ಶುಕ್ರವಾರ, ಜನವರಿ 24, 2020
16 °C

ಸಾಧಿಸುವ ಛಲ ಬೆಳೆಸಿಕೊಳ್ಳಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೀಣ್ಯ ದಾಸರಹಳ್ಳಿ: `ಹುಟ್ಟು ಸಾವಿನ ನಡುವೆ ಸಾಧಿಸುವ ಛಲವನ್ನು ಬೆಳಸಿಕೊಂಡು ಸಮಾಜಕ್ಕೆ ನೆನಪುಳಿಯುವಂತಹ ಕೊಡುಗೆಯನ್ನು ದೇಶಕ್ಕೆ ಬಿಟ್ಟು ಹೋಗಬೇಕು. ಆಗ ನಿಮ್ಮ ಹೆಸರು ಶಾಶ್ವತವಾಗಿ ಉಳಿಯಲಿದೆ~ ಎಂದು ಶಾಸಕ ಎಸ್.ಮುನಿರಾಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಹೆಸರಘಟ್ಟ ರಸ್ತೆಯ ಲಕ್ಷ್ಮೀಪುರದಲ್ಲಿರುವ ಅಶೋಕ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿಜ್ಞಾನ ಉದ್ಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಕೆ.ಆರ್.ಪ್ರಭು ಮಾತನಾಡಿದರು. ಕ್ರಿಕೆಟ್ ಆಟಗಾರ ದೊಡ್ಡ ಗಣೇಶ್, ಶಿಕ್ಷಣ ತಜ್ಞ ದಿಕ್ಷೀತ್, ಶಾಲೆಯ ಸಂಸ್ಥಾಪಕರಾದ ಕೆ.ಸಿ.ಅಶೋಕ್, ಕೆ.ಸಿ.ಶ್ರೀನಿವಾಸ್, ದೇವಕಿ ಅಶೋಕ್ ಸ್ಥಳೀಯ ಮುಖಂಡರಾದ ಶಾಂತಮ್ಮ, ಜಗದೀಶ್, ಜಯರಾಮು, ವಿಜಯಕುಮಾರ್, ವಿನೋದ್, ನಾಗರಾಜು ಇತರರು ಹಾಜರಿದ್ದರು.ವಸ್ತು ಪ್ರರ್ದಶನ, ನೃತ್ಯ, ಚಿತ್ರ ಕಲೆ ಸೇರಿದಂತೆ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರತಿಕ್ರಿಯಿಸಿ (+)