ಮಂಗಳವಾರ, ಜೂನ್ 15, 2021
27 °C

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ: ಅನುಮತಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ(ಪಿಟಿಐ): ‌ಸಾಮಾಜಿಕ ಮಾಧ್ಯ­ಮ­ಗಳಲ್ಲಿ ಚುನಾವಣಾ ಪ್ರಚಾರ ನಡೆಸಲು ಚುನಾವಣಾ ಆಯೋಗ ನಿಯೋಜಿಸಿರುವ ಸಮಿತಿಯ ಅನು­ಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು  ತಮಿಳುನಾಡಿನ ಮುಖ್ಯ ಚುನಾ­ವಣಾಧಿ­ಕಾರಿ ಪ್ರವೀಣ ಕುಮಾರ ಹೇಳಿದ್ದಾರೆ.‘ಎಐಡಿಎಂಕೆ ಸಾಮಾಜಿಕ ಮಾಧ್ಯಮ­ದಲ್ಲಿ ನಡೆಸಲು ಉದ್ದೇಶಿಸಿ­ರುವ ಚುನಾ­ವಣಾ ಪ್ರಚಾ­ರದ ಕುರಿತು ಸ್ಪಷ್ಟನೆ ನೀಡು­ವಂತೆ ಚುನಾವಣಾ ಆಯೋಗ ಹೇಳಿದೆ. ಪಕ್ಷವು ತನ್ನ ಪ್ರಚಾರ ವಿಷಯಗಳನ್ನು ಒಳ­­ಗೊಂಡ ಸಿಡಿಯನ್ನು ಚುನಾವಣಾ ಆಯೋಗಕ್ಕೆ ನೀಡುತ್ತದೆ. ಚುನಾವಣಾ ಆಯೋಗ­ದಿಂದ ಈ ಉದ್ದೇಶ­ಕ್ಕಾಗಿಯೇ  ನಿಯೋಜಿತ­ಗೊಂಡ ಸಮಿತಿಯ ಸಿಡಿ­ಯನ್ನು ವೀಕ್ಷಿಸು­ತ್ತದೆ’ ಎಂದು ಪ್ರವೀಣ ಹೇಳಿದ್ದಾರೆ.ಫೇಸ್‌ಬುಕ್‌ ಮೊರೆ ಹೋದ ಸಿಬಲ್‌

ನವದೆಹಲಿ ವರದಿ:  ಚುನಾವಣಾ ಕಾವು ಏರುತ್ತಿದ್ದಂತೆಯೇ ಕೇಂದ್ರ ಕಾನೂನು ಮತ್ತು ದೂರಸಂಪರ್ಕ ಖಾತೆ ಸಚಿವ ಕಪಿಲ್‌ ಸಿಬಲ್‌ ಪ್ರಚಾರ­ಕ್ಕಾಗಿ ಸಾಮಾಜಿಕ ಜಾಲತಾಣ­ಗಳ ಮೊರೆ ಹೋಗಿದ್ದಾರೆ.ರಾಜಕೀಯ ವಿರೋಧಿಗಳು ತಮ್ಮ ವಿರುದ್ಧ ನಡೆಸುತ್ತಿರುವ ಅಪಪ್ರಚಾರಕ್ಕೆ   ಫೇಸ್‌ಬುಕ್‌ ಮೂಲಕ ಉತ್ತರಿಸುತ್ತಿದ್ದಾರೆ.

ಚುನಾವಣಾ ವೇಳೆ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದ್ದು, ಸರಿಯಾದ ಮಾಹಿತಿಯನ್ನು ಅವರಿಗ ತಲುಪಿಸಲು ಸಾಮಾಜಿಕ ಜಾಲತಾಣ­ಗಳ ಅಗತ್ಯವಿದೆ ಎಂದು ಸಿಬಲ್‌ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.‘ಫೇಸ್‌ಬುಕ್‌ ಮೂಲಕ ಹೆಚ್ಚು ಜನರನ್ನು ತಲುಪಬಹುದು. ಬಿಜೆಪಿಯ ರಾಜಕೀಯ ಪ್ರೇರಿತ  ಅಪಪ್ರಚಾರ ತಡೆ­ಯಲು    ಮತ್ತು ನನ್ನ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಸಲು ಫೇಸ್‌­ಬುಕ್‌ ಅನುಕೂಲವಾಗಲಿದೆ’ ಎಂದು ಸಿಬಲ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.