`ಗಂಟೆಗೆ 300 ಕಿ.ಮೀ. ವೇಗದಲ್ಲಿ ಚಲಿಸುವ ರೈಲು ಬಂತು~, `ಟೈಟಾನಿಕ್ಗಿಂತ ಎರಡು ಪಟ್ಟು ತೂಕದ ಹಡಗು ನಿರ್ಮಾಣವಾಗಿದೆ~, ಈಗ ಬೆಂಗಳೂರಿನಲ್ಲಿ `ಮೆಟ್ರೊ~ ಸದ್ದು. ಇವೆಲ್ಲ ಜಗತ್ತು `ಜಾಗತಿಕ ಹಳ್ಳಿ~ಯಾಗಲು ಕಾರಣ ಎನ್ನಲಾಗುತ್ತದೆ. ಇಂತಹ ವಿಸ್ಮಯ ಸಾಧನಗಳ ಹಿಂದೆ ಸಾರಿಗೆ (ಟ್ರಾನ್ಸ್ಪೋರ್ಟ್) ಎಂಜಿನಿಯರ್ಗಳ ಪರಿಶ್ರಮ, ಬುದ್ಧಿಮತ್ತೆ ಹಾಗೂ ಕ್ರಿಯಾಶೀಲತೆ ಇದೆ ಎಂದರೆ ಅಚ್ಚರಿಯಾಗಬಹುದು.

ಸಂಕೀರ್ಣವಾಗಿರುವ ಸಾರಿಗೆ ಹಾಗೂ ಸಂಪರ್ಕ ಸಾಧನಾ ಕ್ಷೇತ್ರದಲ್ಲಿ ದುಡಿಯುವ ಈ ಎಂಜಿನಿಯರ್ಗಳಿಗೆ ಈಗ ಹೆಚ್ಚು ಬೇಡಿಕೆ. ರೈಲು, ಬಸ್, ವಿಮಾನ, ಬಹೂಪಯೋಗಿ ವಾಹನ, ದ್ವಿಚಕ್ರ ವಾಹನ ಯಾವುದೇ ಇರಲಿ ಅಲ್ಲಿ ಇವರ `ಕೈಚಳಕ~ ಇದ್ದೇ ಇರುತ್ತದೆ. ವಾಹನಗಳ ವಿನ್ಯಾಸ, ಇಂಧನ ಕ್ಷಮತೆ, ವಿಸ್ತಾರ, ಗಾತ್ರ, ಹೊರ ನೋಟ, ಸಾಮರ್ಥ್ಯ ಹಾಗೂ ಸುರಕ್ಷತೆ ಕುರಿತು ನಿರ್ಧರಿಸುವವರು ಇವರೇ.

ಜಗತ್ತಿನಲ್ಲಿ ಜನಸಂಖ್ಯೆ ಏರುತ್ತಿರುವ ಗತಿಗಿಂತ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಬೇಡಿಕೆ, ಪರಿಮಿತಿ ಅರಿತು ವಾಹನ ತಯಾರಿಸುವರು ಟ್ರಾನ್ಸ್ಪೋರ್ಟ್ ಎಂಜಿನಿಯರ್ಗಳು. ನೂತನ ತಂತ್ರಜ್ಞಾನದಿಂದ ಸಮುದ್ರ, ಗಾಳಿ, ಭೂಮಿ ಯಾವ್ಯಾವ ಪ್ರದೇಶದಲ್ಲಿ ಸಂಚರಿಸಲು ಸಾಧ್ಯವಿದೆಯೋ ಅಲ್ಲಿ ಇವರ ಬುದ್ಧಿ ನುಗ್ಗಬೇಕು. ವೇಗ, ವೆಚ್ಚ, ಅಗತ್ಯ, ಲಭ್ಯ ಇರುವ ಭೂಭಾಗ, ಪರಿಸರದ ಮೇಲಿನ ಪರಿಣಾಮ ಕುರಿತು ವಿಸ್ತೃತ ಅಧ್ಯಯನ ನಡೆಸುವ ಜತೆಗೆ ಹೊಸ ಮಾರ್ಗ ಸೃಷ್ಟಿಗೆ ನಿರಂತರ ಶೋಧನೆ, ಚಾಲಕರ ಸುರಕ್ಷತೆ ಬಗ್ಗೆ ಪ್ರತ್ಯೇಕ ಅಧ್ಯಯನ ನಡೆಸಬೇಕು.

ಅಂತಿಮವಾಗಿ ಎಂಜಿನಿಯರ್ಗಳು ಒಪ್ಪುವ ವಾಹನ ತಯಾರಿಕೆಗೆ ದೊಡ್ಡ ಪ್ರಮಾಣದಲ್ಲಿ ಹರಾಜು ನಡೆಯುತ್ತದೆ. ಅಲ್ಲಿ ಗೆದ್ದವರು ಈ ಎಂಜಿನಿಯರ್ಗಳ ಬುದ್ಧಿಶಕ್ತಿ ಬಳಸಿಕೊಳ್ಳಬಹುದು. ಇರುವ ಒಂದೇ ಭೂಮಿ, ಒಂದೇ ಆಕಾಶದಲ್ಲಿ ನಾವು ಬದುಕಬೇಕು ಹಾಗೂ ನಮ್ಮ ವಾಹನ ಸಂಚರಿಸಬೇಕು ಎಂಬ ನಿಯಮದಡಿ ಚಿಂತಿಸುವ ತಂಡಕ್ಕೆ ವಿಶೇಷ ಅಧ್ಯಯನ ಅಗತ್ಯವಿರುತ್ತದೆ. ಅದಕ್ಕಾಗಿಯೇ ಈಗ ದೇಶದಲ್ಲಿ ಟ್ರಾನ್ಸ್ಪೋರ್ಟ್ ಎಂಜಿನಿಯರಿಂಗ್ ಕೋರ್ಸ್ ಪರಿಚಯಿಸಲಾಗಿದೆ.

ಶೈಕ್ಷಣಿಕ ಅರ್ಹತೆ

ಸ್ನಾತಕೋತ್ತರ ಹಂತದಲ್ಲಿ ಮಾತ್ರ ಟ್ರಾನ್ಸ್ಪೋರ್ಟ್ ಎಂಜಿನಿಯರಿಂಗ್ ಕೋರ್ಸ್ ದೊರೆಯುತ್ತದೆ (ಎಂಇ ಇನ್ ಟ್ರಾನ್ಸ್ಪೋರ್ಟ್ ಎಂಜಿನಿಯರಿಂಗ್). ಈ ಕೋರ್ಸ್ಗೆ ಸೇರಲು ಇಚ್ಛಿಸುವವರು ಬಿಇ ಪದವಿ ಪಡೆದಿರಬೇಕು.

ಅಗತ್ಯ ಕೌಶಲಗಳು: ತಂತ್ರಜ್ಞಾನ ತಿಳಿವಳಿಕೆ, ಪ್ರಾಜೆಕ್ಟ್ ಕುರಿತು ಸಮಗ್ರ ಒಳನೋಟ, ಪ್ರತಿಯೊಂದು ಅಂಶಗಳ ಕುರಿತು ಜ್ಞಾನ, ಅತ್ಯುತ್ತಮ ಸಂವಹನ ಕಲೆ, ಕುತೂಹಲ ಮನೋಭಾವ, ಇಚ್ಛಾಶಕ್ತಿ, ನಿರ್ವಹಣಾ ಸಾಮರ್ಥ್ಯ, ಮೇಲ್ವಿಚಾರಣೆ ಶಕ್ತಿ, ಕೆಲಸದ ಬಗ್ಗೆ ವ್ಯಾಮೋಹ ಮತ್ತು ವಿನ್ಯಾಸ. ಎಲ್ಲಕ್ಕಿಂತ ಪ್ರಮುಖವಾಗಿ ಗೊತ್ತಿರದ ಸಂಗತಿ ತಿಳಿದುಕೊಳ್ಳುವ ಆಸಕ್ತಿ ಇರಬೇಕು.

ಉದ್ಯೋಗಾವಕಾಶ: ಕಟ್ಟಡ ನಿರ್ಮಾಣ, ರೈಲ್ವೆ ಇಲಾಖೆ, ಸೇನಾಪಡೆ, ಎಂಜಿನಿಯರಿಂಗ್ ಸೇವೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇಲಾಖೆ, ವಿಶ್ವವಿದ್ಯಾನಿಲಯ, ಖಾಸಗಿ ಕನ್ಸಲ್ಟೆನ್ಸಿಯಲ್ಲಿ ಅವಕಾಶಗಳಿರುತ್ತವೆ.

ವೇತನ: ಸ್ನಾತಕೋತ್ತರ ಪೂರೈಸಿದ ಪದವೀಧರರು ಆರಂಭದಲ್ಲೇ 25 ಸಾವಿರ ರೂಪಾಯಿ ವರೆಗೂ ಸಂಬಳ ಪಡೆಯಬಹುದು. ವ್ಯಕ್ತಿಯ ಸಾಮರ್ಥ್ಯ ಹಾಗೂ ಕೌಶಲದ ಆಧಾರದ ಮೇಲೆ ವೇತನ ನಿರ್ಧರಿಸಲಾಗುತ್ತದೆ.

ತಂತ್ರಜ್ಞಾನದ ಜತೆ ಕಾನೂನು ಟ್ರಾನ್ಸ್ಪೋರ್ಟ್

ಎಂಜಿನಿಯರಿಂಗ್ಗಳ ಸಹಾಯವಿಲ್ಲದೆ ಆಕಾಶಕ್ಕೆ ರಾಕೆಟ್ ಕೂಡಾ ಹಾರಲಾರದು. ಪ್ರಮುಖವಾಗಿ ಬೃಹತ್ ಪ್ರಮಾಣದ ಪೈಪ್ಲೈನ್, ಸುರಂಗಮಾರ್ಗ, ಜಲಮಾರ್ಗ, ಹೆದ್ದಾರಿ, ಬಂದರು, ವಿಮಾನಯಾನ, ಕರಾವಳಿ, ನಗರೀಕರಣ ಯೋಜನೆ ಕ್ಷೇತ್ರಗಳಲ್ಲಿ ಇವರ ಸಹಾಯ ಹೆಚ್ಚು ಪಡೆದುಕೊಳ್ಳಲಾಗುತ್ತಿದೆ. ಹೀಗಾಗಿ ಇವರು ತಂತ್ರಜ್ಞಾನದ ಜತೆ ಕಾನೂನು ಜ್ಞಾನ, ಪ್ರಾದೇಶಿಕ- ಆರ್ಥಿಕ ತಿಳಿವಳಿಕೆ, ಸಮುದಾಯದ ಮೌಲ್ಯಗಳ ಅರಿವು ಹೊಂದಿರಬೇಕು.

ಶಿಕ್ಷಣ ಸಂಸ್ಥೆಗಳ ವಿವರ

* ಜಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರಜಂ, ಶ್ರೀಕಾಕುಳಂ (www.gmrit.org)

* ಐಐಎಸ್ಸಿ ಬೆಂಗಳೂರು, ಸಿವಿಲ್ ಎಂಜಿನಿಯರಿಂಗ್ ವಿಭಾಗ http://www.civil.iisc.ernet.in

* ಜವಾಹರಲಾಲ್ ನೆಹರೂ ತಾಂತ್ರಿಕ ಹಾಗೂ ಎಂಜಿನಿಯರಿಂಗ್ ಕಾಲೇಜು- http://www.jntu.ac.in

* ಐಐಟಿ ಮುಂಬೈ, ಸಿವಿಲ್ ಎಂಜಿನಿಯರಿಂಗ್ ವಿಭಾಗ, (http://www.civil.iitb.ac.in)

* ಐಐಟಿ ಖರಗ್ಪುರ (http://www.iitkgp.ac.in)

* ಐಐಟಿ, ಜೈಪುರ- http://mnit.ac.in, ಭೋಪಾಲ್-http://www.manit.ac.in, ಕೋಲ್ಕತ್ತ http://www.nitc.ac.in, ಪಟ್ನಾ-http://www.nitp.ac.in ಮೊದಲಾದ ವೆಬ್ಸೈಟ್ ಪರಿಶೀಲಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.