ಗುರುವಾರ , ಮೇ 28, 2020
27 °C

ಸಾಮಾಜಿಕ ಅನಿಷ್ಟ ಪದ್ಧತಿ ವಿರುದ್ಧ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬೆಂಗ ಳೂರು ಯಕ್ಷದೇಗುಲ ಕಲಾ ತಂಡದಿಂದ ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಹಾಗೂ ಅಯೋಡಿನ್ ಬಳಕೆಯ ಮಹತ್ವದ ಬಗ್ಗೆ ಯಕ್ಷಗಾನದ ಮೂಲಕ ಅರಿವು ಮೂಡಿಸಲಾಯಿತು. ಬಾಲ್ಯ ವಿವಾಹ ಒಳ್ಳೆಯದಲ್ಲ. ಮಕ್ಕಳು ಪ್ರಾಪ್ತ ವಯಸ್ಸಿಗೆ ಬಾರದ ಸಮಯದಲ್ಲಿ ಮದುವೆ ಮಾಡಿದರೆ ಸಮಾಜದ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ. ಹುಟ್ಟುವ ಮಕ್ಕಳಲ್ಲಿ ಅಪೌಷ್ಟಿಕತೆ ತಲೆದೋರುತ್ತದೆ. ಬಾಲ್ಯ ವಿವಾಹಕ್ಕೆ ಅನಕ್ಷರತೆ ಕಾರಣ ಎಂದು ತಿಳಿವಳಿಕೆ ನೀಡಲಾಯಿತು.ಸರ್ಕಾರದಿಂದ ಅನೇಕ ಸವಲತ್ತು ಸಿಗುತ್ತಿವೆ. ಅರ್ಹರು ಅವುಗಳನ್ನು ಬಳಸಿಕೊಳ್ಳಬೇಕು. ಅನಕ್ಷರತೆ ಹೊಗಲಾಡಿಸಬೇಕು. ವರದಕ್ಷಿಣೆ ಹೆಸರಿನಲ್ಲಿ ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಹೆಣ್ಣು ಸಹ ಪುರುಷನಷ್ಟೇ ಸರಿಸಮಾನಳು. ಈ ಬಗ್ಗೆ ಅರಿವು ಹೊಂದಬೇಕು ಎಂದು ಯಕ್ಷಗಾನದ ಕಲಾವಿದರು ತಿಳಿಸಿಕೊಟ್ಟರು.ಭ್ರಷ್ಟಾಚಾರ ನಿರ್ಮೂಲನೆ ಯಾದಾಗ ಸಮಾಜ ಅಭಿವೃದ್ಧಿ ಕಾಣುತ್ತದೆ. ಗ್ರಾಮ, ಸಾರ್ವಜನಿಕ ಸ್ಥಳ ಹಾಗೂ ಶಾಲಾ ಆವರಣಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಇದರಿಂದ ಪರಿಸರ ಉತ್ತಮವಾಗಿ ರುತ್ತದೆ. ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು. ಸಮಾಜ ದಲ್ಲಿ ಇಂದು ಜಾತೀಯತೆ ತಾಂಡವ ವಾಡುತ್ತಿದೆ. ಇದರ ನಿರ್ಮೂಲನೆ ಮಾಡಿದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಯಕ್ಷ ಗಾನ ಕಲಾವಿದರು ಮಕ್ಕಳ ಮುಂದೆ ಅಭಿನಯಿಸಿ ಅರಿವು ಮೂಡಿಸಿದರು. ಶಿಕ್ಷಕರಾದ ಜಯಶಂಕರ್, ಮಂಜುನಾಥ್, ಪ್ರಕಾಶ್, ಟಿ.ಡಿ. ಮಹದೇವಪ್ಪ, ನಾಗಯ್ಯ, ನಾಗರತ್ನಮ್ಮ, ಸುಮನ್‌ಕುಮಾರಿ, ಮಂಜುಳಾ ಇತರರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.