರವಾಸಿ ತಾಣವಾಗಬೇಕೆಂದು ಹಂಬಲಿಸಿ ನಡೆಸಿದ ಹೋರಾಟಕ್ಕೆ ಈಗ 60ರ ಹರೆಯ. ಆದರೆ ದುರ್ಗವನ್ನಾಳಿದ ಜನಪ್ರತಿನಿಧಿಗಳು ಈ ಕೂಗಿಗೆ ದನಿಗೂಡಿಸಲೇ ಇಲ್ಲ. ಈ ಕುರಿತು ಆಗಾಗ ನನ್ನಂಥ ಸಾಹಿತಿಗಳು ಬರೆದು ಭಾಷಣ ಬಿಗಿದದ್ದಷ್ಟೇ ಭಾಗ್ಯ' ಎಂದು ಬೇಸರ ವ್ಯಕ್ತಪಡಿಸಿದರು.

`ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸಾವಿರಾರು ಮಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸಿಗುತ್ತದೆ. ಈ ಬಗ್ಗೆ ಹಿಂದಿನ ಸರ್ಕಾರದ ಪ್ರವಾಸೋದ್ಯಮ ಸಚಿವರಿಗೆ ಮನವಿ ಸಲ್ಲಿಸಿದ್ದೆವು. ಆ ಮನವಿ ಅವರೊಡನೆಯೇ ಜೈಲು ಪಾಲಾಗಿದೆ' ಎಂದ ಮಾರ್ಮಿಕವಾಗಿ ನುಡಿದರು.

ನಾಲ್ಕೈದು ವರ್ಷಗಳಲ್ಲಿ ಯಾರ್ಯೋರೋ ಜಿಲ್ಲಾ ಉಸ್ತುವಾರಿ ಸಚಿವರಾದರು. ಅವರೆಲ್ಲ ಆಗಸ್ಟ್ 15, ಜನವರಿ 26ಕ್ಕೆ ಬಂದು ಹೋಗುವವರಾಗಿದ್ದರು. ಜಿಲ್ಲೆಗೆ ಬರುವ ಸರ್ಕಾರಿ ಅಧಿಕಾರಿಗಳ ಪಾಲಿಗೆ ದುರ್ಗವೊಂದು `ಹುಲ್ಲುಗಾವಲು'. ಹಾಯಾಗಿ ಮೇಯ್ದುಕೊಂಡು ಹೋಗುವುದನ್ನು ಬಿಟ್ಟರೆ ಉಳಿದಂತೆ ಪರಮ ತಾತ್ಸರ' ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಉತ್ಸವ ನಡೆಯಲಿ: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಿಗದಿತ ಅವಧಿಯಲ್ಲಿ `ಜಿಲ್ಲಾ ಉತ್ಸವ'ಗಳು ನಡೆಯುತ್ತವೆ. ಆದರೆ ಆಳುವ ಸರ್ಕಾರಕ್ಕಾಗಲಿ, ಆಡಳಿತ ನಡೆಸುವ ಅಧಿಕಾರಿಗಳಿಗಾಗಲಿ `ಚಿತ್ರದುರ್ಗದ ಉತ್ಸವ' ನೆನಪಾಗುವುದೇ ಇಲ್ಲ. ಇದು ಶೋಚನೀಯ. ಬುಡಕ್ಕಟ್ಟು ನೆಲದಲ್ಲಿ ಸಾಂಸ್ಕೃತಿಕ ಚೆಲುವು ಬಿಂಬಿಸಬೇಕಾಗಿರುವ ಜನಪ್ರತಿನಿಧಿಗಳು, ನಿರ್ಲಕ್ಷ್ಯ ತಾಳಿದ್ದಾರೆ' ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.

`ಚಳ್ಳಕೆರೆಯಲ್ಲಿ ಜವಳಿ ಪಾರ್ಕ್ ನಿರ್ಮಾಣವಾಗುತ್ತಿದೆ. ಇದರಿಂದ ನೂರಾರು ಜನರಿಗೆ ನೌಕರಿ ದೊರೆಯಬಹುದೆಂಬ ನಿರೀಕ್ಷೆ ಇದೆ. ಚಿತ್ರದುರ್ಗ - ತುಮಕೂರು ಜಿಲ್ಲೆ ರೈಲು ಮಾರ್ಗದ ಯೋಜನೆ ನನೆಗುದಿಗೆ ಬಿದ್ದಿದೆ. ದೊಡ್ಡಸಿದ್ದವ್ವನಹಳ್ಳಿಯಲ್ಲಿ ರೈಲ್ವೆ ವರ್ಕ್ಶಾಪ್ ಆಗಬೇಕಾಗಿದೆ. ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಪುನರಾರಂಭವಾಗಬೇಕಿದೆ. ನನೆಗುದಿಗೆ ಬಿದ್ದಿರುವ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ತುರ್ತು ಗಮನ ಹರಿಸಬೇಕಿದೆ' ಎಂದು ಅಧ್ಯಕ್ಷರು ಸಲಹೆ ನೀಡಿದರು.

ಈಗ ಎಚ್.ಆಂಜನೇಯ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಕನಿಷ್ಠ ಅವರ ಅವಧಿಯಲ್ಲಾದರೂ ಚಿತ್ರದುರ್ಗದ ಜನರ ಅಭಿವೃದ್ಧಿಯ ಕನಸುಗಳು ಈಡೇರಲಿ. ಅವರ ಕನಸುಗಳಿಗೆ ಸಚಿವರು ಬಣ್ಣ ತುಂಬಲಿ ಎಂದರು.

ಪರಿಶ್ರಮ, ಪರಾಕ್ರಮ ಪ್ರೀತಿ-ವಾತ್ಸಲ್ಯದಿಂದಾಗಿ ಅದ್ಧೂರಿಯಾಗಿ ಈ ಸಮ್ಮೇಳನ ನಡೆದಿದೆ. ಸಾಸಿವೆ ಕಾಳಿನಷ್ಟು ಸಾಧನೆಗೆ ಸಾಗರದಷ್ಟು ಪ್ರೀತಿ ತೋರಿಸಿ, ನನ್ನನ್ನು ಸಮ್ಮೇಳನಾಧ್ಯಕ್ಷನನ್ನಾಗಿ ಮಾಡಿದ್ದೀರಿ. ಮುಂದಿನ ಕೆಲಸಗಳಿಗೆ ನೀವೆಲ್ಲ ನನಗೆ ಪ್ರೇರಕ ಶಕ್ತಿಯಾಗಿ ನಿಲ್ಲಿರಿ ಎಂದು ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ವಿನಂತಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.