ಬುಧವಾರ, ಮೇ 18, 2022
28 °C

ಸಿಇಟಿ ಆನ್‌ಲೈನ್ ಕೌನ್ಸೆಲಿಂಗ್ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಜೂನ್ 9ರಂದು ನಗರದ ಡಾ.ಟಿ.ತಿಮ್ಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಆನ್‌ಲೈನ್ ಕೌನ್ಸೆಲಿಂಗ್ ನಡೆಸಲಿದೆ.ಪೋಷಕರು ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಜ್ಞರು ಉತ್ತರ ನೀಡಲಿದ್ದಾರೆ. ಕಾಲೇಜು ವತಿಯಿಂದ ಬಂಗಾರಪೇಟೆ, ಕೋಲಾರ, ಮುಳಬಾಗಲು ಮತ್ತು ಕೆಜಿಎಫ್ ನಗರದಿಂದ ಉಚಿತ ವಾಹನ ಸೌಲಭ್ಯ ಏರ್ಪಡಿಸಲಾಗಿದೆ.ಕೋಲಾರದಿಂದ ಬೆಳಿಗ್ಗೆ ಎಂಟು ಗಂಟೆಗೆ ಹಳೇ ಬಸ್ ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಡೂಂಲೈಟ್, ಎಸ್‌ಎನ್‌ಆರ್ ಆಸ್ಪತ್ರೆ, ಇಟಿಸಿಎಂ ಆಸ್ಪತ್ರೆಯಿಂದ, ಮುಳಬಾಗಲಿನಿಂದ ಸೌಂದರ್ಯ ಪಾರಡೈಸ್, ಅಂಬೇಡ್ಕರ್ ವೃತ್ತ, ಮುತ್ಯಾಲಪೇಟೆ ಮತ್ತು ಕೆಜಿಎಫ್ ರಸ್ತೆಯ ದರ್ಗಾ ಕಡೆಯಿಂದ, ಬಂಗಾರಪೇಟೆಯಿಂದ ಅಮರಾವತಿನಗರ, ಇಂದಿರಾನಗರ, ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ವಿವೇಕಾನಂದ ನಗರದಿಂದ ಉಚಿತ ಬಸ್‌ಗಳನ್ನು ಏರ್ಪಡಿಸಲಾಗಿದೆ. ಕೌನ್ಸೆಲಿಂಗ್ ಶಿಬಿರವನ್ನು ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಉದ್ಘಾಟಿಸಲಿದ್ದಾರೆ ಎಂದು ಪ್ರಾಂಶುಪಾಲ ಡಾ. ಸೈಯದ್ ಆರೀಫ್ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.