ತುಮಕೂರು: ಮಲ್ಲಸಂದ್ರ ಕೆರೆಯಲ್ಲಿ ಒಂದು ವಾರದಿಂದ ಬೀಡುಬಿಟ್ಟಿದ್ದ ಆರು ಕಾಡಾನೆಗಳ ಹಿಂಡನ್ನು ಸೋಮವಾರ ಕುಶಾಲನಗರದ ದುಬಾರೆ ಆನೆ ಶಿಬಿರದ ಹರ್ಷ, ಪ್ರಶಾಂತ್ ಹಾಗೂ ವಿಕ್ರಂ ಸಹಾಯದಿಂದ ಕಾಡಿಗೆ ಅಟ್ಟುವ ಕಾರ್ಯಾಚರಣೆ ಆರಂಭಿಸಲಾಯಿತು.

ಭಾನುವಾರ ರಾತ್ರಿ ನಗರಕ್ಕೆ ಬಂದಿಳಿದು, ಗೊಲ್ಲಹಳ್ಳಿಯಲ್ಲಿ ಬಿಡಾರ ಹೂಡಿದ್ದ ಸಾಕಾನೆಗಳು ಸೋಮವಾರ ಮಧ್ಯಾಹ್ನ 3 ಗಂಟೆಗೆ ಕಾರ್ಯಾಚರಣೆಗೆ ಇಳಿದವು.

ಕೆರೆಯ ಮಧ್ಯಭಾಗದಲ್ಲಿ ತಂಗಿದ್ದ ಕಾಡಾನೆಗಳನ್ನು ನೀರಿನಿಂದ ಹೊರ ಬರುವಂತೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು. ಸಾಕಾನೆಗಳ ಕಾರ್ಯಾಚರಣೆ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಸಾರ್ವಜನಿಕರು ನೆರೆದಿದ್ದರು.

ಕಾಡಾನೆ ಹಿಂಡು ಹೊರಬರುತ್ತಿದ್ದಂತೆ ಸಾಕಾನೆಗಳು ಅವುಗಳ ಜತೆಯಲ್ಲೇ ಮುಂದೆ ಸಾಗಿದವು. ಮಲ್ಲಸಂದ್ರ, ಹೊನ್ನುಡಿಕೆ ಮಾರ್ಗದಲ್ಲಿ ಆನೆಗಳನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶದತ್ತ ಓಡಿಸುವ ಕಾರ್ಯಾಚರಣೆ ನಡೆಯಿತು.
ಸಾಕಾನೆಗಳು ಹೆಜ್ಜೆ ಹಾಕುತ್ತಿದ್ದರೆ, ಅವುಗಳನ್ನು ಕಾಡಾನೆಗಳು ಹಿಂಬಾಲಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.