ಶನಿವಾರ, ಮಾರ್ಚ್ 6, 2021
31 °C

ಸಿಂಡಿಕೇಟ್‌ ಸದಸ್ಯ ಹಕೀಂಗೆ ಪಿಎಚ್‌.ಡಿ: ತನಿಖೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಅಬ್ದುಲ್‌ ಹಕೀಂ ಅವರಿಗೆ ನೀಡಲಾಗಿರುವ ಪಿಎಚ್‌.ಡಿ ಬಗ್ಗೆ ತನಿಖೆ ನಡೆಸುವಂತೆ ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಆದೇಶಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಯುಜಿಸಿ ನಿಯಮಗಳನ್ನು ಗಾಳಿಗೆ ತೂರಿ, ಅಬ್ದುಲ್ ಹಕೀಂ ಅವರಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಗಿದೆ ಎಂದು ಆರೋಪಿಸಿ ವಿಧಾನಪರಿಷತ್‌ ಸದಸ್ಯ ಪ್ರೊ. ಎಸ್‌.ವಿ.ಸಂಕನೂರ ಕಳೆದ ಜೂನ್‌ 18ರಂದು ದೇಶಪಾಂಡೆಯವರಿಗೆ ದೂರು ನೀಡಿದ್ದರು. ಇದನ್ನು  ಆಧರಿಸಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತನಿಖೆ ನಡೆಸುವಂತೆ ಸಚಿವರು ಜುಲೈ 15ರಂದು ಸೂಚಿಸಿದ್ದಾರೆ. ಅಲ್ಲದೆ ತಪ್ಪು ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ತಿಳಿಸಿದ್ದಾರೆ.

ಪ್ರಕರಣದ ತನಿಖೆ ನಡೆಸಿ, ವರದಿ ನೀಡುವಂತೆ ಇದೀಗ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್‌ ಮೀನಾ ವಿಶ್ವವಿದ್ಯಾಲಯದ ಕುಲಸಚಿವ ವಿಜಯ ಪೂಣಚ್ಚ ತಂಬಂಡ ಅವರಿಗೆ ಪತ್ರ ಬರೆದಿದ್ದಾರೆ. ಪ್ರಕರಣದ ಕುರಿತು ‘ಪ್ರಜಾವಾಣಿ’ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು.

ಇವನ್ನೂ ಓದಿ
ಬಹುತೇಕ ಮಾಧ್ಯಮ ಸಂಸ್ಥೆಗಳು ಸುದ್ದಿಮನೆಯನ್ನು ಟೊಳ್ಳಾಗಿಸಿವೆ
ಕನ್ನಡ ಮಾಧ್ಯಮವೃಕ್ಷ ಕೊಳೆಯುತ್ತಿದೆಯೇ?
ಬ್ಲ್ಯಾಕ್‌ಮೇಲ್ ಆರೋಪ, ‘ಪಬ್ಲಿಕ್‌ ಟೀವಿ’ ಇನ್‌ಪುಟ್ ಮುಖ್ಯಸ್ಥ ಹೇಮಂತ್ ಸೆರೆ
ಬ್ಲ್ಯಾಕ್‌ಮೇಲ್ ಮಾಡಿದ್ದ ಸಿಬ್ಬಂದಿ ವಜಾ: ಪಬ್ಲಿಕ್ ಟಿ.ವಿ. ರಂಗನಾಥ್ ಸ್ಪಷ್ಟನೆ
ನಕಲಿ ಅಂಕಪಟ್ಟಿ ಸಲ್ಲಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ., ಪಿಎಚ್‌.ಡಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು