ಬುಧವಾರ, ಜೂನ್ 23, 2021
30 °C

ಸಾಕ್ಷರತೆಯಿಂದ ಕಾರ್ಮಿಕರ ಅಸ್ತಿತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಕಾರ್ಮಿಕರು ಸಾಕ್ಷರರಾಗುವ ತನಕ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿರುತ್ತದೆ. ಸಮಾಜ ಸಾಕ್ಷರವಾದಾಗ ಕಾರ್ಮಿಕರ ಬದುಕಿಗೆ ನಿಜವಾದ ಅಸ್ತಿತ್ವ ದೊರೆಯತ್ತದೆ~ ಎಂದು ಬಿ.ಎಲ್.ಡಿ.ಇ. ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.ಇಲ್ಲಿಯ ಎ.ಎಸ್.ಪಿ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಯು.ಜಿ.ಸಿ. ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ `ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ~ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.`ಬಳ್ಳಾರಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಹಸ್ರಾರು ಕಾರ್ಮಿಕರನ್ನು ಗಣಿಗಳಲ್ಲಿ ದುಡಿಸಿಕೊಳ್ಳಲಾಯಿತು. ಗಣಿಗಾರಿಕೆ ಮುಚ್ಚಿದ ಮೇಲೆ ಅವರು ನಿರ್ಗತಿಕರಾಗಿದ್ದಾರೆ. ಅವರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಕನಿಷ್ಠ ಸವಲತ್ತುಗಳು ದೊರಕಲಿಲ್ಲ. ಆ ಜನ ಇಂದು ಬೀದಿಗೆ ಬಂದಿದ್ದಾರೆ~ ಎಂದು ವಿಷಾದಿಸಿದರು.ಬೆಳಗಾವಿಯ ಆರ್.ಎಲ್. ಕಾನೂನು ಕಾಲೇಜಿನ ನಿರ್ದೇಶಕ ಡಾ. ಡಿ.ವೈ. ಕುಲಕರ್ಣಿ, ಪಾಶ್ಚಿಮಾತ್ಯ ಜಗತ್ತಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೇರಳವಾಗಿ ನಡೆಯುತ್ತಿದೆ ಎಂದರು.ಬಿಎಲ್‌ಡಿಇ ವೈದ್ಯಕೀಯ ವಿವಿ ಕುಲಪತಿ ಡಾ.ಬಿ.ಜಿ. ಮೂಲಿಮನಿ, ಗಣಿ ಉದ್ದಿಮೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಜೀವನದ ಸ್ವರೂಪವನ್ನೇ ಬದಲಿಸಿದೆ ಎಂದು ಹೇಳಿದರು.ಆಡಳಿತಾಧಿಕಾರಿ ಎಸ್.ಎಚ್. ಲಗಳಿ, ಕೆ.ಎಸ್. ಬಿರಾದಾರ, ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ದೇವೇಂದ್ರ ಅಗರವಾಲ್, ಎಸ್.ಎಸ್. ಕೋರಿ, ಡಾ.ಮಹಾಂತೇಶ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.ವೈ.ಬಿ. ಪಟ್ಟಣಶೆಟ್ಟಿ, ಎಂ.ಎಸ್. ಝಳಕಿ, ಶರದ್ ರೂಡಗಿ, ವಿಲಾಸ ಬಗಲಿ ಮತ್ತಿತರರು ಭಾಗವಹಿಸಿದ್ದರು.

ಪ್ರಾಚಾರ್ಯ ಎಸ್.ಎಸ್. ಚೌಕಿಮಠ ಸ್ವಾಗತಿಸಿದರು. ಎಸ್.ಜಿ. ತಾಳಿಕೋಟಿ ವಂದಿಸಿದರು. ಪ್ರೊ.ಸಂಜೀವಿನಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.