ಬೆಂಗಳೂರು: ಸುವರ್ಣ ಗ್ರಾಮೋದಯ ಯೋಜನೆಯಡಿ 400 ಕೋಟಿ ವೆಚ್ಚದಲ್ಲಿ 1000 ಗ್ರಾಮಗಳ ಅಭಿವೃದ್ಧಿ ಸೇರಿದಂತೆ ಗ್ರಾಮೀಣ ಪ್ರದೇಅಭಿವೃದ್ಧಿಗೆ ಈ ಸಲದ ಬಜೆಟ್ನಲ್ಲಿ 6,896 ಕೋಟಿ ಮೀಸಲಿಡಲಾಗಿದೆ.

ಇದರಲ್ಲಿ ಕೇಂದ್ರ ಸರ್ಕಾರದ ಅನುದಾನಗಳು ಕೂಡ ಸೇರಿವೆ. ಸುವರ್ಣ ಗ್ರಾಮೋದಯ ಯೋಜನೆಯ 4ನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಜತೆಗೆ 5ನೇ ಹಂತದ ಯೋಜನೆಗೂ ಹಣ ಮೀಸಲಿಡಲಾಗಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಪಹಣಿ (ಆರ್ಟಿಸಿ) ಸೇರಿದಂತೆ ಇತರ ಕೆಲ ಸೇವೆಗಳನ್ನು ನೀಡಲು ತೀರ್ಮಾನಿಸಿದ್ದು, ಇದಕ್ಕೆ ಪೂರಕವಾಗಿ ಅಲ್ಲಿನ ವ್ಯವಸ್ಥೆ ಬಲಪಡಿಸಲಾಗುವುದು.

* ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು, ಉದ್ಯೋಗ ಸೃಷ್ಟಿ ಮತ್ತು ನೈರ್ಮಲ್ಯಕ್ಕೆ ಈ ವರ್ಷವೂ ಆದ್ಯತೆ. 2981 ಕಿ.ಮೀ. ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೂ ಒತ್ತು.

* ಪ್ರತಿ ಕ್ಷೇತ್ರದ 20 ಕಿ.ಮೀ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯನ್ನು ಪೂರ್ಣಗೊಳಿಸುವುದು. ಹೊಸದಾಗಿ 30 ಕಿ.ಮೀ ರಸ್ತೆ ಅಭಿವೃದ್ಧಿಗೂ ಚಾಲನೆ.

* 282 ಗ್ರಾಮ ಪಂಚಾಯಿತಿಗಳಿಗೆ ರೂ 20 ಲಕ್ಷ ವೆಚ್ಚದಲ್ಲಿ ಕಟ್ಟಡಗಳ ನಿರ್ಮಾಣ.

* ಎಂಟು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಮ ಪಂಚಾಯಿತಿಗಳಿಗೆ 10 ಲಕ್ಷ ರೂಪಾಯಿವರೆಗೆ ನಿರ್ಬಂಧ ರಹಿತ ಅನುದಾನ.

* ಪ್ರತಿ ಜಿಲ್ಲಾ ಪಂಚಾಯಿತಿಗೆ ಎರಡು ಕೋಟಿ ಮತ್ತು ಪ್ರತಿ ತಾಲ್ಲೂಕು ಪಂಚಾಯಿತಿಗೆ ಒಂದು ಕೋಟಿ ನಿರ್ಬಂಧ ರಹಿತ ಅನುದಾನ.

* ಪಂಚಾಯತ್ ರಾಜ್ ಸಂಸ್ಥೆಗಳಿಗೆ ಪ್ರೋತ್ಸಾಹಧನವಾಗಿ ರೂ 390 ಕೋಟಿ ಕಾರ್ಯದಕ್ಷತೆ ಅನುದಾನ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.